Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

ವಿಕಾಸದ ಬೆಳಕು ಹರಿಸುತ್ತಿರುವ ಮುಖ್ಯ ಕಾರ್ಯಾಲಯ...

Team Udayavani, Mar 16, 2024, 12:56 PM IST

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

ರಾಜಕೀಯ ಶಾಸ್ತ್ರದ ಆಸಕ್ತಿ ಹೊಂದಿರುವಂತಹ ನನ್ನಂತವರಿಗೆ ಕಾಶ್ಮೀರ ಪ್ರವಾಸದ ಮುಖ್ಯ ಉದ್ದೇಶ ಬರೇ ಕಾಶ್ಮೀರದ ಪ್ರಕೃತಿಯ ಮಡಿಲ ಸೌಂದರ್ಯತೆಯನ್ನು ಸವಿಯುವುದು ಮಾತ್ರವಲ್ಲ ಇದರ ಜೊತೆಗೆ ಅವಳಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿ ಅನ್ನಿಸಿ ಕೊಂಡ ಲಾಲ್ ಚೌಕ್ ನಲ್ಲಿ ಕಾರ್ಯ ನಿ‌ರ್ವಹಿಸುತ್ತಿರುವ “ಕಾಶ್ಮೀರ ಶಾಸನ ಸಭೆಯ” ಸ್ಥಿತಿ ಗತಿ ಹೇಗಿದೆ ಮತ್ತು ಇದಕ್ಕೆ ತಾಗಿಕೊಂಡಿರುವ ಅಭಿವೃದ್ಧಿಯ ವಿಕಾಸ ಸೌಧ ಅನ್ನಿಸಿಕೊಂಡ ಸೆಕ್ರೆಟೇರಿಯೇಟ್ ಕಾರ್ಯ ವೈಖರಿ ಹೇಗಿದೆ ಅನ್ನುವುದನ್ನು ವೀಕ್ಷಿಸ ಬೇಕೆಂಬ ಕುತೂಹಲ ಬರುವುದು ಸ್ವಾಭಾವಿಕ.

ಕಾಶ್ಮೀರ ಸರ್ಕಾರದ ಸೆಕ್ರೆಟರಿಯೇಟ್ ವಿಭಾಗದ ಅಧಿಕಾರಿಗಳ ಸಹಾಯ ಪಡೆದುಕೊಂಡು ಮೊದಲು ನೇರವಾಗಿ ಪ್ರವೇಶ ಮಾಡಿದ್ದು ಕಾಶ್ಮೀರದ ಸೆಕ್ರೆಟರಿಯೇಟ್ ಪ್ರಾಂಗಣಕ್ಕೆ.ಆರು ಅಂತಸ್ತಿನ ಭವ್ಯ ಕಟ್ಟಡ.ಮೂರನೇ ಮಹಡಿಯಲ್ಲಿ ಮುಖ್ಯ ಕಾರ್ಯದಶಿ೯ಗಳ ಕೊಠಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಡಳಿತ ಕಛೇರಿ ಐದನೇ ಮಹಡಿಯಲ್ಲಿ ಇದೆ.
ನಮ್ಮ ವಿಕಾಸ ಸೌಧಕ್ಕೆ ಜನ ನುಗ್ಗುವ ತರದಲ್ಲಿ ಸಾರ್ವಜನಿಕರ ತಿರುಗಾಟ ತುಂಬಾ ಕಡಿಮೆ. ಕಟ್ಟಡದ ಸುತ್ತಮುತ್ತ ಭದ್ರ ಕಾವಲು ಪಡೆ ಇದೆ. ಅಧಿಕಾರಿಗಳ ಜೊತೆಗೆ ಹೇೂದ ಕಾರಣ ನಮ್ಮ ಪ್ರವೇಶ ಸುಗಮವಾಗಿತ್ತು.

ಅಭಿವೃದ್ಧಿ ಖಾತೆಯ ಪ್ರಧಾನ ಕಾರ್ಯ ದಶಿ೯ಗಳ ಆಡಳಿತದ ಕಚೇರಿಯಲ್ಲಂತೂ ನಮಗೆ ರಾಜಾತಿಥ್ಯ.ಕಾರಣ ನಮ್ಮವರೇ ಅಲ್ಲಿನ ಹಿರಿಯ ಪ್ರಧಾನ ಕಾರ್ಯದರ್ಶಿ. ನಾವು ಕರ್ನಾಟಕದಿಂದ ಬಂದಿದ್ದೇವೆ ಅನ್ನುವುದು ತಿಳಿದ ತಕ್ಷಣವೇ ನಮ್ಮನ್ನು ಕೂರಿಸಿ ಉಪಚರಿಸಿದ್ದು ಮಾತ್ರವಲ್ಲ ಅಲ್ಲಿನ ಅಧಿಕಾರಿಗಳು ಇಡೀ ಆಡಳಿತದ ಕುರಿತಾಗಿ ಮಾಹಿತಿ ನೀಡಿದ್ದು ಮಾತ್ರವಲ್ಲ ಕಾಶ್ಮೀರದ ಅಭಿವೃದ್ಧಿಯ ಯೇೂಜನೆಯ ಚಿತ್ರಣವನ್ನೆ ನಮ್ಮಮುಂದೆ ತಂದಿಟ್ಟರು.

ಅನಂತರದಲ್ಲಿ ನಾವು ನೇರವಾಗಿ ಪ್ರವೇಶ ಮಾಡಿದ್ದು ಕಾಶ್ಮೀರ ವಿಧಾನ ಸೌಧದ ಸಂಕಿರಣ.ಅಲ್ಲಿನ ಚಿತ್ರಣ ಸಂಪೂಣ೯ ಭಿನ್ನವಾಗಿತ್ತು.ಎಲ್ಲೊ ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಕೂತಿದ್ದರು ಅನ್ನುವುದಕ್ಕಿಂತ ತಿರುಗಾಡುತ್ತಿದ್ದರು..ಶಾಸನ ಸಭೆ ನಡೆಯುವ ಹಾಲ್ ಬಾಗಿಲಿಗೆ ಬೀಗ ಹಾಕಿದ್ದು ಕಾಣತಿತ್ತು. ಶಾಸನ ಸಭೆ ಬೆಳಕು ಕಾಣದೆ ಆರೇಳು ವರುಷಗಳು ಕಳೆದು ಹೇುಾಯಿತು ಅನ್ನುವುದನ್ನು ಅಲ್ಲಿನ ಬಾಗಿಲಿಗೆ ಜಡಿದ ಬೀಗಗಳೆ ಸಾರಿ ಹೇಳುವಂತಿದೆ.ಹೊರಗಡೆ ಬಾಗಿಲಿನ ಗೇೂಡೆಗಳ ಮೇಲೆ ತೂಗು ಹಾಕಿದ ನಾಮಫಲಕಗಳು..”ನಾನು ಎಸೆಂಬ್ಲಿ ಹಾಲ್ ;” “ನಾನು ಮುಖ್ಯ ಮಂತ್ರಿ ಕಛೇರಿ “; ನಾನು ಸ್ಪೀಕರ್‌ ಕೊಠಡಿ.”.ಅನ್ನುವುದಕ್ಕೆ ದಾರಿತೇೂರಿಸುವಂತಿದೆ ಬಿಟ್ಟರೆ ಒಂದೇ ಒಂದು ನರಪಿಳ್ಳೆ ಅಲ್ಲಿಲ್ಲ.

ಒಂದು ಪಕ್ಕದ ಮೂಲೆ ಕೇೂಣೆಯಲ್ಲಿ ವಿಧಾನ ಸಭಾ ಕಾರ್ಯದರ್ಶಿಗಳು ಕೂತಿರುವುದು ಕಾಣುತ್ತದೆ..ಅವರು ನಮ್ಮನ್ನು ನೇೂಡಿದ ತಕ್ಷಣವೇ ನಮ್ಮನ್ನುಕರೆದು ಪರಿಚಯಿಸಿ ಮಾತನಾಡಿಸಿ ಕಳುಹಿಸಿ ಕೊಟ್ಟರು. ಇದಿಷ್ಟು ಒಳಗಿನ ಒಂದಿಷ್ಟು ರಾಜಕೀಯ ಚಿತ್ರಣವಾದರೆ ಹೊರಗಿನ ಚಿತ್ರಣ ಹೇಗಿದೆ ನೇೂಡುವ.

ಕಾಶ್ಮೀರದ ಪ್ರಧಾನ ಕೇಂದ್ರ ಸ್ಥಳ ಶ್ರೀನಗರ.ಈ ಶ್ರೀನಗರದಲ್ಲಿ ಮೊದಲಿನಿಂದಲೂ ಬಹು ಚರ್ಚೆ ಗೆ ಗ್ರಾಸವಾದ ಸ್ಥಳವೆಂದರೆ ಲಾಲ್ ಚೌಕ್.ಇಲ್ಲಿನ ಇತಿಹಾಸವೆಂದರೆ 2019ರ ತನಕ ಈ ಚೌಕದಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿದ್ದೇ ಇಲ್ಲ.ಆದರೆ ಸಂವಿಧಾನದಲ್ಲಿ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ವಿಧಿ 370 ಮತ್ತು 35 (ಅ) 2019ರಲ್ಲಿ ರದ್ದುಗೊಳಿಸಿದ ಮೇಲೆ ಭಾರತದ ತ್ರಿವರ್ಣ ಧ್ವಜ ಪ್ರತಿನಿತ್ಯ ಇಲ್ಲಿ ಹಾರಾಡುತ್ತಿದೆ ರಾರಾಜಿಸುತ್ತಿದೆ.ಎಲ್ಲಿಯವರೆಗೆ ತ್ರಿವರ್ಣ ಗಳು ರಾರಾಜಿಸುತ್ತಿವೆ ಅಂದರೆ ರಾತ್ರಿಯ ಹೊತ್ತಿನಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿ ಹಾಕಿರುವ ಡೆಕೇೂರೆಟ್ಯೂ ಲೈಟ್ ಗಳುಕೂಡಾ ತ್ರಿವರ್ಣ ಗಳನ್ನೆ ಪ್ರತಿಫಲಿಸುತ್ತಿವೆ.ಇದು ನಾವು ಕಾಣುವ ಕಾಶ್ಮೀರ ನೆಲದ ಬದಲಾವಣೆ.

ನಮ್ಮ ಹಿರಿಯ ರಾಜಕಾರಣಿಗಳು ಅನ್ನಿಸಿಕೊಂಡವರು ಎಲ್ಲಿ ವೈಶಂಪಾಯನ ಸರೇೂವರದಲ್ಲಿ ಅಡಗಿರಬಹುದು ಎಂದು ಹುಡುಕಿಕೊಂಡು ಶ್ರೀನಗರವನ್ನೆ ಸುತ್ತಿ ನೇೂಡಿದಾಗ ಅವರ ಸಿರಿವಂತಿಕೆಯನ್ನು ಸಾರುವ ಏಳು ಸುತ್ತಿನ ಕೇೂಟೆಯ ಭವ್ಯ ಬಂಗಲೆಗಳು ಜನರಿಲ್ಲದೆ ಬಿಕೊ ಅನ್ನುವ ಪರಿಸ್ಥಿತಿ. ಸದ್ಯಕ್ಕಂತೂ ಅವರೆಲ್ಲರೂ ದೇಶದ ರಾಜಧಾನಿಯತ್ತ ವಲಸೆ ಹೇೂಗಿದ್ದಾರೆ ಅನ್ನುವ ಸುದ್ದಿ. ಒಂದು ಕಾಲದಲ್ಲಿ”ನಾನೇ ರಾಷ್ಟ್ರಪತಿ ನನ್ನ ಮಗನೇ ಪ್ರಧಾನಿ ಎಂದು ಘೇೂಷಿಸಿಕೊಂಡ ಅಪ್ಪಮಗರನ್ನು ಕಾಶ್ಮೀರದಲ್ಲಿ ಹುಡುಕಿ ನೇೂಡುವುದೇ ಅತೀ ದೊಡ್ಡ ಸಾಹಸ.

|ಹಾಗಾದರೆ ಅಲ್ಲಿನ ಜನರ ಮನಸ್ಸು ಏನು ಹೇಳುತ್ತದೆ.?ಸದ್ಯಕ್ಕಂತೂ ರಾಜಕಾರಣಿಗಳ; ಚುನಾವಣೆಗಳ;ಹೇೂರಾಟಗಳ ಬಾಂಬ್‌ ಸಿಡಿಲುಗಳ ಪಿಡುಗಿನಿಂದ ದೂರವಿದ್ದು ನೆಮ್ಮದಿಯಲ್ಲಿ ಇದ್ದಾರೆ. ಹಾಗಂತ ಅಲ್ಲಿನ ಜನ ತಮಗೆ ಜನಪ್ರತಿನಿಧಿ ಸರ್ಕಾರದ ವ್ಯವಸ್ಥೆ ಬೇಡ ಅನ್ನುವ ಮನ ಸ್ಥಿತಿ ಇಲ್ಲ..ಜಾತಿ ಮತ ಧರ್ಮ ಮೀರಿ ಸರ್ವರನ್ನೂ ಸಮ ಭಾವ ಸಮ ಚಿತ್ತದಿಂದ ಕಾಣುವ ಅಭಿವೃದ್ಧಿ ಪರವಾದ ಸರಕಾರ ಬೇಕು ಅನ್ನುವ ನಿರೀಕ್ಷೆಯಲ್ಲಿ ಇರುವುಂದತೂ ಸತ್ಯ.


*ಲೇಖಕರು:ಪ್ರತ್ಯಕ್ಷ ದಶಿ೯ :ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ, ಉಡುಪಿ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.