ಸ್ವಾವಲಂಬಿ ಜೀವನಕ್ಕೆ ಈ ರೈತನೇ ಮಾದರಿ ! ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ
ಮಲ್ಲಿಗೆ ಹೂವು ಬೆಳೆಯುವುದರಿಂದ ಕಡಿಮೆ ಖರ್ಚು, ಅಧಿಕ ಲಾಭ
Team Udayavani, Feb 10, 2022, 12:47 PM IST
ಕುರುಗೋಡು : ಸ್ವಾವಲಂಬಿ ಜೀವನಕ್ಕೆ ಈ ರೈತರೇ ಮಾದರಿ. ಹೌದು 25 ಸೆಂಟ್ಸ್ ಜಮೀನು ನಲ್ಲಿ ಮಲ್ಲಿಗೆ ಹೂವಿನ ಗಿಡಗಳು, ಬೆಳೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ವರ್ಷಕ್ಕೆ ಮನೆಯ ಖರ್ಚು, ಸಣ್ಣ ಪುಟ್ಟ ಸಾಲ ತೀರಿಸಿಕೊಂಡು 30 ರಿಂದ 40 ಸಾವಿರ ಮಲ್ಲಿಗೆ ಹೂವಿನಿಂದ ಆದಾಯ ಗಳಿಸುತ್ತಿದ್ದಾರೆ.
ರೈತರು ತಮ್ಮ ಭೂಮಿಯಲ್ಲಿ ಒಂದೇ ಬೆಳೆ ಬೆಳೆಯುವ ಕಾಯಕವನ್ನು ಹೊಂದಿರುತ್ತಾರೆ. ಆದ್ರೇ ಇಲ್ಲಿ ಗ್ರಾಮೀಣ ಭಾಗದ ರೈತರು ತಮ್ಮ 25 ಸೆಂಟ್ಸ್ ಭೂಮಿಯಲ್ಲಿ 200 ಮಲ್ಲಿಗೆ ಹೂವಿನ ಗಿಡಗಳನ್ನು ನೆಟ್ಟು, ಅದರೊಂದಿಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯವನ್ನು ಗಳಿಸುತ್ತಾ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಅದಕ್ಕೆ ಈ ರೈತರೆ ಮಾದರಿ.
ಕುರುಗೋಡು ಪಟ್ಟಣ ಸಮೀಪದ ಮಣ್ಣೂರು ಗ್ರಾಮದ ನಿವಾಸಿಗಳಾದ ಮೂಕಮ್ಮನ ಮಗ ಹನುಮಂತ,
ತಳವಾರ ವಿರೂಪಮ್ಮಾ ಎನ್ನುವ ರೈತರು ಸುಮಾರು 2 ವರ್ಷಗಳಿಂದ ಕೃಷಿಯನ್ನು ನಂಬಿ ಜೀವನವನ್ನು ನಡೆಸುತ್ತಿದ್ದಾರೆ. ಅದರಲ್ಲಿ ಮೊದಲಿನಿಂದಲೂ ಭತ್ತ ಬೆಳೆಯುವುದರ ಜೊತೆಗೆ ಮಲ್ಲಿಗೆ ಹೂ ಬೆಳೆಯುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಲ್ಲಿಗೆ ಹೂವಿನ ಗಿಡಗಳನ್ನು ನೆಟ್ಟು ಉತ್ತಮ ಆದಾಯವನ್ನು ಪಡೆದಿದ್ದಾರೆ.
ಇವರ ತಮ್ಮ 25 ಸೆಂಟ್ಸ್ ಭೂಮಿಯಲ್ಲಿ 200 ಮಲ್ಲಿಗೆ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ ಇದರ ಜೊತೆಗೆ ವಿವಿಧ ರೀತಿಯ ಮಿಶ್ರ ಬೇಸಾಯದ ಬೆಳೆಗಳನ್ನು ಬೆಳೆಯಲು ಗುರಿ ಹೊಂದಿದ್ದಾರೆ.
ಭತ್ತಕ್ಕೆ ಸುಮಾರು 1 ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿದರು ಇಳುವರಿ ಕುಂಟಿತ ಗೊಂಡು ಹಾಕಿದ ಬಂಡವಾಳ ಪಡೆಯುವುದೇ ಡೌಟ್ ಅದರಲ್ಲಿ ಮಲ್ಲಿಗೆ ಹೂ ಬೆಳೆದಲ್ಲಿ ಎರಡು ವರ್ಷಕ್ಕೆ 20 ಸಾವಿರ ಖರ್ಚು, ಆದಾಯ ಮಾತ್ರ ಮನೆಯ ಸಣ್ಣ ಪುಟ್ಟ ಸಾಲ ತೀರಿಸಿಕೊಂಡು, ನಿತ್ಯ ಮನೆಯ ಖರ್ಚು ನಿಭಾಯಿಸಿಕೊಂಡು ವರ್ಷ ಕ್ಕೆ 30 ರಿಂ 40 ಸಾವಿರ ರೂಪಾಯಿ ಆದಾಯ ಉಳಿತಾಯ ಮಾಡುತ್ತಿದ್ದಾರೆ.
ಕಂಪ್ಲಿ ಹತ್ತಿರ ಬೆಳಗೋಡ್ ಗ್ರಾಮದಲ್ಲಿ ಮಲ್ಲಿಗೆ ಹೂ ಸಸಿಗಳನ್ನು ಪಡೆದು ಕೊಂಡು ಆರಂಭದಲ್ಲಿ ತಮ್ಮ ಜಮೀನು ನಲ್ಲಿ ಮಾತ್ರ ಹೂವಿನ ಗಿಡ ನೆಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಎಕರೆ ಯಲ್ಲಿ ಹೂವಿನ ಗಿಡಗಳನ್ನು ಹಾಕಬೇಕು ಎನ್ನುವ ನಿರ್ಧಾರ ಇದೆ, ಇದರಿಂದ ಉತ್ತಮ ಆದಾಯವಿದೆ ಎನ್ನುತಿದ್ದಾರೆ.
ಕಳೆದ ಎರಡು ವರ್ಷದಲ್ಲಿ 25 ಸೆಂಟ್ಸ್ ಎಕರೆ ಭೂಮಿಯಲ್ಲಿ ಮಲ್ಲಿಗೆ ಹೂವಿನ ಗಿಡಗಳಿಗೆ 15 ರಿಂದ 20 ಸಾವಿರ ರೂಪಾಯಿ ಕೂಲಿ, ಗೊಬ್ಬರ, ಕಳೆವು, ಇನ್ನಿತರ ಕ್ಕೆ ಖರ್ಚು ಆಗಿದೆ. ಕಳೆದ ಎರಡು ವರ್ಷ ಗಳಲ್ಲಿ ಅತಿ ಹೆಚ್ಚು ಮಲ್ಲಿಗೆ ಹೂವು ಮಾರಾಟದಿಂದ ಅಧಿಕ ಲಾಭ ಪಡೆದಿದ್ದೆವೆ ಎಂದು ತಿಳಿಸಿದರು.
ಖರ್ಚು :
200 ಮಲ್ಲಿಗೆ ಹೂವಿನ ಗಿಡಗಳಿಗೆ ವಾರಕ್ಕೆ ಒಂದು ಬಾರಿ ಉಳದ್ದು ಮದ್ದು ಸಿಂಪಡಣೆಗೆ 950 ರೂಪಾಯಿ ಮತ್ತು ತಿಂಗಳಿಗೊಂದು ಬಾರಿ ಮಲ್ಲಿಗೆ ಹೂವು ಚಿರುಗಿ ಮದ್ದು ಸಿಂಪಡಣೆಗೆ 1200 ರೂಪಾಯಿ ಖರ್ಚು ಆಗುತ್ತದೆ.
15 ದಿನಗಳಿಗೊಮ್ಮೆ ಕಳೆವ್ ತೆಗಿತಿವಿ. ನಾಲ್ಕುಐದು ಕೂಲಿಗಳು ಬರ್ತಾರೆ ಇಲ್ಲದಿದ್ದಾರೆ ಮನೆಯವರೆ ನೋಡಿಕೊಂಡು ಹೋಗುತ್ತಾರೆ.
ಒಟ್ಟಾರೆಯಾಗಿ ಭತ್ತ ಬೆಳೆಯುವುದಕ್ಕಿಂತ ಮಲ್ಲಿಗೆ ಹೂವಿನ ಗಿಡಗಳನ್ನು ಹಾಕಿ, ಬೆಳೆಯುವುದರಿಂದ ಉತ್ತಮ ಆದಾಯ ಜೊತೆಗೆ ಉತ್ತಮ ಜೀವನ ನಡೆಸುತ್ತಿದ್ದೆವೆ ಎಂದು ರೈತರು ಸಂತಸ ವ್ಯಕ್ತ ಪಡಿಸಿಕೊಂಡರು.
ಒಂದು ಎಕರೆ ಭತ್ತ ಬೆಳೆಯಬೇಕಾದ್ರೆ ಎಕರೆಗೆ ಕನಿಷ್ಠ 30 ಸಾವಿರ ರೂಪಾಯಿ ಖರ್ಚು ಆರಂಭದಲ್ಲಿಯೇ ಮಾಡಬೇಕು. ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಯುವುದರಿಂದ ಪ್ರತಿನಿತ್ಯ ಆದಾಯ ಇದೆ. ಕಡಿಮೆ ಖರ್ಚು, ಆದಾಯ ಹೆಚ್ಚು ಇರುತ್ತದೆ. ಮನೆಯ ಸದಸ್ಯರೇ ಕೆಲಸ ಮಾಡಿದ್ರೇ ಉತ್ತಮ, ಹೂವಿನ ಬಿಡುವ ಪ್ರಮಾಣ ಹೆಚ್ಚಾದರೆ ಮಾತ್ರ ಎರಡು ಮೂರು ಕೂಲಿಗಳನ್ನು ಕರೆದುಕೊಂಡು ನಾವು ಸಹ ಕೆಲಸಮಾಡುತ್ತೇವೆ ಎಂದರು. ಮೈಭಾಗಿ ಕೆಲಸ ಮಾಡಬೇಕು. ಆಗ ಉತ್ತಮ ಅದಾಯ ಬರುತ್ತದೆ.
– ತಳವಾರ ವಿರೂಪಮ್ಮಾ ಹೂ ಬೆಳೆದ ರೈತ ಮಹಿಳೆ ಮಣ್ಣೂರು
– ಸುಧಾಕರ್ ಮಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.