ಚುನಾವಣೆ: ಮಸ್ಕಿ ಕ್ಷೇತ್ರದಲ್ಲಿ ಜೆಡಿಎಸ್-ಕೆಆರ್‌ಪಿಪಿ ಗೌಣ!
ಒಂದೇ ಬಾರಿ ಭೇಟಿಗೆ ಸೀಮಿತವಾದ ಗಾಲಿ ರೆಡ್ಡಿ | ಪಂಚರತ್ನ ಯಾತ್ರೆಯೂ ಇಲ್ಲ, ಅಭ್ಯರ್ಥಿ ಘೋಷಣೆಯೂ ಇಲ್ಲ
Team Udayavani, Feb 8, 2023, 11:06 AM IST
ಮಸ್ಕಿ: 2023ರ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಬಾರಿಯೂ ಮಸ್ಕಿ ಕ್ಷೇತ್ರದ ಪಾಲಿಗೆ ಜೆಡಿಎಸ್ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದ ಕೆಆರ್‌ಪಿ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದು, ಗೌಣವಾಗಿವೆ! ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ಮಸ್ಕಿಯಲ್ಲಿ ಜೆಡಿಎಸ್ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೊಸ ಅಲೆ ಸೃಷ್ಟಿಸುವ ಮೂಲಕ ಪ್ರಭಾವಿಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುವ ಉಮೇದು ವ್ಯಕ್ತಪಡಿಸಿದ್ದವು.
ಆದರೆ ಆರಂಭದಲ್ಲಿ ಒಂದೆರಡು ರಾಜಕೀಯ ಚಟುವಟಿಕೆ ಬಿಟ್ಟರೆ ಪುನಃ ತೆರೆಮರೆಗೆ ಸರಿದಿವೆ. ಈ ಬಾರಿಯಾದರೂ ಹೊಸ ಪಕ್ಷ, ಹೊಸ ಅಭ್ಯರ್ಥಿಗಳ ಪ್ರವೇಶ ಮಸ್ಕಿ ಕ್ಷೇತ್ರದಲ್ಲಿ ಆಗುತ್ತದೆ ಎನ್ನುವ ನಿರೀಕ್ಷೆ ಮತ್ತೂಮ್ಮೆ ಹುಸಿಯಾಗಿದೆ.
ನಿರೀಕ್ಷೆ ನಿರಾಸೆ:
ಪಂಚರತ್ನ ಯಾತ್ರೆ, ನೀರಾವರಿ ಕನಸು ಸೇರಿ ಹಲವು ಪ್ರಣಾಳಿಕೆಯನ್ನು ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದ ಜೆಡಿಎಸ್ ಮಸ್ಕಿ ಪಾಲಿಗೆ ಆರಂಭದಲ್ಲೇ ಸೊನ್ನೆ ಸುತ್ತಿದೆ. ಇಲ್ಲಿನ ರಾಘವೇಂದ್ರ ನಾಯಕ ಮೂಲಕ ಸ್ಥಳೀಯ ಚುನಾವಣೆಗಳನ್ನು ಎದುರಿಸಲು ಸಜ್ಜಾದ ಜೆಡಿಎಸ್ ಎಲ್ಲ ಬಿ ಫಾರಂ ನೀಡಿ ಲೋಕಲ್ ಫೈಟ್‌ನಲ್ಲಿ ಬಲಾಬಲ ಅಳೆಯಲು ಯತ್ನಿಸಿತ್ತು. ಆದರೆ ಮಿನಿ ಸಮರದಲ್ಲೇ ಸೊನ್ನೆ ಸುತ್ತಿದ್ದರಿಂದ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್‌ನಿಂದ ಇದುವರೆಗೂ ಅ ಧಿಕೃತ ಅಭ್ಯರ್ಥಿಯೂ ಘೋಷಣೆಯಾಗಿಲ್ಲ.
ಅಲ್ಲದೇ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗೆ ಬಂದು ಹೋದರೂ ಮಸ್ಕಿಗೆ ಮಾತ್ರ ಕಾಲಿಟ್ಟಿಲ್ಲ. ಆರಂಭ ಮಾತ್ರ ಅಬ್ಬರ: ಇನ್ನು ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮಸ್ಕಿಯಲ್ಲಿಆರಂಭದಲ್ಲಿ ಅಬ್ಬರಿಸಿದ್ದು ಬಿಟ್ಟರೆ ಮತ್ತೆ ಯಾವ ಚಟುವಟಿಕೆಯೂ ಇಲ್ಲ. ಪಕ್ಷದ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಇಲ್ಲಿನ ಹಲವರ ಸಭೆ ನಡೆಸಿ, ಎರಡು ದಿನ ವಾಸ್ತವ್ಯ ಹೂಡುವ ಮೂಲಕ ಪರ್ಯಾಯ ರಾಜಕೀಯಕ್ಕೆ ನಾಂದಿ ಹಾಡುತ್ತಾರೆ ಎನ್ನುವ ನಿರೀಕ್ಷೆಗಳಿದ್ದವು.
ಆದರೆ ಇವೆಲ್ಲವೂ ಈಗ ಪಲ್ಟಿ ಹೊಡೆದಿವೆ. ಆರಂಭದ ದಿನಗಳು ಬಿಟ್ಟರೆ ರೆಡ್ಡಿ ಪುನಃ ಮಸ್ಕಿಯತ್ತ ಮುಖ ಮಾಡಿಲ್ಲ. ಹೀಗಾಗಿ ಈ ಬಾರಿಯಾದರೂ ಪರ್ಯಾಯ ಪಕ್ಷ, ಅಭ್ಯರ್ಥಿಯ ಮುಖ ಕಾಣಲಿದೆ ಎನ್ನುವ ನಿರೀಕ್ಷೆ ಕೂಡ ಸುಳ್ಳಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಕೈ-ಕಮಲದ ನಡುವೆಯೇ ಫೈಟ್
ಪ್ರಾದೇಶಿಕ ಪಕ್ಷ, ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆಯೇ ಗೌಣವಾಗಿದ್ದರಿಂದ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಮತ್ತು ಬಿಜೆಪಿಯ ನೇರ ಫೈಟ್ ಖಾತ್ರಿ ಎನಿಸಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಸನಗೌಡ ತುರುವಿಹಾಳ ಅಭ್ಯರ್ಥಿಯಾಗುವುದು ಖಾತ್ರಿಯಾಗಿದ್ದು, ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್ ಬಹುತೇಕ ಅಂತಿಮ ಎನ್ನಲಾಗುತ್ತಿದೆ. ಹೀಗಾಗಿ ಉಪ ಚುನಾವಣೆ ಮಾದರಿಯಲ್ಲಿ ಈ ಸಾರ್ವತ್ರಿಕ ಚುನಾವಣೆಯಲ್ಲಿ ಇವೇ ಎರಡು ಪಕ್ಷ, ಅದೇ ಇಬ್ಬರು ವ್ಯಕ್ತಿಗಳ ನಡುವೆಯೇ ಚುನಾವಣೆ ಫೈಟ್ ನಡೆಯುವುದು ಖಚಿತ ಎನಿಸಿ¨
ಶುರುವಾದ ಒಳೇಟಿನ ಭೀತಿ
ಹೊಸ ಪಕ್ಷ, ಹೊಸ ಅಭ್ಯರ್ಥಿಗಳ ಪ್ರವೇಶ ಸಾಧ್ಯತೆ ಕಡಿಮೆ ಎನ್ನುವ ಕಾರಣಕ್ಕೆ ಈಗ ಅದೇ ಹಳೇ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಆದರೆ ಎರಡೂ ಕಡೆಗೂ ಪರಸ್ಪರ ಎದುರಾಳಿಗಳಿಗಿಂತ ಒಳೇಟಿನ ಭೀತಿ ಶುರುವಾಗಿದೆ. ಎರಡೂ ಕಡೆ ಆಂತರಿಕ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚುನಾವಣೆ ಹೊತ್ತಿಗೆ ಇದು ಯಾವ ಪರಿಣಾಮ ಬೀರುವುದೋ ಗೊತ್ತಿಲ್ಲ
ಮಲ್ಲಿಕಾರ್ಜುನ ಚಿಲ್ಕರಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.