

Team Udayavani, Jan 30, 2025, 12:05 PM IST
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಬುಧವಾರ (ಜ.29) ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 30 ಮಂದಿ ಸಾವ*ನ್ನಪ್ಪಿರುವ ದುರಂತ ನಡೆದಿತ್ತು. ಮತ್ತೊಂದೆಡೆ ಜಾರ್ಖಂಡ್ ನಲ್ಲಿ 27 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಕುಟುಂಬದ ಸದಸ್ಯ ಕುಂಭಮೇಳದಲ್ಲಿ ಪತ್ತೆಯಾಗಿರುವ ಘಟನೆ ನಡೆದಿರುವುದಾಗಿ ಪಿಟಿಐ ವರದಿ ಮಾಡಿದೆ.
ಜಾರ್ಖಂಡ್ ನ ಗಂಗಾಸಾಗರ್ ಯಾದವ್ ಎಂಬವರು 27 ವರ್ಷಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಮಹಾಕುಂಭ ಮೇಳದಲ್ಲಿ ಅಘೋರಿಯಾಗಿ ಪತ್ತೆಯಾಗಿದ್ದು, ಅವರ ಹೆಸರು ಬಾಬಾ ರಾಜ್ ಕುಮಾರ್ (65ವರ್ಷ) ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
1998ರಲ್ಲಿ ಗಂಗಾಸಾಗರ್ ಪಾಟ್ನಾಕ್ಕೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ಅಂದಿನಿಂದ ಈವರೆಗೂ ಗಂಗಾಸಾಗರ್ ಎಲ್ಲಿದ್ದಾರೆ ಎಂಬುದು ಕುಟುಂಬ ಸದಸ್ಯರಿಗೆ ಯಕ್ಷಪ್ರಶ್ನೆಯಾಗಿ ಉಳಿದಿತ್ತು. ಪತಿ ನಾಪತ್ತೆಯಾದ ನಂತರ ಪತ್ನಿ ಧಾನ್ವಾ ದೇವಿ ತನ್ನಿಬ್ಬರು ಮಕ್ಕಳಾದ ಕಮಲೇಶ್ ಮತ್ತು ವಿಮಲೇಶ್ ಅನ್ನು ಬೆಳೆಸಿದ್ದರು.
ಗಂಗಾಸಾಗರ್ ಅವರ ಕಿರಿಯ ಸಹೋದರ ಮುರಳಿ ಯಾದವ್ ಈ ಬಗ್ಗೆ ವಿವರಿಸಿದ್ದು ಹೀಗೆ: ಹಲವು ವರ್ಷಗಳ ಬಳಿಕ ಅಣ್ಣನ ಸುಳಿವು ಸಿಗದಿದ್ದಾಗ ನಾವು ನಮ್ಮ ನಿರೀಕ್ಷೆಯನ್ನು ಕಳೆದುಕೊಂಡಿದ್ದೇವು. ಆದರೆ ಮಹಾಕುಂಭಮೇಳಕ್ಕೆ ಭೇಟಿ ನೀಡಿದ್ದ ನಮ್ಮ ಕುಟುಂಬ ಸದಸ್ಯರೊಬ್ಬರು ಅಣ್ಣ ಗಂಗಾಸಾಗರ್ ಅವರನ್ನು ಗುರುತಿಸಿ ಫೋಟೊವನ್ನು ಮೊಬೈಲ್ ಗೆ ಕಳುಹಿಸಿಕೊಟ್ಟಿದ್ದರು. ಕೂಡಲೇ ನಾನು, ಅತ್ತಿಗೆ ಮತ್ತು ಇಬ್ಬರು ಮಕ್ಕಳು ಕುಂಭಮೇಳಕ್ಕೆ ತೆರಳಿದ್ದೇವು. ನಾವು ಅವರ ಮನವೊಲಿಸಿ ವಾಪಸ್ ಕರೆತರುವ ಯೋಚನೆಯಲ್ಲಿ ಹೋಗಿದ್ದೇವು. ಆದರೆ ನಾವು ಅಘೋರಿ ಬಾಬಾ ರಾಜ್ ಕುಮಾರ್ ಅವರನ್ನು ಭೇಟಿಯಾದಾಗ ತಾನು ಗಂಗಾಸಾಗರ್ ಯಾದವ್ ಎಂದು ಗುರುತಿಸಿಕೊಳ್ಳಲು ನಿರಾಕರಿಸಿದ್ದು, ತನ್ನ ಹಿಂದಿನ ಎಲ್ಲಾ ಸಂಬಂಧ ಕಡಿದುಕೊಂಡಿರುವುದಾಗಿ ಹೇಳಿ, ತಾನು ವಾರಾಣಸಿಯ ಸಾಧು ಎಂದಷ್ಟೇ ಹೇಳಿ ಮೌನಕ್ಕೆ ಶರಣಾಗಿದ್ದರು.
ಪತ್ನಿ ಮತ್ತು ಸಹೋದರನ ಹೇಳಿಕೆ ಪ್ರಕಾರ, ಅವರು ಗಂಗಾಸಾಗರ್ ಎಂಬುದರಲ್ಲಿ ಅನುಮಾನವಿಲ್ಲ. ಅವರ ಉದ್ದನೆಯ ಹಲ್ಲು, ತಲೆಯಲ್ಲಾದ ಅಂದಿನ ಗಾಯ ಹಾಗೂ ಮೊಣಕಾಲಿನ ಮೇಲಿನ ಗಾಯದ ಗುರುತಿನ ಮೂಲಕ ಗುರುತು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.
ಧಾನ್ವಾ ದೇವಿ ಮತ್ತು ಮುರಳಿ ಯಾದವ್ ವ್ಯಕ್ತಿಯ ನಿಜವಾದ ಗುರುತು ಪತ್ತೆಗಾಗಿ ಡಿಎನ್ ಎ ಪರೀಕ್ಷೆ ನಡೆಸುವ ಬೇಡಿಕೆ ಇಟ್ಟಿದ್ದಾರೆ. ನಾವು ಮಹಾಕುಂಭಮೇಳ ಪೂರ್ಣಗೊಳ್ಳುವವರೆಗೂ ಕಾಯುತ್ತೇವೆ. ಡಿಎನ್ ಎ ಪರೀಕ್ಷೆ ಒಪ್ಪಿದ್ದಲ್ಲಿ, ಅದರಲ್ಲಿ ಹೊಂದಾಣಿಕೆಯಾಗದಿದ್ದರೆ ನಾವು ಬಾಬಾ ರಾಜ್ ಕುಮಾರ್ ಅವರ ಬಳಿ ಕ್ಷಮೆಯಾಚಿಸುತ್ತೇವೆ ಎಂದು ಮುರಳಿ ಯಾದವ್ ಹೇಳಿದ್ದಾರೆ.
ಕುಟುಂಬದ ಕೆಲವು ಸದಸ್ಯರು ಜಾರ್ಖಂಡ್ ಗೆ ಮರಳಿದ್ದು, ಉಳಿದವರು ಕುಂಭಮೇಳದಲ್ಲೇ ಉಳಿದುಕೊಂಡಿದ್ದು ಬಾಬಾ ರಾಜ್ ಕುಮಾರ್ ಮತ್ತು ಅವರ ಸಾಧ್ವಿಯವರ ಚಲನವಲನದ ಮೇಲೆ ನಿಗಾ ಇರಿಸಿದ್ದಾರೆ. ಕುಂಭಮೇಳ ಮುಗಿದ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.
Mahakumbh mela; 7 ಬೇಡಿಕೆಯಿಟ್ಟು ಪುಣ್ಯ ಸ್ನಾನ ಮಾಡಿದ ಚಿಕ್ಕಮಗಳೂರಿನ ಯುವಕ!
Prayagraj: ಕುಂಭಮೇಳದಲ್ಲಿ ನದಿಯ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ!
Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ
Maha kumbh 2025: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಸಚಿವ ಪ್ರಹ್ಲಾದ ಜೋಶಿ
Maha Kumbh Mela: ಮಹಾಕುಂಭಮೇಳ ಅವಧಿ ವಿಸ್ತರಣೆ ಊಹಾಪೋಹ? ಜಿಲ್ಲಾಡಳಿತ ಹೇಳಿದ್ದೇನು
Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು
Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
Push-Up: ಮೈ ಕೊಡವಿಕೊಂಡು ಎದ್ದು ನಿಲ್ಲಿಸುವ ಪುಶ್
You seem to have an Ad Blocker on.
To continue reading, please turn it off or whitelist Udayavani.