Jharkhand: ಜೆಎಂಎಂ ತೊರೆದು ಬಿಜೆಪಿ ಸೇರಿದ ಮಾಜಿ ಸಿಎಂ ಚಂಪೈ ಸೊರೇನ್
ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಭಾಗಿ
Team Udayavani, Aug 30, 2024, 8:24 PM IST
ಹೊಸದಿಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜಾರ್ಖಂಡ್ (Jharkhand)ನಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಸ್ವ ಪಕ್ಷ ಸ್ಥಾಪಿಸಬೇಕೋ ಅಥವಾ ಬಿಜೆಪಿ ಸೇರಬೇಕೋ ಗೊಂದಲದಲ್ಲಿದ್ದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ (Champai Soren) ಜೆಎಂಎಂ ಪಕ್ಷ ತೊರೆದು ಶುಕ್ರವಾರ ರಾಂಚಿಯಲ್ಲಿ ಬಿಜೆಪಿ (BJP)ಗೆ ಸೇರ್ಪಡೆಗೊಂಡರು.
ರಾಂಚಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಸೋರೆನ್ ಹಾಗೂ ಅವರ ಅಪಾರ ಬೆಂಬಲಿಗರು ಬಿಜೆಪಿ ಸೇರಿದ್ದಾರೆ. ಪಕ್ಷ ಸೇರಿದ ಚಂಪೈಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಆದೇಶ ಪತ್ರ ನೀಡಿ ಸ್ವಾಗತಿಸಿದರು. ಒಂದು ಕಾಲದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸ್ಥಾಪಕ ಶಿಬು ಸೊರೆನ್ ಅವರ ನಿಕಟ ಸಹಾಯಕರಾಗಿದ್ದ ಸೋರೆನ್ ಬುಧವಾರ ತಮ್ಮ ಪಕ್ಷವನ್ನು ತೊರೆದಿದ್ದಾರೆ.
67 ವರ್ಷದ ನಾಯಕ ಶಿಬು ಸೊರೆನ್‌ಗೆ ಬರೆದ ಪತ್ರದಲ್ಲಿ, “ನನಗೆ ಕುಟುಂಬದಂತಿರುವ ಜೆಎಂಎಂ(ಜಾರ್ಖಂಡ್ ಮುಕ್ತಿ ಮೋರ್ಚಾ) ಪಕ್ಷವನ್ನು ನಾನು ತೊರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲಿಯೂ ಊಹಿಸಿರಲಿಲ್ಲ. ಹಿಂದಿನ ಘಟನೆಗಳು ಬಹಳ ನೋವಿನಿಂದ ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ಪಕ್ಷವು ತನ್ನ ತತ್ವದಿಂದ ವಿಮುಖವಾಗಿದೆ ಎಂದು ಹೇಳಲು ನನಗೆ ನೋವಾಗಿದೆ ಎಂದಿದ್ದಾರೆ.
ಬುಡಕಟ್ಟು ಪ್ರದೇಶವಾದ ಜಾರ್ಖಂಡ್‌ನಲ್ಲಿ ಬಿಜೆಪಿ ನೆಲೆ ಸ್ಥಾಪಿಸಲು ನೋಡುತ್ತಿದೆ, ಅಲ್ಲಿ ಪರಿಶಿಷ್ಟ ಪಂಗಡಗಳು ಮತದಾರರಲ್ಲಿ ಸುಮಾರು 26 ಪ್ರತಿಶತ ಹೊಂದಿವೆ. ಜನವರಿ 31 ರಂದು ಜಾರಿ ನಿರ್ದೇಶನಾಲಯದಿಂದ (ಇಡಿ) ಹೇಮಂತ್ ಸೊರೇನ್ ಅವರನ್ನು ಬಂಧಿಸುವ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ, ಚಂಪೈ ಸೊರೇನ್ ರನ್ನು ಸಿಎಂ ಆಗಿ ನೇಮಿಸಲಾಗಿತ್ತು. ಸೊರೇನ್ ಜೈಲಿನಲ್ಲಿರುವವರೆಗೂ ಅವರು ಸಿಎಂ ಆಗಿದ್ದರು. ಜೂ. 28 ರಂದು ಹೇಮಂತ್ ಸೊರೇನ್‌ಗೆ ಜಾಮೀನು ನೀಡಿದ ನಂತರ, ಜೆಎಂಎಂ ಕಾರ್ಯಾಧ್ಯಕ್ಷ ಸ್ಥಾನದಿಂದ ಹಿರಿಯ ನಾಯಕ ಚಂಪೈ ಕೆಳಗಿಳಿಯಬೇಕಾಯಿತು.
“ಇಷ್ಟು ಅವಮಾನಗಳ ನಂತರ, ನಾನು ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆಗೆ ಒಳಗಾಗಿದ್ದೇನೆ. ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಇನ್ನೊಬ್ಬ ವ್ಯಕ್ತಿ ರದ್ದುಗೊಳಿಸುವುದಕ್ಕಿಂತ ಹೆಚ್ಚಿನ ಅವಮಾನ ಪ್ರಜಾಪ್ರಭುತ್ವದಲ್ಲಿ ಬೇರೇನಿದೆ? ಸಭೆಯಲ್ಲಿ (ಜು. 3 ರಂದು ಶಾಸಕಾಂಗ ಪಕ್ಷದ ಸಭೆ) ನನಗೆ ರಾಜೀನಾಮೆ ನೀಡುವಂತೆ ಕೇಳಲಾಯಿತು ಎಂದು ಚಂಪೈ ಸೊರೇನ್ ಹೇಳಿದ್ದಾರೆ. ಆದರೆ ಅವರು ( ಸಿಎಂ ಹೇಮಂತ್ ಸೊರೇನ್) ಕುರ್ಚಿಯಲ್ಲಿ ಆಸಕ್ತಿ ತೋರುತ್ತಿದ್ದರು. ನಾನು ನನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಪಕ್ಷದಲ್ಲಿ ನನಗೆ ಅಸ್ತಿತ್ವವಿಲ್ಲದಾಯಿತು, ”ಎಂದು ಚಂಪೈ ಸೊರೇನ್ ಹೇಳಿದ್ದಾರೆ.
#WATCH | Ranchi: Former Jharkhand CM and BJP leader Champai Soren says, “I will work for the development of Jharkhand and we will stop infiltration from Bangladesh. I will fulfil whatever responsibilities the party will assign me” pic.twitter.com/Eww8vq677Y
— ANI (@ANI) August 30, 2024
ಜನರ ಸಮಸ್ಯೆಗಳಿಗೆ ಹೋರಾಡುವೆ:
“ನಾನು ಜಾರ್ಖಂಡ್ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬಿಜೆಪಿ ಯಾವ ಜವಾಬ್ದಾರಿಯ ನೀಡುತ್ತದೋ ಆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಬಾಂಗ್ಲಾದೇಶದಿಂದ ವಲಸಿಗರ ತಡೆಗೂ ಕ್ರಮ ವಹಿಸಲಾಗುವುದು. ಜಾರ್ಖಂಡ್‌ನ ಸಾಮಾನ್ಯ ಜನರು, ಹಿಂದುಳಿದ ವರ್ಗ, ದಲಿತರು, ಬುಡಕಟ್ಟು ಜನರ ಸಮಸ್ಯೆಗಳ ಬಗೆಗಿನ ಹೋರಾಟವನ್ನು ಮುಂದುವರಿಸುತ್ತೇನೆʼ ಮಾಜಿ ಮುಖ್ಯಮಂತ್ರಿ ಚಂಪೈ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.