Jharkhand Politics: ಮಾಜಿ ಸಿಎಂ ಚಂಪೈ ಸೊರೆನ್‌ರಿಂದ ಹೊಸ ಪಕ್ಷ ಸ್ಥಾಪನೆ?
ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸುವೆ, ಹೊಸ ಸಂಘಟನೆ ಬಲಪಡಿಸುವೆ, ವಾರದೊಳಗೆ ಸ್ಪಷ್ಟ ಚಿತ್ರಣ: ಚಂಪೈ ಸೊರೆನ್
Team Udayavani, Aug 21, 2024, 8:04 PM IST
ರಾಂಚಿ: ಸ್ವಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಬಗ್ಗೆ ತೀವ್ರ ಬೇಸರಗೊಂಡಿರುವ ಜಾರ್ಖಂಡ್ (Jharkhand) ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ (Champai Soren) ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುವರು ಎಂಬ ಬಗ್ಗೆ ವದಂತಿ ಕೇಳುತ್ತಿರುವ ಬೆನ್ನಲ್ಲೇ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಸುಳಿವು ನೀಡುವ ಜೊತೆಗೆ ಮುಂದಿನ ನಡೆ ಬಗೆಗಿನ ಸ್ಪಷ್ಟ ಚಿತ್ರಣ ಒಂದು ವಾರದಲ್ಲಿ ಸಿಗಲಿದೆ.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಚಂಪೈ ಸೊರೆನ್ “ನಾನು ರಾಜಕೀಯ ನಿವೃತ್ತಿ ಪಡೆಯುವುದಿಲ್ಲ, ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇನೆ. ಹೊಸ ಸಂಘಟನೆಯ ಬಲಪಡಿಸುತ್ತೇನೆ ಹಾಗೂ ಉತ್ತಮ ಸ್ನೇಹಿತರು ದೊರಕಿದರೆ ಅವರ ಜೊತೆ ಮುಂದುವರಿದು ರಾಜ್ಯದ ಜನರ ಸೇವೆ ಮಾಡುತ್ತೇನೆ” ಎಂದು ಹೇಳಿದ್ದಾರೆ.
#WATCH | Former Jharkhand CM & JMM leader Champai Soren says, “I will not retire from politics. In the new chapter that I have started, I’ll strengthen the new organisation and if I find a good friend in the way, I’ll move ahead with that friendship to serve the people and… pic.twitter.com/Q8VwIK694o
— ANI (@ANI) August 21, 2024
ಕೆಲವು ದಿನಗಳ ಹಿಂದೆ ಎಕ್ಸ್‌ನಲ್ಲಿ ಬರೆದಿದ್ದ ಚಂಪೈ, ತಮ್ಮ ಮುಂದೆ ಮೂರು ಆಯ್ಕೆಗಳಿವೆ ಎಂದಿದ್ರು. ಭಾರವಾದ ಹೃದಯದಿಂದ, ನಾನು ಅದೇ ಶಾಸಕಾಂಗ ಪಕ್ಷದ ಸಭೆಯಲ್ಲಿ “ ರಾಜಕೀಯ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಎಂದು ಹೇಳಿದ್ದೆ. ಇದರಲ್ಲಿ ನನಗೆ ಮೂರು ಆಯ್ಕೆಗಳಿವೆ, ಮೊದಲನೆಯದಾಗಿ, ರಾಜಕೀಯದಿಂದ ನಿವೃತ್ತಿ, ಎರಡನೆಯದು, ನನ್ನದೇ ಆದ ಪ್ರತ್ಯೇಕ ಸಂಘಟನೆ ಸ್ಥಾಪನೆ ಮತ್ತು ಮೂರನೆಯದಾಗಿ, ರಾಜಕೀಯವಾಗಿ ಮತ್ತೊಬ್ಬ ಜೊತೆಗಾರನ ಹುಡುಕಿಕೊಳ್ಳುವುದು (ಪರೋಕ್ಷವಾಗಿ ಬಿಜೆಪಿ ಸೇರ್ಪಡೆ) ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆವರೆಗೆ ಈ ಪ್ರಯಾಣದಲ್ಲಿ ನನಗೆ ಎಲ್ಲಾ ಆಯ್ಕೆಗಳು ಮುಕ್ತವಾಗಿವೆ ಎಂದು ಬರೆದಿದ್ದರು.
ನಾನು ಒಳಗೊಳಗೇ ಒಡೆದು ಚೂರಾಗಿದ್ದೇನೆ. ಏನು ಮಾಡಬೇಕೆಂದು ನನಗೆ ಅರ್ಥವಾಗಲಿಲ್ಲ. ಎರಡು ದಿನಗಳ ಕಾಲ ನಾನು ಶಾಂತವಾಗಿ ಕುಳಿತು ಆತ್ಮಾವಲೋಕನ ಮಾಡಿಕೊಂಡೆ, ಇಡೀ ಘಟನೆಯಲ್ಲಿ ನನ್ನ ತಪ್ಪನ್ನು ಹುಡುಕುತ್ತಲೇ ಇದ್ದೆ. ನನಗೆ ಅಧಿಕಾರದ ದುರಾಸೆ ಸ್ವಲ್ಪವೂ ಇರಲಿಲ್ಲ, ಆದರೆ ನನ್ನ ಸ್ವಾಭಿಮಾನಕ್ಕೆ ಈ ಹೊಡೆತ ಬಿದ್ದಿದೆ. ನನ್ನ ಸ್ವಂತ ಜನರು ಉಂಟುಮಾಡಿದ ನೋವನ್ನು ನಾನು ಎಲ್ಲಿ ವ್ಯಕ್ತಪಡಿಸಬಹುದು?” ಎಂದು ಚಂಪೈ ಸೊರೆನ್ ಪೋಸ್ಟ್‌ನಲ್ಲಿ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.