Jharkhand Politics: ಪಕ್ಷದಲ್ಲಿ ನನ್ನ ಅಸ್ತಿತ್ವಕ್ಕೆ ಬೆಲೆ ಇರಲಿಲ್ಲ: ಚಂಪಯಿ
ಬಿಜೆಪಿ ಸೇರ್ಪಡೆ ಸುದ್ದಿ ಬೆನ್ನಲ್ಲೇ ಝಾರ್ಖಂಡ್ ಮಾಜಿ ಮುಖ್ಯಮಂತ್ರಿ ಸುದೀರ್ಘ ಟ್ವೀಟ್
Team Udayavani, Aug 19, 2024, 6:26 AM IST
ರಾಂಚಿ: “ನಮ್ಮ ಬೆವರು, ರಕ್ತ ಸುರಿದು ಕಟ್ಟಿದ ಪಕ್ಷದಲ್ಲಿ ನನ್ನ ಅಸ್ತಿತ್ವವೇ ಇಲ್ಲವೆನ್ನುವಂತೆ ನನ್ನನ್ನು ಅವಮಾನಿಸಲಾ ಗಿತ್ತು. 4 ದಶಕದ ರಾಜಕೀಯ ಜೀವನದಲ್ಲಿ ಅದೇ ಮೊದಲ ಬಾರಿಗೆ ನಾನು ಕುಗ್ಗಿಹೋದೆ. ನನ್ನ ಜನರೇ ನನ್ನನ್ನು ನೋಯಿಸಿದರು’.
ಹೀಗೆಂದು ಜೆಎಂಎಂ ನಾಯಕ ಚಂಪಯಿ ಸೊರೇನ್ ಹೇಳಿದ್ದಾರೆ. ಚಂಪಯಿ ಬಿಜೆಪಿ ಸೇರ್ಪಡೆ ಸುದ್ದಿಯ ನಡುವೆಯೇ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ರವಿವಾರ ದಿಲ್ಲಿಗೆ ಆಗಮಿಸಿದ್ದ ಚಂಪಯಿ ಬಿಜೆಪಿ ವರಿ ಷ್ಠರನ್ನು ಭೇಟಿಯಾಗಿದ್ದಾರೆಂದು ಮೂಲಗಳು ತಿಳಿಸಿದ್ದವು. ಆದರೆ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಚಂಪ ಯಿ “ವದಂತಿಗಳ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಂದಿರುವುದು ನನ್ನ ಖಾಸಗಿ ಕೆಲಸಕ್ಕೆ’ ಎಂದಿದ್ದರು.
ಅಧಿಕಾರದ ಆಸೆ ಇಲ್ಲದ್ದಕ್ಕೆ ರಾಜೀನಾಮೆ:
ಆ ಬಳಿಕ ಸುದೀರ್ಘವಾದ ಟ್ವೀಟ್ ಮಾಡಿ, “ಅಧಿಕಾರದ ಆಸೆ ಇರದ ನನ್ನನ್ನು ವಿಪಕ್ಷ ಒಕ್ಕೂಟದ ನಾಯಕರು ಸಿಎಂ ಆಗುವಂತೆ ಕೇಳಿದರು. ಅದರಂತೆ ಜ.31ರಂದು ಸಿಎಂ ಆದೆ. ಬಳಿಕ ಜು.3ಕ್ಕೂ 2 ದಿನದ ಹಿಂದೆ ಇದ್ದಕ್ಕಿದ್ದಂತೆ ಸಿಎಂ ಆಗಿದ್ದ ನನ್ನ ಕಾರ್ಯಕ್ರಮಗಳನ್ನು ಪಕ್ಷ ರದ್ದುಗೊಳಿಸಿತ್ತು. ಪ್ರಜಾಪ್ರಭುತ್ವದಲ್ಲಿ ಸಿಎಂಗೆ ಇದಕ್ಕಿಂತ ದೊಡ್ಡ ಅವಮಾನ ಏನಿದೆ? ಬಳಿಕ ನನ್ನ ರಾಜೀನಾಮೆ ಕೇಳಿದರು. ಅಧಿಕಾರದ ಆಸೆ ಇಲ್ಲದ್ದಕ್ಕೆ ರಾಜೀನಾಮೆಯನ್ನೂ ಕೊಟ್ಟೆ. ಆದರೆ ನನ್ನ ಆತ್ಮ ಗೌರವವನ್ನು ಗಾಳಿಯಲ್ಲಿ ತೂರಿದ್ದರ ಬಗ್ಗೆ ಯಾರೂ ಚಿಂತಿಸಲಿಲ್ಲ. ಇದರಿಂದ ನಾನು ಕಣ್ಣೀರಿಟ್ಟೆ, ಅವಮಾನಕ್ಕೊಳಗಾದೆ. ಆ ಬಳಿಕ ನನ್ನ ಮುಂದೆ 3 ಹಾದಿ ಇದೆ ಎಂದು ನಿರ್ಧರಿಸಿದೆ. ಒಂದು ರಾಜಕೀಯ ನಿವೃತ್ತಿ ಅಥವಾ ಪಕ್ಷ ಸ್ಥಾಪನೆ, ಇಲ್ಲವೋ ಸಮಾನ ಮನಸ್ಕರೊಂದಿಗೆ ಹೆಜ್ಜೆ ಎಂದುಕೊಂಡಿದ್ದೆ. ಆ ಆಯ್ಕೆಗಳು ಆಗಲೂ ನನ್ನ ಮುಂದೆ ಇದ್ದವು, ಈಗಲೂ ಇವೆ’ ಎಂದಿದ್ದಾರೆ.
“ರಾಜಕೀಯ ಪಕ್ಷಗಳನ್ನು ಕಿತ್ತೂಗೆಯುವುದರಲ್ಲಿ, ಮನೆ ಮುರಿಯುವುದರಲ್ಲಿ ಅವರು (ಬಿಜೆಪಿ) ನಿರತರಾಗಿದ್ದಾರೆ. ಇವತ್ತು ಶಾಸಕರು ನಾಳೆ ಮತ್ಯಾರೋ ದುಡ್ಡಿನಿಂದ ಎಲ್ಲರನ್ನೂ ಕೊಂಡುಕೊಳ್ಳುತ್ತಾರೆ. ಆದರೂ ಪರವಾಗಿಲ್ಲ, ನಮ್ಮ ವಿಪಕ್ಷ ಒಕ್ಕೂಟ ಗಟ್ಟಿಯಾಗಿ ಇರಲಿದೆ.” – ಹೇಮಂತ್ ಸೊರೇನ್, ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.