ಜಿಯೋ ಜೊತೆ ಜುಪಿ ಪಾಲುದಾರಿಕೆ : ಇದರಿಂದ ಗ್ರಾಹಕರಿಗೇನು ಲಾಭ, ಇಲ್ಲಿದೆ ಮಾಹಿತಿ..
Team Udayavani, Jan 5, 2022, 3:55 PM IST
ನವದೆಹಲಿ: ಭಾರತದ ಅತಿದೊಡ್ಡ ಕೌಶಲ ಆಧಾರಿತ ಕ್ಯಾಶುವಲ್ ಗೇಮಿಂಗ್ ಕಂಪನಿಯಾಗಿರುವ ಜುಪಿ (Zupee), ಜಿಯೊ ಪ್ಲಾಟ್‌ಫಾರ್ಮ್ ಲಿಮಿಟೆಡ್ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಪ್ರಕಟಿಸಿದೆ.
ಎರಡೂ ಕಂಪನಿಗಳ ನಡುವಣ ಈ ಹೊಸ ಪಾಲುದಾರಿಕೆ ನೆರವಿನಿಂದ ಜುಪಿ ಗ್ರಾಹಕರಿಗೆ ಅನುಕೂಲವಾಗುವಂತಹ ಉತ್ಪನ್ನಗಳು ಮತ್ತು ಸೇವೆಗಳನ್ನು ತ್ವರಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ವಿತರಿಸಲಿದೆ. ಜಿಯೊ ಬಳಕೆದಾರರಿಗೆ ಜುಪಿ ಯ ಆನ್‌ಲೈನ್ ಕೌಶಲ ಆಧಾರಿತ ಆಟಗಳ ಸಮೃದ್ಧ ಸಂಗ್ರಹ ಮತ್ತು ಜುಪಿ ಅಭಿವೃದ್ಧಿಪಡಿಸುವ ಇತರ ನವೀನ ಉತ್ಪನ್ನಗಳನ್ನು ಬಳಸುವ ಅವಕಾಶಗಳನ್ನು ಒದಗಿಸಲಾಗುತ್ತದೆ.
ಈ ಹೊಸ ಪಾಲುದಾರಿಕೆಯೊಂದಿಗೆ, ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಜುಪಿ ಅನ್ನು ಭಾರತದಲ್ಲಿನ ಅತಿದೊಡ್ಡ ಗೇಮಿಂಗ್ ಪ್ಲಾಟ್‌ಫಾರ್ಮ್ ಮಾಡುವ ಮಹತ್ವಾಕಾಂಕ್ಷೆಯ ಗುರಿ ತಲುಪಲು ಪ್ರಯತ್ನಿಸಲಾಗುವುದು. ಸಾಧ್ಯವಾದಷ್ಟು ಹೆಚ್ಚು ಬಳಕೆದಾರರಿಗೆ ಬಹು ಭಾಷೆಗಳಲ್ಲಿ ಹೆಚ್ಚು ಗುಣಮಟ್ಟದ ಗೇಮ್‌ಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗುವುದು. ಭಾರತದಲ್ಲಿ 5ಜಿ ವಾಣಿಜ್ಯ ಬಳಕೆಯು ಆರಂಭವಾಗುವುದಕ್ಕೂ ಮೊದಲು 15 ಕೋಟಿಗಿಂತಲೂ ಹೆಚ್ಚು 5ಜಿ ಹ್ಯಾಂಡ್‌ಸೆಟ್‌ಗಳು ಮಾರಾಟವಾಗುವ ನಿರೀಕ್ಷೆ ಇದೆ. ಜಿಯೊ ಜೊತೆಗಿನ ಈ ಪಾಲುದಾರಿಕೆಯೊಂದಿಗೆ ಸಾಧ್ಯವಾದಷ್ಟು ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಜುಪಿ ಯತ್ನಿಸಿದೆ.
ಜಿಯೊ ಸದ್ಯಕ್ಕೆ ಹೊಂದಿರುವ ಸೇವಾ ಮತ್ತು ಮಾರುಕಟ್ಟೆ ವ್ಯಾಪ್ತಿಯಿಂದ ಜುಪಿ ಸಹ ಪ್ರಯೋಜನ ಪಡೆಯಲಿದೆ. ಎಲ್ಲಾ ಜಿಯೊ ಗ್ರಾಹಕರಿಗೆ ಜುಪಿಯ ಗೇಮ್‌ಗಳನ್ನು ವಿತರಿಸಲಾಗುವುದು. ಇದು ಜಿಯೊ ಫೋನ್ ಗ್ರಾಹಕರಿಗೂ ಲಭ್ಯವಾಗಲಿದೆ. ಇದು ಜುಪಿಗೆ ಭಾರತದಲ್ಲಿನ ಎಲ್ಲಾ ಗೇಮಿಂಗ್ ಕಂಪನಿಗಳಲ್ಲಿಯೇ ದೊಡ್ಡ ಮಾರುಕಟ್ಟೆ ಒದಗಿಸುತ್ತದೆ. ಇದು ವೇಗವಾಗಿ ಬೆಳೆಯುತ್ತಿರುವ ಗೇಮಿಂಗ್ ಸ್ಟಾರ್ಟ್-ಅಪ್ ಅನ್ನು ದೇಶದ ಅತಿದೊಡ್ಡ ಗೇಮಿಂಗ್ ಕಂಪನಿಯಾಗಿ ಪರಿವರ್ತಿಸಲಿದೆ. ಈ ಕಾರ್ಯತಂತ್ರದ ಸಹಭಾಗಿತ್ವವು ನಂಬಲಾಗದ ಬೆಳವಣಿಗೆ ಮತ್ತು ಮುನ್ನೋಟವನ್ನು ದೃಢಪಡಿಸುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಗೆಲ್ಲುವ ಆಟದ ಸ್ವರೂಪಗಳನ್ನು ಮತ್ತು ಹಣಗಳಿಕೆಯ ಸಾಧ್ಯತೆಗಳನ್ನು ಜುಪಿ ಒದಗಿಸಲಿದೆ.
ಇದನ್ನೂ ಓದಿ : ಸಕಲ ಸೌಲಭ್ಯಗಳಿರುವ ನವಬೆಂಗಳೂರು ನಿರ್ಮಾಣಕ್ಕೆ ನೀಲನಕ್ಷೆ: ಸಿಎಂ ಬೊಮ್ಮಾಯಿ
ಜುಪಿ, ಇತ್ತೀಚೆಗಷ್ಟೇ ಸರಣಿ ಬಿ ಸುತ್ತಿನ ಬಂಡವಾಳ ಸಂಗ್ರಹದಲ್ಲಿ 102 ದಶಲಕ್ಷ ಡಾಲರ್ ಸಂಗ್ರಹಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇದು ಈಗಾಗಲೇ ಸಂಗ್ರಹಿಸಿರುವ 30 ದಶಲಕ್ಷ ಡಾಲರ್‌ಗೆ ಹೆಚ್ಚುವರಿಯಾಗಿದೆ. ಈ ಬಂಡವಾಳ ಸಂಗ್ರಹ ಸುತ್ತಿನಲ್ಲಿ ಪ್ರತಿಷ್ಠಿತ ಹೂಡಿಕೆ ಕಂಪನಿಗಳಾದ ವೆಸ್ಟ್ಕ್ಯಾಪ್ ಗ್ರೂಪ್, ಟೊಮೇಲ್ಸ್ ಬೇ ಕ್ಯಾಪಿಟಲ್, ನೇಪಿಯನ್ ಕ್ಯಾಪಿಟಲ್, ಎಜೆ ಕ್ಯಾಪಿಟಲ್, ಮ್ಯಾಟ್ರಿಕ್ಸ್ ಪಾರ್ಟ್ನರ್ಸ್ ಇಂಡಿಯಾ ಆ್ಯಂಡ್ ಓರಿಯೊಸ್ ವೆಂಚರ್ ಪಾರ್ಟ್ನರ್ಸ್ ಭಾಗವಹಿಸಿದ್ದವು. ಇದರೊಂದಿಗೆ ಜುಪಿ ಇದುವರೆಗೆ 121 ದಶಲಕ್ಷ ಡಾಲರ್‌ಗಳಷ್ಟು ಬಂಡವಾಳ ಸಂಗ್ರಹಿಸಿದ್ದು, ಕಂಪನಿಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 600 ದಶಲಕ್ಷ ಡಾಲರ್‌ಗಳಿಗೆ ತಲುಪಿದೆ. ಜುಪಿ ಸದ್ಯಕ್ಕೆ ಭಾರತದಲ್ಲಿ 70 ದಶಲಕ್ಷ ಡೌನ್‌ಲೋಡ್‌ಗಳನ್ನು ಹೊಂದಿದೆ. ಹೊಸ ಬಂಡವಾಳ ಸಂಗ್ರಹವು ಅದರ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡಲಿದೆ.
ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ವಿನ್ಯಾಸದ ಅನುಭವಗಳನ್ನು ಹೆಚ್ಚಿಸಲು, ಹೊಸ ಪ್ರದೇಶಗಳಿಗೆ ವಿಸ್ತರಿಸಲು, ಮಾರುಕಟ್ಟೆ ವೃದ್ಧಿಸಲು, ಹೆಚ್ಚೆಚ್ಚು ಗ್ರಾಹಕರನ್ನು ತಲುಪಲು, ಸಂಶೋಧನೆ ಮತ್ತು ನಾವೀನ್ಯತೆ ಕಾರ್ಯಕ್ರಮಗಳಿಗೆ, ಪ್ರತಿಭಾನ್ವಿತ ತಂತ್ರಜ್ಞರನ್ನು ನೇಮಿಸಿಕೊಳ್ಳಲು ಈ ಬಂಡವಾಳವನ್ನು ಬಳಸಲು ಉದ್ದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.