ಪತಿಯ ರಾಸಲೀಲೆ ವಿಡಿಯೋ ಚಿತ್ರೀಕರಣ; ಇಬ್ಬರು ಮಕ್ಕಳೊಂದಿಗೆ ಜೀವ ಕಳೆದುಕೊಂಡ ಪತ್ನಿ
Team Udayavani, Jul 7, 2023, 5:49 PM IST
ರಾಜಸ್ಥಾನ(ಜೋಧ್ ಪುರ): ಪತಿಯ ಅಕ್ರಮ ಸಂಬಂಧದ ವಿಚಾರವನ್ನು ಕಣ್ಣಾರೆ ಕಂಡು ಮನನೊಂದ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ಸರಕು ಸಾಗಣೆ ರೈಲಿನ ಮುಂಭಾಗಕ್ಕೆ ಹಾರಿದ ಪರಿಣಾಮ ಮೂವರು ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.
ಇದನ್ನೂ ಓದಿ:ಮೋದಿ ಹೆದರುವವನು ಅಲ್ಲ…: ಛತ್ತೀಸ್ ಗಢದಲ್ಲಿ ಗುಡುಗಿದ ಪ್ರಧಾನಿ ಮೋದಿ
ಏನಿದು ಘಟನೆ?
ತಾಯಿ ಮನೆಯಲ್ಲಿ ವಾಸವಾಗಿದ್ದ ಮಹಿಳೆ, ತನ್ನಿಬ್ಬರು ಮಕ್ಕಳೊಂದಿಗೆ ಪತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಜೋಧ್ ಪುರಕ್ಕೆ ಆಗಮಿಸಿದ್ದಳು. ಪತಿಯ ಮನೆಯನ್ನು ತಲುಪಿದ ಪತ್ನಿಗೆ ಆಘಾತವಾಗಿತ್ತು. ಅದಕ್ಕೆ ಕಾರಣ ಪತಿ ಮತ್ತೊಬ್ಬ ಯುವತಿ ಜತೆ ಇದ್ದಿರುವುದು.
ಮನೆಯೊಳಗೆ ಹೋದ ಪತ್ನಿಗೆ ಪತಿ ಮತ್ತೊಬ್ಬ ಯುವತಿ ಜತೆ ರಾಸಲೀಲೆಯಲ್ಲಿ ತೊಡಗಿರುವುದನ್ನು ಕಣ್ಣಾರೆ ಕಂಡು ರೋಸಿ ಹೋಗಿದ್ದಳು. ಆಕೆ ಕೂಡಲೇ ಮೊಬೈಲ್ ನಲ್ಲಿ ಪತಿಯ ಅನೈತಿಕ ಚಟುವಟಿಕೆಯ ವಿಡಿಯೋ ಚಿತ್ರೀಕರಣ ಮಾಡಿ ಅದನ್ನು ಅತ್ತೆಗೆ ಕಳುಹಿಸಿಕೊಟ್ಟಿದ್ದಳು ಎಂದು ವರದಿ ತಿಳಿಸಿದೆ.
ಪತಿಯ ತವರು ಮನೆಯಲ್ಲಿದ್ದ ಪತ್ನಿ ಹಲವು ಬಾರಿ ಪತಿಗೆ ಕರೆ ಮಾಡಿದ್ದರು ಕೂಡಾ ಆತ ಕರೆಯನ್ನು ಸ್ವೀಕರಿಸಿರಲಿಲ್ಲವಾಗಿತ್ತು. ನಂತರ ಪತಿಯ ಹುಟ್ಟುಹಬ್ಬದ ದಿನದಂದು ಖುದ್ದಾಗಿ ಮಕ್ಕಳ ಜೊತೆ ಪತಿಯನ್ನು ಭೇಟಿಯಾಗಲು ನಿರ್ಧರಿಸಿದ್ದಳು. ಆ ನಿಟ್ಟಿನಲ್ಲಿ ಜೋಧ್ ಪುರದಲ್ಲಿ ಪತಿಯ ನಿವಾಸಕ್ಕೆ ಬಂದ ವೇಳೆ ಆತ ಮತ್ತೊಬ್ಬಳು ಯುವತಿಯೊಂದಿಗೆ ವಾಸವಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಳು ಎಂದು ವರದಿ ವಿವರಿಸಿದೆ.
ಪತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಘಟನೆ ನಂತರ ಆಕ್ರೋಶಗೊಂಡ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ರೈಲ್ವೆ ನಿಲ್ದಾಣಕ್ಕೆ ಬಂದು ಸರಕು ಸಾಗಣೆ ರೈಲಿನ ಮುಂಭಾಗದಲ್ಲಿ ಹಾರಿಬಿಟ್ಟಿದ್ದಳು. ಕೂಡಲೇ ಗೂಡ್ಸ್ ರೈಲನ್ನು ನಿಲ್ಲಿಸಲಾಗಿತ್ತು. ಆದರೆ ಮಹಿಳೆ ಮತ್ತು ಇಬ್ಬರು ಮಕ್ಕಳ ದೇಹ ಛಿದ್ರ, ಛಿದ್ರವಾಗಿ ಹೋಗಿತ್ತು. ಶವದ ತುಂಡುಗಳನ್ನು ಒಟ್ಟುಗೂಡಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಪತಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.