ಜೊಕೋಗೆ 5ನೇ ದುಬಾೖ ಓಪನ್ ಪ್ರಶಸ್ತಿ
Team Udayavani, Mar 1, 2020, 10:38 PM IST
ದುಬಾೖ: ಸರ್ಬಿಯಾದ ನೊವಾಕ್ ಜೊಕೋವಿಕ್ 5ನೇ “ದುಬಾೖ ಓಪನ್ ಟೆನಿಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ ರಾತ್ರಿ ನಡೆದ ಪ್ರಶಸ್ತಿ ಕಾಳಗದಲ್ಲಿ ಅವರು ಗ್ರೀಕ್‌ನ ಅಪಾಯಕಾರಿ ಆಟಗಾರ ಸ್ಟೆಫನಸ್ ಸಿಸಿಪಸ್ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು.
ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಜೊಕೋವಿಕ್ ಪ್ರಸಕ್ತ ಋತುವಿನಲ್ಲಿ ಆಡಿದ ಎಲ್ಲ 21 ಪಂದ್ಯಗಳನ್ನು ಗೆದ್ದಂತಾಯಿತು. ಅವರು ಸತತ 20 ಪ್ಲಸ್ ಪಂದ್ಯ ಗೆದ್ದ 7ನೇ ನಿದರ್ಶನ ಇದಾಗಿದೆ. ಹಾಗೆಯೇ ಸಿಸಿಪಸ್ ವಿರುದ್ಧ ಸತತ 8ನೇ ಗೆಲುವು ಸಾಧಿಸಿದರು. ಈ ಪರಾಕ್ರಮದೊಂದಿಗೆ ಜೊಕೋವಿಕ್ ತಮ್ಮ ನಂಬರ್ ವನ್ ಪಟ್ಟವನ್ನು ಇನ್ನಷ್ಟು ಗಟ್ಟಿಗೊಳಿಸಿದರು.
ಇನ್ನೊಂದೆಡೆ ಸಿಸಿಪಸ್‌ಗೆ ದುಬಾೖ ಓಪನ್ ಫೈನಲ್‌ನಲ್ಲಿ ಎದುರಾದ ಸತತ 2ನೇ ಸೋಲು ಇದಾಗಿದೆ. ಕಳೆದ ವರ್ಷ ಅವರು ರೋಜರ್ ಫೆಡರರ್‌ಗೆ ಶರಣಾಗಿದ್ದರು.
ಈ ಗೆಲುವಿನ ಸಾಧನೆಗಾಗಿ ನೊವಾಕ್ ಜೊಕೋವಿಕ್ ಅವರಿಗೆ ದುಬಾೖ ಸರಕಾರ “ಗೋಲ್ಡನ್ ವೀಸಾ’ ನೀಡಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮುಂದಿನ ವರ್ಷ ಇಲ್ಲಿಗೆ ಆಗಮಿಸುವುದಾಗಿ ಜೊಕೋ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.