ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಕಂಡಿದೆ ಬಿಹಾರ : ಸುರಕ್ಷಿತ ಬಿಹಾರಕ್ಕೆ ನಿತೀಶ್ ಅಗತ್ಯ
Team Udayavani, Oct 12, 2020, 5:30 AM IST
ಪಾಟ್ನಾ/ಮುಂಬಯಿ: ಪ್ರಧಾನಿ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಇರುವುದರಿಂದಲೇ ಬಿಹಾರ ಸಾಕಷ್ಟು
ಅಭಿವೃದ್ಧಿ ಕಂಡಿದೆ. ಮುಂದಿನ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಸರಕಾರ ರಚನೆ ಮಾಡಲಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಗಯಾದಲ್ಲಿ ಬಿಜೆಪಿಯ ಮೊದಲ ಚುನಾವಣ ರ್ಯಾಲಿಯಲ್ಲಿ ಮಾತ ನಾಡಿದ ಅವರು, ನಿತೀಶ್ ಕುಮಾರ್ ನೇತೃತ್ವದ ಸರಕಾರ 15 ವರ್ಷಗಳಿಂದ ಸಾಧಿಸಿದ ಅಭಿವೃದ್ಧಿ ಮತ್ತು ಲಾಲು ಪ್ರಸಾದ್ ಯಾದವ್ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಅವಧಿಯ ದಿನಗಳನ್ನು ಹೋಲಿಸಿ ಕೊಳ್ಳಿ ಎಂದೂ ಹೇಳಿದರು. ನಡ್ಡಾ ಅವರ ಮಾತಿನಲ್ಲಿ ಹೆಚ್ಚಿನ ಅಂಶ ಪ್ರಧಾನಿ ಮೋದಿಯವರ ಸಾಧನೆಯ ಬಗ್ಗೆಯೇ ಇದ್ದದ್ದು ಗಮನಾರ್ಹ.
ನಿತೀಶ್ ನಾಯಕತ್ವದಲ್ಲಿ ಬಿಹಾರ ಸುರಕ್ಷಿತವಾಗಿದೆ. ಹೀಗಾಗಿ, ಅದನ್ನೇ ಮುಂದುವರಿಸುವುದು ಅಗತ್ಯ ಎಂದೂ ನಡ್ಡಾ ಹೇಳಿದ್ದಾರೆ. ರಾಜ್ಯ ಸರಕಾರವು ಕೊರೊನಾ ಸೋಂಕಿನ ಅವಧಿಯಲ್ಲಿ ರಾಜ್ಯದ ಜನರನ್ನು ರಕ್ಷಿಸಿದೆ. ಕೇಂದ್ರ ಸರಕಾರದಿಂದಲೂ ಅದಕ್ಕೆ ಪೂರಕವಾಗಿ ವಿತ್ತೀಯ ನೆರವು ನೀಡಲಾಗಿದೆ. ಪ್ರಧಾನಿ ಮೋದಿ ನೇತೃತ್ವದ ಆಡಳಿತದಲ್ಲಿ ಭಾರತ ಸುಭದ್ರವಾಗಿದೆ. ಅದೇ ರೀತಿ ನಿತೀಶ್ ನೇತೃತ್ವದಲ್ಲಿ ಬಿಹಾರ ಸುರಕ್ಷಿತವಾಗಿದೆ. ಹೀಗಾಗಿ, ಜನರು ಅದನ್ನೇ ಮುಂದುವರಿಸುವ ನಿಟ್ಟಿನಲ್ಲಿ ಮನಸ್ಸು ಮಾಡಬೇಕು ಎಂದು ನಡ್ಡಾ ಮತದಾರರಿಗೆ ಮನವಿ ಮಾಡಿದ್ದಾರೆ.
ಪ್ರಣಾಳಿಕೆ ಬಿಡುಗಡೆ: ಚುನಾವಣೆಗೆ ಅನುಗುಣವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ದಿಕ್ಸೂಚಿ ದಾಖಲೆ
“ಸಾತ್ ನಿಶ್ಚಯ’ ಎಂಬ 7 ಅಂಶಗಳ ಆಶ್ವಾಸನೆ ಬಿಡುಗಡೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗಾವ
ಕಾಶ ಪ್ರಧಾನವಾಗಿ ಉಲ್ಲೇಖವಾಗಿವೆ. ಇದೇ ವೇಳೆ, 2ನೇ ಹಂತದ ಚುನಾವಣೆಗಾಗಿ ಬಿಜೆಪಿ 46 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಕಾಂಗ್ರೆಸ್‌ನಿಂದ ಸಮಿತಿ
ಚುನಾವಣೆಗಾಗಿ ಕಾಂಗ್ರೆಸ್ ಕೂಡ ವಿವಿಧ ಸಮಿತಿಗಳನ್ನು ರಚಿಸಿದೆ. ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುಜೇìವಾಲಾ ನೇತೃತ್ವದಲ್ಲಿ ಚುನಾವಣ ನಿರ್ವಹಣ ಸಮಿತಿ ಮತ್ತು ಸಂಚಾಲನ ಸಮಿತಿ ರಚಿಸಲಾಗಿದೆ. ಮೋಹನ್ ಪ್ರಕಾಶ್ ಅದರ ಸಂಚಾಲಕರು. ಮಾಧ್ಯಮ ಸಮನ್ವಯ ಸಮಿತಿ, ಪ್ರಚಾರ ಸಮಿತಿಗಳ ರಚನೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮತಿ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.