ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಜ್ಯೂ.ಎನ್ ಟಿಆರ್ ಹಾಗೂ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
Team Udayavani, May 20, 2022, 1:11 PM IST
ಬೆಂಗಳೂರು: ಆರ್ ಆರ್ ಆರ್ ಸಿನಿಮಾದ ಭರ್ಜರಿ ಯಶಸ್ಸಿನ ನಡುವೆಯೇ ಜ್ಯೂ.ಎನ್ ಟಿಆರ್ ಶುಕ್ರವಾರ (ಮೇ 20) 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ಸಂದರ್ಭದಲ್ಲಿ ಜ್ಯೂ. ಎನ್ ಟಿಆರ್ ಅಭಿಮಾನಿಗಳಿಗೆ ಭರ್ಜರಿ ಖುಷಿಯ ಸಂಗತಿ ಹೊರಬಿದ್ದಿದೆ.
ನಿನ್ನೆಯಷ್ಟೇ ಎನ್ ಟಿಆರ್ 30 ಸಿನಿಮಾದ ಬಗ್ಗೆ ಘೋಷಣೆಯಾಗಿದ್ದು, ಇಂದು ಪ್ರಶಾಂತ್ ನೀಲ್ ನಿರ್ದೇಶನದ ಎನ್ ಟಿಆರ್ 31 ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಜ್ಯೂ.ಎನ್ ಟಿಆರ್ ಹಾಗೂ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಜ್ಯೂ.ಎನ್ ಟಿಆರ್ 31 ಸಿನಿಮಾದ ಫಸ್ಟ್ ಲುಕ್ ಫೋಟೊವನ್ನು ಪ್ರಶಾಂತ್ ನೀಲ್ ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ರಕ್ತದಲ್ಲಿ ತೋಯ್ದ ಮಣ್ಣು ನೆನಪಿನಲ್ಲಿ ಉಳಿಯುತ್ತದೆ, ಆದರೆ ಖಂಡಿತವಾಗಿಯೂ ರಕ್ತ ಮಾತ್ರ ಅವನದ್ದಲ್ಲ” ಎಂಬ ಅಡಿಬರಹ ನೀಡಲಾಗಿದೆ.
ಎನ್ ಟಿಆರ್ 30 ಸಿನಿಮಾವನ್ನು ಕೋರಟಾಲಾ ಶಿವ ಅವರು ನಿರ್ದೇಶಿಸಲಿದ್ದಾರೆ. ಮತ್ತೊಂದೆಡೆ ಕೆಜಿಎಫ್ ಚಾಪ್ಟರ್ 2 ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದೀಗ ತಮ್ಮ ಮುಂದಿನ ಸಿನಿಮಾವನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಜ್ಯೂ.ಎನ್ ಟಿಆರ್ ಹುಟ್ಟುಹಬ್ಬದ ದಿನದಂತೆ ಜ್ಯೂ.ಎನ್ ಟಿಆರ್ 31 ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪೋಸ್ಟರ್ ರೀತಿಯಲ್ಲೇ ಜ್ಯೂ.ಎನ್ ಟಿಆರ್ 31 ಚಿತ್ರದ ಕಪ್ಪು ಬಿಳುಪು ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದ್ದು, ರಗಡ್ ಲುಕ್ ನ ಜ್ಯೂ.ಎನ್ ಟಿಆರ್ 31 ಸಿನಿಮಾದ ಪೋಸ್ಟರ್ ನಲ್ಲಿ ಜ್ಯೂ.ಎನ್ ಟಿಆರ್ ಅಬ್ಬರಿಸಿದ್ದಾರೆ.
And then with @prashanth_neel pic.twitter.com/cUBWeSoxfW
— Jr NTR (@tarak9999) May 20, 2022
ಎನ್ ಟಿಆರ್ 31 ಚಿತ್ರವನ್ನು ಮೈತ್ರಿ ಮೂವಿ ಹಾಗೂ ಎನ್ ಟಿಆರ್ ಆರ್ಟ್ಸ್ ಜಂಟಿಯಾಗಿ ಬಂಡವಾಳ ಹೂಡಿದ್ದು, ಎನ್ ಟಿಆರ್ 30 ಸಿನಿಮಾ ಚಿತ್ರೀಕರಣ ಜುಲೈನಲ್ಲಿ ಪ್ರಾರಂಭವಾಗಲಿದ್ದು, ಎನ್ ಟಿಆರ್ 31 ಚಿತ್ರದ ಚಿತ್ರೀಕರಣ 2022ರ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.