ಜು. 17: ಭಾರತದ ಮೊದಲ ತಂಡ ಟೋಕಿಯೊದತ್ತ ಪ್ರಯಾಣ
Team Udayavani, Jul 6, 2021, 12:31 AM IST
ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳ ಮೊದಲ ತಂಡ ಜು. 17ರಂದು ಜಪಾನ್ಗೆ ಪ್ರಯಾಣ ಬೆಳೆಸಲಿದೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ನರೀಂದರ್ ಬಾತ್ರಾ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಾತ್ರಾ, “ಈಗಿನ ಯೋಜನೆಯಂತೆ ನಮ್ಮ ಮೊದಲ ಬ್ಯಾಚ್ನ ಕ್ರೀಡಾಪಟುಗಳನ್ನು ಜುಲೈ 17ರಂದು ಕಳುಹಿ ಸಲಾಗುತ್ತದೆ. ಇದಕ್ಕೆ ಪೂರಕವಾದ ಸಿದ್ಧತೆಗಳನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ನಡೆಸುತ್ತಿದೆ. ಆದರೆ ಕ್ವಾರಂಟೈನ್ ಹಾಗೂ ತರಬೇತಿಯ ಕಾರಣಗಳಿಂದಾಗಿ ಒಂದೆರಡು ದಿನ ಮೊದಲೇ ಕಳುಹಿಸುವ ಪ್ರಯತ್ನ ಕೂಡ ನಡೆಸುತ್ತಿದ್ದೇವೆ. ಈ ಕುರಿತು ಟೋಕಿಯೊದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ’ ಎಂದಿದ್ದಾರೆ.
ಆ್ಯತ್ಲೆಟಿಕ್ಸ್ ತಂಡ ಪ್ರಕಟ
ಟೋಕಿಯೊಗೆ ತೆರಳುವ ಭಾರತದ 26 ಸದಸ್ಯರ ಆ್ಯತ್ಲೆಟಿಕ್ಸ್ ತಂಡ ಪ್ರಕಟಗೊಂಡಿದೆ. ದ್ಯುತಿ ಚಂದ್, ಎಂ.ಪಿ. ಜಬೀರ್, ಗುರುಪ್ರೀತ್ ಸಿಂಗ್, ಅನ್ನು ರಾಣಿ ಮೊದಲಾದ ಸ್ಟಾರ್ ಆ್ಯತ್ಲೀಟ್ಸ್ ಇದರಲ್ಲಿದ್ದಾರೆ. 4×400 ಮೀ. ರಿಲೇಯಲ್ಲಿ ಪುರುಷರ ತಂಡ ಹಾಗೂ ಮಿಶ್ರ ತಂಡ ಸ್ಪರ್ಧಿಸಲಿದೆ. 16 ಕ್ರೀಡಾಪಟುಗಳು ವೈಯಕ್ತಿಕ ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಜು. 31ರಿಂದ ಆ್ಯತ್ಲೆಟಿಕ್ಸ್ ಸ್ಪರ್ಧೆ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.