Juneteenth: ಜೂನ್‌ಟೀಂಥ್ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನದ ಇತಿಹಾಸ…
2021ರಿಂದ ಅಧಿಕೃತವಾಗಿ ಆಚರಣೆ
Team Udayavani, Jun 15, 2024, 12:36 PM IST
ಜುಲೈ 4 ಅಮೆರಿಕದ ರಾಷ್ಟ್ರೀಯ ಮಟ್ಟದ ಸ್ವಾತಂತ್ರ್ಯದ ದಿನವೆಂದು ಇಡೀ ವಿಶ್ವವೇ ತಿಳಿದಿದೆ. ಆದರೆ ಇದಕ್ಕೆ ವ್ಯತಿರಕ್ತವಾಗಿ ಜೂನ್ 19 (ಜೂನ್ ಟೀಂಥ್) ಅನ್ನು ಅಮೆರಿಕದ ದ್ವಿತೀಯ ಸ್ವಾತಂತ್ರ್ಯ ದಿನವೆಂದು ಕರೆಯಲಾಗುತ್ತದೆ. ಅಮೆರಿಕನ್ನರು ಸಾಮಾನ್ಯವಾಗಿ ಈ ಎರಡು ವಿಷಯಗಳನ್ನು ಮಸುಕುಗೊಳಿಸಿದ್ದಾರೆ.
ಹೆಚ್ಚಾಗಿ ಜುಲೈ 4 ಅನ್ನು ಆಚರಿಸುವುದು ಸ್ವಾತಂತ್ರ್ಯ ದಿನದ ತತ್ತ್ವಗಳ ನಿಷ್ಠಾವಂತ ಉತ್ತರಾಧಿಕಾರಿಗಳು ಒಕ್ಕೂಟವಾಗಿ ಮತ್ತು ತಮ್ಮನ್ನು ತಾವು ಘೋಷಿಸಿಕೊಂಡ ವೈಯಕ್ತಿಕ ಸ್ವಾತಂತ್ರ್ಯವೆಂದು. ಆದರೆ ಜೂನ್‌ಟೀಂಥ್ ಆ ಗುಲಾಮ ಸರಕಾರಗಳ ಜಯ ಮತ್ತು ನಾಶವನ್ನು ಸಾರ್ವತ್ರಿಕ ವೈಯಕ್ತಿಕ ಸ್ವಾತಂತ್ರ್ಯ ಎಂದು ಆಚರಿಸುತ್ತದೆ. ಇದು 1865ರಲ್ಲಿ ಟೆಕ್ಸಾಸ್‌ನ ಗಾಲ್ವೆಸ್ಟನ್‌ನಲ್ಲಿ ಎಲ್ಲ ದಾಸ್ಯತೆಯ ಬೇಡಿಗಳಿಂದ ಮುಕ್ತಗೊಳಿಸಿದ ದಿನವಾಗಿದ್ದು, ದಾಸ್ಯದಿಂದ ಸಂಪೂರ್ಣ ಮುಕ್ತಿಯ ಸಂಕೇತವಾಗಿದೆ. ಇದು ಅಮೆರಿಕದ ಗುಲಾಮಗಿರಿಯ ಜನರ ವಿಮೋಚನೆಯನ್ನು ಸ್ಮರಿಸುತ್ತದೆ. ಅಪ್ರೋ-ಅಮೆರಿಕನ್ ಸಮುದಾಯದಲ್ಲಿ ಇದು ದಶಕಗಳಿಂದ ಆಚರಿಸಲಾಗುತ್ತಿದ್ದರೂ, ಇದನ್ನು ಅನೇಕ ಅಮೆರಿಕನ್ನರು ತುಂಬಾ ದಿನಗಳವರೆಗೆ ಅರಿಯಲಿಲ್ಲ. ಜೂನ್ 17, 2021ರಂದು, ಅಧ್ಯಕ್ಷ ಬೈಡನ್ ಬಿಲ್ಲಿಗೆ ಸಹಿ ಹಾಕಿ, ಜೂನ್‌ಟೀಂಥ್ ಅನ್ನು ಸರಕಾರದಿಂದ ಒಪ್ಪಿಗೆಯಾದ 11ನೇ ರಜಾದಿನವಾಗಿ ಅಧಿಕೃತವಾಗಿ ಘೋಷಿಸಿದ ಅನಂತರ ಹೊಸ ಅಧಿಕೃತವಾಗಿ “ಜೂನ್‌ಟೀಂಥ್ ರಾಷ್ಟ್ರೀಯ ಸ್ವಾತಂತ್ರ್ಯ ದಿನ’ ಎಂದು ಹೆಸರನ್ನು ಪಡೆದುಕೊಂಡಿದೆ.
ಜೂನ್‌ಟೀಂಥ್‌ನ ಇತಿಹಾಸ
ಜೂನ್‌ಟೀಂಥ್ ಎಂಬುದು ಗಂಭೀರತೆಯ ಮತ್ತು ಶಕ್ತಿಯ ದಿನವಾಗಿದೆ. ದೇಶದ ಮೇಲಿರುವ ವ್ಯವಸ್ಥಾತ್ಮಕ ವೈಷಮ್ಯ, ಅಸಮಾನತೆ ಮತ್ತು ಅಮಾನವೀಯತೆಯ ದೀರ್ಘ ಪರಂಪರೆಯಲ್ಲಿ ದಾಸ್ತಿಯ ನೈತಿಕ ಕೆಸರು ಮತ್ತು ಭಯಾನಕ ಬೆಲೆಯನ್ನು ನೆನೆಪಿಸುವ ದಿನವಾಗಿದೆ. ವಿಮೋಚನೆಯ ಘೋಷಣೆ (ಎಮ್ಯಾನ್ಸಿಪೇಶನ್ ಪ್ರೋಕ್ಲಮೇಶನ್): 1863ರ ಜನವರಿ 1ರಂದು, ಅಬ್ರಹಾಂ ಲಿಂಕನ್ ಎಮ್ಯಾನ್ಸಿಪೇಶನ್ ಪ್ರೋಕ್ಲಮೇಶನ್ ಹೊರಡಿಸಿದರು, ಇದರಿಂದ ದಕ್ಷಿಣದ ರಾಜ್ಯಗಳಲ್ಲಿ ಗುಲಾಮರನ್ನು ಮುಕ್ತಗೊಳಿಸಲಾಯಿತು. ಆದರೆ ದಕ್ಷಿಣದ ಕೆಲವು ಭಾಗಗಳಲ್ಲಿ ಈ ಸುದ್ದಿ ತಲುಪಲು ಸಮಯವಾಯಿತು. ಒಕ್ಕೂಟ ರಾಜ್ಯಗಳಲ್ಲಿ ಇದು ತತ್‌ಕ್ಷಣವೇ ಜಾರಿಗೆ ಬರಲಿಲ್ಲ. ಈ ಪ್ರಕಟಣೆಯು ತತ್‌ಕ್ಷಣ ಗುಲಾಮ ರಾಜ್ಯಗಳಲ್ಲಿ ಪರಿಣಾಮಕಾರಿಯಾಗಿರಲಿಲ್ಲ, ಮತ್ತು ಒಕ್ಕೂಟ ರಾಜ್ಯಗಳು ಯುದ್ಧದ ಕೊನೆಯವರೆಗೂ ಇದನ್ನು ಅನುಸರಿಸಲಿಲ್ಲ.
ಗಾಲ್ವೆಸ್ಟನ್‌ನಲ್ಲಿ ಘೋಷಣೆ: 1865ರ ಜೂನ್ 19ರಂದು, ಯುನಿಯನ್ ಸೇನೆಯ ಜನರಲ್ ಗಾರ್ಡನ್ ಗ್ರೇಂಜರ್ ಗಾಲ್ವೆಸ್ಟನ್‌ಗೆ ಬಂದು, “ಬೇಸಿಕ್ ಆರ್ಡರ್‌ನಂ. 3′ ಅನ್ನು ಘೋಷಿಸಿದ ಅನಂತರ ಟೆಕ್ಸಾಸ್‌ನಲ್ಲಿ 2,50,000 ಅಫೂÅà-ಅಮೆರಿಕನ್ನರಿಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿತು.
ವಿಮೋಚನಾ ಉದ್ಯಾನ: 1872ರಲ್ಲಿ, ಹ್ಯೂಸ್ಟನ್‌ನ ಆಫ್ರಿಕನ್ ಅಮೆರಿಕನ್ ಮಿನಿಸ್ಟರ್‌ಗಳು ಮತ್ತು ವ್ಯಾಪಾರಸ್ಥರ ಒಂದು ಗುಂಪು 10 ಎಕ್ರೆ ಭೂಮಿಯನ್ನು ಖರೀದಿಸಿ, ಎಮನ್ಸಿಪೇಶನ್ ಪಾರ್ಕ್ ಅನ್ನು ಸೃಷ್ಟಿಸಿದರು. ಇದು ನಗರದಲ್ಲಿ ವಾರ್ಷಿಕ ಜೂನ್‌ಟೀಂಥ್ ಹಬ್ಬವನ್ನು ಆಚರಿಸಲು ಉದ್ದೇಶಿಸಲಾಯಿತು. ಜೂನ್‌ಟೀಂಥ್ ಏಕೀಕರಣ: 1980ರಲ್ಲಿ, ಟೆಕ್ಸಾಸ್ ರಾಜ್ಯವು ಜೂನ್‌ಟೀಂಥ್ ಅನ್ನು ಅಧಿಕೃತವಾಗಿ ರಜೆ ಎಂದು ಘೋಷಿಸಿದ ಮೊದಲ ರಾಜ್ಯವಾಯಿತು. ಅನಂತರ, ಇದು ಇತರ ರಾಜ್ಯಗಳಲ್ಲಿ ಕೂಡ ಅಧಿಕೃತವಾದ ರಜೆ ಎಂದು ಘೋಷಿಸಲ್ಪಟ್ಟಿತು. 2021ರಲ್ಲಿ, ಜೂನ್‌ಟೀಂಥ್ ಅನ್ನು ಫೆಡರಲ್ ರಜೆಯಾಗಿ ಘೋಷಿಸಲಾಯಿತು.
ಸಾಮೂಹಿಕ ಸಂಭ್ರಮಾಚರಣೆ
ಜೂನ್‌ಟೀಂಥ್‌ನ ಸಂಭ್ರಮಾಚರಣೆ ಅಪ್ರೋ-ಅಮೇರಿಕನ್ ಸಮುದಾಯದಲ್ಲಿ ವಿಶೇಷವಾಗಿದೆ. ಈ ದಿನದಂದು ಸಾಂಪ್ರದಾಯಿಕವಾಗಿ ಬೃಹತ್ ಸಮಾರಂಭಗಳು, ಉದ್ಯಾನ ವಿಹಾರ, ನೃತ್ಯ, ಸಂಗೀತ, ಆಹಾರ ಉತ್ಸವಗಳು, ಕ್ರೀಡಾ ಕಾರ್ಯಕ್ರಮಗಳು, ಕುಸ್ತಿ, ಕುದುರೆ ಶ್ರೇಣಿ ಪ್ರದರ್ಶನಗಳು ಮತ್ತು ಪರೇಡ್‌ಗಳ ಮೂಲಕ ಆಚರಿಸಲಾಗುತ್ತದೆ. ಈ ದಿನದಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು, ಕಲಾವಿದರ ಪ್ರದರ್ಶನಗಳು, ಸ್ವಾತಂತ್ರ್ಯವನ್ನು ಜ್ಞಾಪಿಸುವ ಮತ್ತು ಕೀರ್ತಿಸುವ ಕಾವ್ಯ, ಇತಿಹಾಸ ಮತ್ತು ಅಂಕಣ ಲೇಖನಗಳನ್ನು ಓದುವಿಕೆ, ಗುಲಾಮಗಿರಿ ಇತಿಹಾಸ, ಧೈರ್ಯ, ಮತ್ತು ಸ್ವಾತಂತ್ರ್ಯದ ಬಗ್ಗೆ ಸಂವಾದ ಹಾಗೂ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಹಲವು ಸಮುದಾಯಗಳು ಚರ್ಚ್ ಸೇವೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದಿನವನ್ನು ಆಚರಿಸುತ್ತವೆ. ಇದು ಸಹಾನುಭೂತಿ ಮತ್ತು ಧೈರ್ಯದ ಸಾರನ್ನು ಪ್ರತಿಪಾದಿಸುತ್ತದೆ.
ಈ ದಿನವನ್ನು ಸ್ಮರಿಸಿ ಅರ್ಥೈಸುವದಕ್ಕಾಗಿ, ಶಾಲಾ ಕಾಲೇಜುಗಳು ಮತ್ತು ಸಮುದಾಯ ಕೇಂದ್ರಗಳು – ತತ್ತ್ವ, ಇತಿಹಾಸ, ಮತ್ತು ಸಾಮಾಜಿಕ ಪ್ರಜ್ಞೆಯನ್ನು ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವ
ದಾಸ್ಯ ಅಮೆರಿಕದ ಇತಿಹಾಸದ ಒಂದು ಕಪ್ಪು ಅಧ್ಯಾಯವಾಗಿದೆ. ಅನೇಕ ದಶಕಗಳ ಕಾಲ, ಅಮೆರಿಕದ ಆಪ್ರೋ-ಅಮೆರಿಕನ್ ಸಮುದಾಯ ಮಾನವೀಯತೆ ಮತ್ತು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದರಿಂದ, ಅವರ ಮೇಲೆ ಪ್ರಬಲವಾದ ಪರಿಣಾಮವನ್ನು ಬೀರಿತು. ದಾಸ್ಯದಿಂದ ಮುಕ್ತವಾಗಿ ಮತ್ತು ದಾಸ್ಯದಿಂದ ಬಂದ ಕಷ್ಟ ಮತ್ತು ನೋವನ್ನು ಸ್ಮರಿಸುವ ಸಲುವಾಗಿ “ವಿಮೋಚನಾ ದಿನ’ ಅಥವಾ “ದ್ವಿತೀಯ ಸ್ವಾತಂತ್ರ್ಯ ದಿನ’ ಎಂಬುದಾಗಿ ಮಹತ್ವ ಪಡೆಯಿತು. ದಾಸ್ಯವು ಕೇವಲ ಆ ಕಾಲದ ಅನ್ಯಾಯವಲ್ಲ, ಅದು ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಜಾತ್ಯತೀತ, ಅಸಮಾನತೆ, ಮತ್ತು ಮಾನವೀಯತೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಇಂದಿನ ಜಾಗತಿಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಪ್ರಮುಖ ಸಂಕೇತವಾಗಿದೆ.
ಜೂನ್‌ಟೀಂಥ್ ಅಮೆರಿಕದ ಕಪ್ಪು ಜನಾಂಗದ ಸ್ವಾತಂತ್ರ್ಯದ ಸಮಾರಂಭ ಮಾತ್ರವಲ್ಲದೆ, ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕುಗಳನ್ನು ಒದಗಿಸುವ ಮಹತ್ವವನ್ನು ಬೋಧಿಸುವಲ್ಲಿ ಯಶಸ್ವಿಯಾಗಿದೆ. ಈ ಏಕೀಕರಣವು ಗುಲಾಮಗಿರಿ ಅಂತ್ಯಗೊಂಡ ದಿನದ ಸ್ಮರಣೆ ಮಾತ್ರವಲ್ಲ, ಇದು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯದ ಹೋರಾಟವನ್ನು ನೆನಪಿಸಿ ಪ್ರತಿಪಾದಿಸುವ ಮಹತ್ವದ ದಿನ ಎಂದು ಪರಿಗಣಿಸಬಹುದು.
*ಡಾ| ಬ. ರಾ. ಸುರೇಂದ್ರ, ನ್ಯೂಯಾರ್ಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.