70 ವರ್ಷ ಬಳಿಕ ಭೂಮಿ ಸಮೀಪಕ್ಕೆ ಬರಲಿದೆ ಗುರು
Team Udayavani, Sep 26, 2022, 7:23 AM IST
ಉಡುಪಿ: ಭೂಮಿಗೆ ಸಮೀಪದಲ್ಲಿ ಗುರು ಗ್ರಹ ತನ್ನ ಪಥದಲ್ಲಿ ಹಾದು ಹೋಗುತ್ತಿದೆ. ಈ ಗ್ರಹ ವರ್ಷಕ್ಕೊಮ್ಮೆ ಭೂಮಿಗೆ ಸಮೀಪದಲ್ಲಿ ಹಾದು ಹೋದರೂ ಕಳೆದ 70 ವರ್ಷದ ಅನಂತರ ಇದೆ ಮೊದಲು ಎನ್ನುತ್ತಾರೆ ಖಗೋಳ ತಜ್ಞರು.
ಸೆ. 26ರಂದು ಗುರು ಗ್ರಹ ವಾರ್ಷಿಕ ಸಮೀಪ ಬರಲಿದೆ. ಇದನ್ನು ಖಗೋಳ ವಿಜ್ಞಾನದಲ್ಲಿ “ಜುಪಿಟರ್ ಅಪೊಸಿಷನ್’ ಎನ್ನುತ್ತಾರೆ. ಸೂರ್ಯನ ಸುತ್ತ ದೀರ್ಘವೃತ್ತದಲ್ಲಿ ಸುತ್ತುವ ಭೂಮಿ ಹಾಗೂ ಗುರುಗ್ರಹ 13 ತಿಂಗಳಿಗೊಮ್ಮೆ ಸಮೀಪಿಸುತ್ತವೆ.
ಹೀಗಾದಾಗ ಸೂರ್ಯಾಸ್ತವಾದೊಡನೆ ಪೂರ್ವ ಆಕಾಶದಲ್ಲಿ ಗುರು ಉದಯವಾಗಿ ರಾತ್ರಿಪೂರ್ತಿ ಕಾಣಿಸುತ್ತದೆ. ಈ ವರ್ಷ ಗುರು ಗ್ರಹವು ಭೂಮಿಯಿಂದ 59.1 ಕೋಟಿ ಕಿ.ಮೀ. ದೂರದಲ್ಲಿದೆ. ಇನ್ನೂ ಆರು ತಿಂಗಳಲ್ಲಿ ಭೂಮಿ ಯಿಂದ 94 ಕೋಟಿ ಕಿ.ಮೀ. ದೂರದ ಅಂತರವಿರಲಿದೆ. ಪ್ರಸ್ತುತ ಸಂಜೆ ಪೂರ್ವ ಆಕಾಶದಲ್ಲಿ ಗುರು ಗ್ರಹ ಹೊಳೆಯುವುದನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ಮತ್ತೆ ಎರಡು ವಾರ ಕಾಲ ಇದು ಇರಲಿದೆ. ದೂರದರ್ಶಕದಲ್ಲಿ ಸುಂದರವಾಗಿ ಗೋಚರವಾಗುತ್ತದೆ ಎಂದು ಖಗೋಳ ಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.