Juvenile delinquency: ರಾಜ್ಯದಲ್ಲಿ ಬಾಲಾಪರಾಧ ಪ್ರಕರಣ ಹೆಚ್ಚಳ!
ರಾಜಧಾನಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಅನಂತರದಲ್ಲಿ ತುಮಕೂರು, ಬೆಂಗಳೂರು ಗ್ರಾಮಾಂತರ
Team Udayavani, Aug 31, 2024, 6:55 AM IST
ಬೆಂಗಳೂರು: ಮಕ್ಕಳ ಸಂರಕ್ಷಣೆ, ವಿದ್ಯಾಭ್ಯಾಸ, ಕ್ರೀಡೆ ಸೇರಿ ಇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಟ್ಟದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಬಾಲಾಪರಾಧ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ. ರಾಜ್ಯಾದ್ಯಂತ ಕಳೆದ ಐದು ವರ್ಷಗಳಲ್ಲಿ 4,788 ಪ್ರಕರಣಗಳು ದಾಖಲಾಗಿವೆ.
ಹೌದು! ಉತ್ತಮ ಕೌಟುಂಬಿಕ ಪರಿಸರ, ಆರ್ಥಿಕ ಭದ್ರತೆ, ಹದಿಹರೆಯುವವರಿಗೆ ಉತ್ತಮ ಮಾರ್ಗದರ್ಶನ ಇಲ್ಲದಿರುವುದು, ಐಷಾರಾಮಿ ಜೀವನ, ಹೆಚ್ಚು ಹಣ ಸಂಪಾದಿಸಬೇಕೆಂಬ ಹಂಬಲ, ಆಮಿಷಗಳಿಗೆ ಒಳಗಾಗುವುದು, ಸಾಮಾಜಿಕ ಜಾಲತಾಣಗಳಿಂದ ನಿಂದನೆ, ಹೀಗೆ ನಾನಾ ಕಾರಣಗಳಿಂದಾಗಿ ಬಾಲ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಚಿಕ್ಕಪುಟ್ಟ ಕಳ್ಳತನದಿಂದ ಹಿಡಿದು ಕೊಲೆ ಮಾಡುವಂತಹ ದೊಡ್ಡ ಅಪರಾಧ ಕೃತ್ಯಗಳಲ್ಲಿ ಮಕ್ಕಳು ಭಾಗಿಯಾಗಿರು ವುದು ತೀರಾ ಆತಂಕಕಾರಿ ಸಂಗತಿಯಾಗಿದೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಂಕಿ-ಅಂಶಗಳ ಪ್ರಕಾರ, ಕ್ಷುಲ್ಲಕ, ಗಂಭೀರ ಹಾಗೂ ಘೋರ ಕೃತ್ಯಗಳಿಗೆ ಸಂಬಂಧಿಸಿ ಐದು ವರ್ಷಗಳಲ್ಲಿ 4,788 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ. 50ರಷ್ಟು ಕ್ಷುಲ್ಲಕ, ಶೇ. 27ರಷ್ಟು ಗಂಭೀರ ಹಾಗೂ ಶೇ. 21ರಷ್ಟು ಘೋರ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳು. ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು 1,315 ಪ್ರಕರಣಗಳು ದಾಖಲಾಗಿವೆ. ಅನಂತರ ಮೈಸೂರು ಜಿಲ್ಲೆಯಲ್ಲಿ 509 ಪ್ರಕರಣ, ಬೆಂಗಳೂರು ಗ್ರಾಮಾಂತರದಲ್ಲಿ 383, ವಿಜಯಪುರ ಜಿಲ್ಲೆಯಲ್ಲಿ 347, ಧಾರವಾಡ ಜಿಲ್ಲೆಯಲ್ಲಿ 264 ಪ್ರಕರಣಗಳು ದಾಖಲಾಗಿವೆ ಎಂದು ನಿರ್ದೇಶನಾಲಯದ ಅಧಿಕಾರಿಗಳು ತಿಳಿಸುತ್ತಾರೆ.
ಶಾಲಾ ಹಂತ ಮುಗಿಸುತ್ತಿರುವ 15ರಿಂದ 16 ವರ್ಷದ ಮಕ್ಕಳು ಹಾಗೂ ಕಾಲೇಜು ಮೆಟ್ಟಿಲೇರಿ, ಉತ್ತಮ ಭವಿಷ್ಯ ನಿರ್ಧರಿಸಿಕೊಳ್ಳುವಂತಹ 17ರಿಂದ 18 ವಯೋಮಾನದ ಮಕ್ಕಳು ಇಂತಹ ಅಪರಾಧ ಕೃತ್ಯಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಬಗ್ಗೆ ಪಾಲಕರು ಗಮನಹರಿಸಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ 5 ವರ್ಷಗಳಲ್ಲಿ 15-16 ವಯೋಮಾನದವರು 1,356 ಪ್ರಕರಣಗಳು ಹಾಗೂ 17ರಿಂದ 18 ವರ್ಷದ 3,169 ಮಕ್ಕಳ ವಿರುದ್ಧ ಪ್ರಕರಣಗಳು ದಾಖಲಾಗಿರುವುದನ್ನು ಮೂಲಗಳು ತಿಳಿಸಿವೆ.
“ಮಕ್ಕಳ ಸಂರಕ್ಷಣಾ ನಿರ್ದೇಶನಾಲಯದಿಂದ ಶಾಲಾ-ಕಾಲೇಜುಗಳ ಮಕ್ಕಳಲ್ಲಿ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪ್ರತೀ ಜಿಲ್ಲೆಗಳಲ್ಲಿ ಕೈಗೊಳ್ಳಲಾಗುತ್ತದೆ. 16-17 ವಯೋಮಿತಿಯ ಮಕ್ಕಳು ಹೆಚ್ಚಾಗಿ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಕುರಿತು ಪೋಷಕರು ಸೇರಿ ಎಲ್ಲರೂ ಗಮನಹರಿಸಬೇಕಾಗಿದೆ.” – ಡಾ| ಎಂ.ಆರ್. ರವಿ, ನಿರ್ದೇಶಕ, ರಾಜ್ಯದ ಮಕ್ಕಳ ರಕ್ಷಣಾ ನಿರ್ದೇಶನಾಲಯ
– ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.