ಬೆಂಗಳೂರು ಉದ್ಯಮಿ ಜತೆ ನಟಿ ಕಾಜಲ್ ಅಗರ್ವಾಲ್ ನಿಶ್ಚಿತಾರ್ಥ?
ಲಾಕ್ ಡೌನ್ ತೆರವಿನ ನಂತರ ಮಗಧೀರ ಖ್ಯಾತಿಯ ನಟಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ.
Team Udayavani, Aug 20, 2020, 9:58 AM IST
ಹೈದರಾಬಾದ್: ಲಾಕ್ಡೌನ್ ಸಂದರ್ಭದಲ್ಲಿ ಸಿನಿ ತಾರೆಗಳು ಸರದಿ ಪ್ರಕಾರ ಮದುವೆ ಮೂಡ್ಗೆ ಜಾರುತ್ತಿದ್ದಾರೆ. ನಟ ರಾಣಾ ದಗ್ಗುಭಾಟಿ ವಿವಾಹದ ಬೆನ್ನಲ್ಲೇ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ನಿಶ್ಚಿತಾರ್ಥದ ಸುದ್ದಿ ಎಲ್ಲೆಡೆ ಹಬ್ಬಿದೆ. ಬೆಂಗಳೂರಿನ ಉದ್ಯಮಿ ಕೋಟ್ಯಾಧೀಶ ಗೌತಮ್ ಅವರೊಂದಿಗೆ ಕಾಜಲ್ ಅಗರ್ವಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಿದೆ.
ನಿಶ್ಚಿತಾರ್ಥಕ್ಕೆ ಕಾಜಲ್ರ ಆಪ್ತ ಸ್ನೇಹಿತ, ನಟ ಬಲ್ಲಂಕೊಂಡ ಸಾಯಿ ಶ್ರೀನಿವಾಸ್ ಸಾಕ್ಷಿಯಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ನಿಶ್ಚಿತಾರ್ಥದ ಕುರಿತ ಯಾವುದೇ ಚಿತ್ರಗಳೂ ಬಹಿರಂಗವಾಗಿಲ್ಲ. ಲಾಕ್ ಡೌನ್ ತೆರವಿನ ನಂತರ ಮಗಧೀರ ಖ್ಯಾತಿಯ ನಟಿ ವಿವಾಹವಾಗಲಿದ್ದಾರೆ ಎನ್ನಲಾಗಿದೆ. ಕಾಜಲ್ ಕುಟುಂಬ ಮಾತ್ರ ನಿಶ್ಚಿತಾರ್ಥದ ಸುದ್ದಿಯನ್ನು ಅಲ್ಲಗಳೆದಿದೆ.
ಕಾಜಲ್ ಅಗರ್ವಾಲ್ ವಿವಾಹಕ್ಕೆ ಸಂಬಂಧಿಸಿದ ಸುದ್ದಿ ಇದೇ ಮೊದಲ ಬಾರಿ ಹರಿದಾಡಿಲ್ಲ. ನಟಿ ಸಾಮಾಜಿಕ ಜಾಲತಾಣ ದೀರ್ಘಕಾಲದವರೆಗೆ ಯಾವುದೇ ಪೋಸ್ಟ್ ಅಪ್ ಡೇಟ್ ಆಗದಿರುವುದನ್ನು ಗಮಿಸಿದ್ದ ಅಭಿಮಾನಿಗಳು ಮದುವೆಯಾಗಿರುವ ಅನುಮಾನ ವ್ಯಕ್ತಪಡಿಸಿದ್ದರು.
ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿದ್ದ ಕೊನೆಯ ಸಿನಿಮಾ ಜಯಂ ರವಿ ಜತೆ ನಟಿಸಿದ್ದ ಕೋಮಾಲಿ ತಮಿಳು ಸಿನಿಮಾದಲ್ಲಿ. ಇನ್ನು ಶಂಕರ್ ನಿರ್ದೇಶನದ, ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಇಂಡಿಯನ್ 2 ಸಿನಿಮಾದಲ್ಲಿ ಕಾಜಲ್ ಅಗರ್ವಾಲ್ ನಟಿಸಬೇಕಿದ್ದು, ಚಿತ್ರೀಕರಣ ಪುನರಾರಂಭವಾಗಲು ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಬೃಂದಾ ಗೋಪಾಲ್ ನಿರ್ದೇಶನದ “ಹೇ ಸಿನಾಮಿಕಾ” ಸಿನಿಮಾದಲ್ಲಿ ಅಗರ್ವಾಲ್ ಹೀರೋಯಿನ್ ಆಗಿದ್ದು ಚಿತ್ರೀಕರಣ ಆರಂಭಕ್ಕೆ ಸಿದ್ದತೆ ನಡೆಯತ್ತಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.