ಇಂಧನ ಇಲಾಖೆ ನೇಮಕದಲ್ಲಿ ಕನ್ನಡ ಕಡ್ಡಾಯ
ಶೇ.50ರಷ್ಟು ಅಂಕ ಪಡೆದರೆ ಮಾತ್ರ ಅರ್ಹತಾ ಪರೀಕ್ಷೆಗೆ ಅವಕಾಶ;ಈ ನಿರ್ಧಾರದಿಂದ ನೇಮಕಾತಿಯಲ್ಲಿ ಕನ್ನಡಿಗರಿಗೆ ಸಿಗಲಿದೆ ಆದ್ಯತೆ
Team Udayavani, Feb 7, 2022, 7:20 AM IST
ಬೆಂಗಳೂರು: ಇಂಧನ ಇಲಾಖೆಯ ವಿವಿಧ ಹುದ್ದೆಗಳ ನೇಮಕಕ್ಕೆ ಇನ್ನು ಮುಂದೆ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಾದ್ದು ಕಡ್ಡಾಯ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಅಪ್ಟಿಟ್ಯೂಡ್ ಪರೀಕ್ಷೆಗೂ ಮುನ್ನ ಕಡ್ಡಾಯವಾಗಿ ಕನ್ನಡ ಪರೀಕ್ಷೆ ಬರೆಯಬೇಕು ಹಾಗೂ ಅದರಲ್ಲಿ ಕನಿಷ್ಠ 50 ಅಂಕವನ್ನೂ ಪಡೆಯಬೇಕು ಎಂದು ಆದೇಶಿಸಲಾಗಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಮಾತ್ರ ಅರ್ಹತಾ ಪರೀಕ್ಷೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಅನ್ಯಾಯ ಸರಿಪಡಿಸುವ ಕಸರತ್ತು
2015ರಲ್ಲಿ ವಿವಿಧ ಹುದ್ದೆ ಗಳ ನೇಮಕದಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದ ಅನ್ಯರಾಜ್ಯಗಳ ಅಭ್ಯರ್ಥಿಗಳಿಗೆ ಅನುಕೂಲವಾಗಿತ್ತು. ಪರಿಣಾಮ 60ಕ್ಕೂ ಹೆಚ್ಚು ಹು¨ªೆಗಳು ಅನ್ಯರಾಜ್ಯದವರ ಪಾಲಾಗಿತ್ತು. ಈ ಬಾರಿ ಅಂತಹ ಲೋಪಗಳು ಆಗಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ನೀಡಿದ ಸೂಚನೆಯಂತೆ ಕೆಪಿಟಿಸಿಎಲ್ ನೇಮಕದಲ್ಲಿ ಕನ್ನಡ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.
ಗ್ರೂಪ್ “ಬಿ’ ಮತ್ತು “ಸಿ’ ಹುದ್ದೆಗಳಿಗಿರುವ ನಿಬಂಧನೆಗಳು
01.ಎಸೆಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊ ಮಾತರ ಗತಿಗಳಲ್ಲಿ ಕನ್ನಡ ವ್ಯಾಸಂಗ ಮಾಡಿದ್ದರೆ, “ಕಡ್ಡಾಯ ಕನ್ನಡ ಪರೀಕ್ಷೆ’ ಇರುವುದಿಲ್ಲ.
02. ಉಳಿದವರು ಅಪ್ಟಿಟ್ಯೂಡ್ ಪರೀಕ್ಷೆಗೆಮುನ್ನ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದು ಉತ್ತೀರ್ಣರಾಗಬೇಕು. ಆದರೆ ಈ ಅಂಕವನ್ನು ಹುದ್ದೆಗಳ ಆಯ್ಕೆಗೆ ಪರಿಗಣಿಸುವುದಿಲ್ಲ.
03. ಕಡ್ಡಾಯ ಕನ್ನಡ ಪರೀಕ್ಷೆ ಎಸೆಸೆಲ್ಸಿ ಪ್ರಥಮ ಭಾಷೆ ಮಟ್ಟದ್ದಾಗಿರುತ್ತದೆ.
ಒಂದಕ್ಕಿಂತ ಹೆಚ್ಚು ಹುದ್ದೆ ಗೆ ಅರ್ಜಿ ಸಲ್ಲಿಸಿದವರು ಕಡ್ಡಾಯ ಕನ್ನಡದ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಕು.
ಯಾವ ಹುದ್ದೆಗಳು?
– ಸಹಾಯಕ ಎಂಜಿನಿಯರ್(ವಿದ್ಯುತ್): 393, ಕಲ್ಯಾಣ ಕರ್ನಾಟಕ: 106
– ಸಹಾಯಕ ಎಂಜಿನಿಯರ್(ಸಿವಿಲ್ ): 21, ಕಲ್ಯಾಣ ಕರ್ನಾಟಕ: 7
– ಕಿರಿಯ ಎಂಜಿನಿಯರ್ (ವಿದ್ಯುತ್ ): 477, ಕಲ್ಯಾಣ ಕರ್ನಾಟಕ: 82
– ಕಿರಿಯ ಎಂಜಿನಿಯರ್ (ಸಿವಿಲ್ ): 21, ಕಲ್ಯಾಣ ಕರ್ನಾಟಕ : 8
– ಕಿರಿಯ ಸಹಾಯಕ: 357, ಕಲ್ಯಾಣ ಕರ್ನಾಟಕ: 3
ನೇಮಕ ಎಲ್ಲೆಲ್ಲಿ?
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ವ್ಯಾಪ್ತಿಯ ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾ ನಿಸಿದ್ದು, ಫೆ. 1ರಂದು ಅಧಿಸೂಚನೆ ಹೊರ ಡಿಸಲಾಗಿದೆ. ಫೆ. 7ರಿಂದ ಮಾ. 7ರ ತನಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.