ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

Team Udayavani, Jul 26, 2021, 7:15 AM IST

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

“ಕಾರ್ಗಿಲ್‌ ವಿಜಯ ದಿವಸ’ ಅಥವಾ “ಆಪರೇಷನ್‌ ವಿಜಯ’ಕ್ಕೆ ಇಂದು 22 ವರ್ಷ ಪೂರ್ಣಗೊಂಡಿದ್ದು, ಪಾಕಿಸ್ಥಾನದ ವಿರುದ್ಧ ವಿಜಯ ಪತಾಕೆ ಹಾರಿಸಿದ ಭಾರತ ಮಾತೆಯ ವೀರ ಪುತ್ರರನ್ನು ಇಡೀ ದೇಶವೇ ಸ್ಮರಿಸುತ್ತಿದೆ. ಕಾರ್ಗಿಲ್‌ ಯುದ್ಧ ವೀರರ ನೆನಪಲ್ಲಿ ಪ್ರತೀ ವರ್ಷವೂ ದೇಶವಾಸಿಗಳು “ವಿಜಯ ದಿವಸ’ವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ, ಈ ವರ್ಷವೂ ದ್ರಾಸ್‌ನ ಕಾರ್ಗಿಲ್‌ ಯುದ್ಧ ಸ್ಮಾರಕದಲ್ಲಿ ವಿಜಯ ದಿವಸ ಆಚರಣೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ.

ಧ್ರುವ ಕಾರ್ಗಿಲ್‌ ರೈಡ್‌
ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್‌ 2 ದಿನಗಳ ಮೋಟಾರ್‌ ಸೈಕಲ್‌ ರ್ಯಾಲಿಗೆ ಗುರುವಾರವೇ ಚಾಲನೆ ನೀಡಿದ್ದು, ಯೋಧರು 25 ಬೈಕುಗಳಲ್ಲಿ ಉಧಾಂಪುರದಿಂದ ದ್ರಾಸ್‌ಗೆ ಸಂಚಾರ ಆರಂಭಿಸಿದ್ದಾರೆ. ಲೆ|ಜ| ವೈ.ಕೆ. ಜೋಶಿ ಅವರು “ಧ್ರುವ ಕಾರ್ಗಿಲ್‌ ರೈಡ್‌’ನ ನೇತೃತ್ವ ವಹಿಸಿದ್ದಾರೆ.

ರಾಷ್ಟ್ರಪತಿ ಭೇಟಿ
ಜಮ್ಮು-ಕಾಶ್ಮೀರ ಮತ್ತು ಲಡಾಖ್‌ಗೆ 4 ದಿನಗಳ ಭೇಟಿಗಾಗಿ ರಾಷ್ಟ್ರಪತಿ ಕೋವಿಂದ್‌ ರವಿವಾರ ಶ್ರೀನಗರಕ್ಕೆ ಬಂದಿಳಿದಿದ್ದಾರೆ. ಸೋಮವಾರ ಅವರು ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ.

ಕಾರ್ಗಿಲ್‌ ನೆನಪು
1999ರ ಜುಲೈ 26… ಕಾರ್ಗಿಲ್‌ ನಲ್ಲಿ ಪಾಕಿಸ್ಥಾನದ ಸೈನಿಕರನ್ನು ಹಿಮ್ಮೆಟ್ಟಿಸಿ ಭಾರತದ ಸಶಸ್ತ್ರ ಪಡೆಯ ವೀರ ಯೋಧರು ವಿಜಯ ಪತಾಕೆಯನ್ನು ಹಾರಿಸಿದ ದಿನ. 1998-99ರ ಚಳಿಗಾಲದ ಅವಧಿಯಲ್ಲಿ ಪಾಕಿಸ್ಥಾನವು ತನ್ನ ಸೇನಾಪಡೆ ಮತ್ತು ಉಗ್ರರನ್ನು ಗಡಿ ನಿಯಂತ್ರಣ ರೇಖೆಯ ಭಾರತದ ಬದಿಗೆ ಕಳುಹಿಸತೊಡಗಿತ್ತು. ಮೇ ತಿಂಗಳಲ್ಲಿ ಪಾಕ್‌ನ ಈ ಸಂಚು ಬೆಳಕಿಗೆ ಬರುತ್ತಿದ್ದಂತೆ, ಅಲರ್ಟ್‌ ಆದ ಭಾರತೀಯ ಸೇನೆ “ಆಪರೇಷನ್‌ ವಿಜಯ’ದ ರಣಕಹಳೆ ಮೊಳಗಿಸಿತು. ಪಾಕ್‌ ಅತಿಕ್ರಮಿಸಿರುವ ನಮ್ಮ ದೇಶದ ಭೂಭಾಗಗಳನ್ನು ಮರಳಿ ಪಡೆಯಲು 2 ಲಕ್ಷ ಯೋಧರನ್ನು ಜಮಾವಣೆಗೊಳಿಸಲಾಯಿತು. ಸತತ ಮೂರು ತಿಂಗಳ ಹೋರಾಟದ ಬಳಿಕ ಪಾಕ್‌ ಸೇನೆಯನ್ನು ಹಿಮ್ಮೆಟ್ಟಿಸಿ, ಭಾರತೀಯ ಭೂಭಾಗಗಳನ್ನು ಸೇನೆ ಮತ್ತೆ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಯಿತು.

ಅಂದು ಕಾರ್ಗಿಲ್‌ ನಲ್ಲಿ ಆಗಿದ್ದೇನು?
ಮೇ 4, 1999: ಕಾರ್ಗಿಲ್‌ ನಲ್ಲಿ ಪಾಕಿಸ್ಥಾನದ ಅತಿಕ್ರಮಣ
ಮೇ 5-15: ಸೇನಾ ಗಸ್ತು ಪಡೆ ರವಾನೆ. ಐವರು ಯೋಧರಿಗೆ ಚಿತ್ರ ಹಿಂಸೆ ನೀಡಿ ಕೊಲೆ
ಮೇ 26: ಭಾರ ತೀಯ ವಾಯುಪಡೆಯಿಂದ ವೈಮಾನಿಕ ದಾಳಿ
ಮೇ 27: ಮಿಗ್‌-27 ವಿಮಾನಕ್ಕೆ ಗುಂಡು. ಹಾರಿ ತಪ್ಪಿಸಿಕೊಂಡ ಪೈಲಟ್‌ ಅನ್ನು ವಶಕ್ಕೆ ಪಡೆದ ಪಾಕ್‌
ಜೂನ್‌ 10: ಭಾರ ತದ 6 ಯೋಧರ ತುಂಡರಿಸಿದ ದೇಹವನ್ನು ಹಸ್ತಾಂತರಿಸಿದ ಪಾಕ್‌. ಕೆರಳಿದ ಭಾರತೀಯ ಸೇನೆ.
ಜೂನ್‌ 12: ಉಭಯ ದೇಶಗಳ ವಿದೇಶಾಂಗ ಸಚಿವರಾದ ಜಸ್ವಂತ್‌ ಸಿಂಗ್‌ ಮತ್ತು ಸರ್ತಾಜ್‌ ಅಜೀಜ್‌ ನಡುವೆ ಸಭೆ ವಿಫ‌ಲ
ಜೂನ್‌ 15: ಕಾರ್ಗಿಲ್‌ ನಿಂದ ಸೇನೆ ಹಿಂಪಡೆಯುವಂತೆ ಪಾಕ್‌ ಪ್ರಧಾನಿಗೆ ಅಮೆರಿಕ ಆಗ್ರಹ
ಜೂನ್‌ 29: ಟೈಗರ್‌ ಹಿಲ್‌ ಸಮೀಪದ ಎರಡು ಮಹತ್ವದ ಶಿಬಿರಗಳನ್ನು ತನ್ನ ವಶಕ್ಕೆ ಪಡೆದ ಭಾರತೀಯ ಸೇನೆ
ಜುಲೈ 11: ಸೇನೆ ವಾಪಸಾತಿ ಪ್ರಕ್ರಿಯೆ ಆರಂಭಿಸಿದ ಪಾಕ್‌
ಜುಲೈ 26: ಯುದ್ಧ ಗೆದ್ದ ಭಾರತ; ಕಾರ್ಗಿಲ್‌ ನಿಂದ ಕಾಲ್ಕಿತ್ತ ಪಾಕ್‌ ಪಡೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.