Karkala: ಈದು ಗ್ರಾಮವನ್ನು ಮರೆತು ಬಿಟ್ಟಿದೆಯೇ ಸರಕಾರ?
ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದಿದ್ದ ಊರು ಭರವಸೆಯಲ್ಲೇ ಉಳಿದ ಸೌಕರ್ಯ, ಅಭಿವೃದ್ಧಿ
Team Udayavani, Nov 10, 2024, 7:35 AM IST
ಕಾರ್ಕಳ: ಪಶ್ಚಿಮಘಟ್ಟ ತಪ್ಪಲಿನ ಹಸುರು ಸಿರಿಯ ಸೆರಗನ್ನು ಹೊದ್ದಿರುವ ಈದು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವು ಇನ್ನೂ ನಕ್ಸಲ್ ಕರಿನೆರಳಿನ ಆತಂಕದಲ್ಲೇ ಇದೆ. 21 ವರ್ಷಗಳ ಹಿಂದೆ ಇಲ್ಲಿಗೆ ಸಮೀಪದ ಬೊಳ್ಳೆಟ್ಟಿನಲ್ಲಿ ರಾಜ್ಯದ ಮೊದಲ ನಕ್ಸಲ್ ಎನ್‌ಕೌಂಟರ್ ನಡೆದಿತ್ತು. ಆ ಬಳಿಕ ಗ್ರಾಮದ ಅಭಿವೃದ್ಧಿ ಭರವಸೆ ಸಿಕ್ಕಿತ್ತಾದರೂ ಯಾವುದೂ ಅನುಷ್ಠಾನಕ್ಕೆ ಬಾರದೆ ಜನರ ಕಷ್ಟ ಜೀವಂತವಾಗಿಯೇ ಇದೆ.
ಈದು ಗ್ರಾಮದ ಬಹುತೇಕ ಮಂದಿ ಕೃಷಿ, ಹೈನುಗಾರಿಕೆ, ಕಾಡುತ್ಪತ್ತಿ ಸಂಗ್ರಹಿಸಿ ಜೀವಿಸುವರು. ಹೊಟ್ಟೆಪಾಡಿಗೆ ಕೃಷಿ ಸಂಬಂಧಿತ ಕೆಲಸ ಮಾಡಿಕೊಂಡು ಬದುಕುವ ಇವರಿಗೆ ಸರಕಾರ ಕನಿಷ್ಠ ಮೂಲಸೌಕರ್ಯವನ್ನೂ ಒದಗಿಸಲು ಮುಂದಾಗದಿರುವುದು ಟೀಕೆಗೆ ಗುರಿಯಾಗಿದೆ.
ಜನರಿಗೆ ಕಷ್ಟವೇ ನಿತ್ಯದ ಜತೆಗಾರ
ರಸ್ತೆ, ಬೀದಿದೀಪ, ವಿದ್ಯುತ್, ಪಡಿತರ ವ್ಯವಸ್ಥೆ, ಕಂದಾಯ ಸೇವೆ, ಆರೋಗ್ಯ, ಶಿಕ್ಷಣ ಮುಂತಾದ ಎಲ್ಲ ವಿಷಯಗಳಿಂದಲೂ ಇಲ್ಲಿನ ಜನರು ಪಡುವ ಕಷ್ಟ ಅಷ್ಟಿಷ್ಟಲ್ಲ. ಭೌಗೋಳಿಕವಾಗಿಯೂ ಗ್ರಾಮದ ಕೆಲವರಿಗೆ ದ.ಕ. ಜಿಲ್ಲೆಯ ನಾರಾವಿ ಪೇಟೆಯೇ ಹತ್ತಿರ. ಆದರೆ ಆಡಳಿತ ವ್ಯವಸ್ಥೆಯ ಅಗತ್ಯಗಳಿಗಾಗಿ ಸುತ್ತು ಬಳಸಿ ದೂರದ ಈದು ಗ್ರಾ. ಪಂ.ಗೆ ಬರಬೇಕು. ಕೆಲವರಲ್ಲಿ ಉತ್ತಮ ಮನೆ ಇದೆಯಾದರೂ ಹೆಚ್ಚಿನವರು ಇದರಿಂದ ಹೊರತಾಗಿದ್ದಾರೆ. ಆರ್ಥಿಕವಾಗಿ ಅಲ್ಲಿನ ಸದೃಢರಲ್ಲ. ದಿನವಹಿ ಸಂಬಳಕ್ಕೆ ದುಡಿಯುವವರೇ ಹೆಚ್ಚು.
ಖಾಯಂ ಸಿಬಂದಿ ಇಲ್ಲ
ಗ್ರಾಮದಲ್ಲಿ ಲೆಕ್ಕಾಚಾರದಂತೆ ಒಂದು ಪಶು ಆಸ್ಪತ್ರೆ, ಒಂದು ಸಾರ್ವಜನಿಕ ಆರೋಗ್ಯ ಕೇಂದ್ರವಿದೆ. ಎರಡರಲ್ಲೂ ಖಾಯಂ ಸಿಬಂದಿ ಇಲ್ಲ. ಪಶು ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಇಲ್ಲಿರುವ ಹೆಚ್ಚುವರಿ ವೈದ್ಯರು, ಸಿಬಂದಿ ಒತ್ತಡದಲ್ಲೇ ಕಾರ್ಯನಿರ್ವಹಿಸಬೇಕು. ಈದು ಗ್ರಾ. ಪಂ. ಕಚೇರಿ ಮುಂಭಾಗವೇ ಸರಕಾರಿ ಪ್ರೌಢಶಾಲೆ ಇದೆ. 400ಕ್ಕೂ ಅಧಿಕ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಆರು ವರ್ಷಗಳಿಂದ ಸರಕಾರಿ ಕಾಲೇಜು ಸ್ಥಾಪನೆ ಗ್ರಾಮಸ್ಥರು ಬೇಡಿಕೆ ಇಟ್ಟರೂ ಇನ್ನೂ ಈಡೇರಿಲ್ಲ. ಸರಕಾರ ಶಿಕ್ಷಣ ವಿಷಯದಲ್ಲಿಯೂ ಈ ಊರಿನ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂಬುದು ಸ್ಥಳೀಯ ಜನರ ಅಳಲು ಆಗಿದೆ.
ಬೊಳ್ಳೆಟ್ಟು ಪರಿಸ್ಥಿತಿಯೂ ಭಿನ್ನವೇನಲ್ಲ
ಈದು ಸಮೀಪದ ಬೊಳ್ಳೆಟ್ಟು ಗ್ರಾಮದವರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಇಲ್ಲಿ 60ರಿಂದ 70 ಮನೆಗಳಿಗೆ. ಇದೇ ಗ್ರಾಮದಲ್ಲಿ 21 ವರ್ಷಗಳ ಹಿಂದೆ ನಕ್ಸಲ್ ಎನ್‌ಕೌಂಟರ್ ನಡೆದದ್ದು. ಅನಂತರ ಇಲ್ಲಿಗೆ ಸಚಿವರು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು, ವಿವಿಧ ಇಲಾಖೆ ನಿರ್ದೇಶಕರು, ಆಯುಕ್ತರು, ರಾಷ್ಟ್ರ, ರಾಜ್ಯ ಮಟ್ಟದ ಮಾನವ ಹಕ್ಕು ಹೋರಾಟಗಾರರು ಸಹಿತ ಎಲ್ಲರೂ ಬಂದು ಸಾಕಷ್ಟು ಭರವಸೆ ನೀಡಿ ಹೋಗಿದ್ದರಾದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಸ್ಥಳೀಯರ ವಿವರಣೆ.
ಕಾಡುಪ್ರಾಣಿಗಳ ಉಪಟಳ, ಸಿಗದ ಪರಿಹಾರ
ಭತ್ತ, ಅಡಕೆ, ಬಾಳೆ ಕೃಷಿಯನ್ನೇ ನಂಬಿ ಜೀವನ ಸಾಗಿಸುವ ಇಲ್ಲಿನವರಿಗೆ ಕಾಡು ಪ್ರಾಣಿಗಳ ಉಪಟಳ ವಿಪರೀತವಾಗಿದೆ. ಕಾಡು ಹಂದಿ, ಕಡವೆ, ನವಿಲು, ಮಂಗನ ಕಾಟದಿಂದ ಕೃಷಿ ನಿರಂತರವಾಗಿ ಹಾನಿಗೀಡಾದುತ್ತದೆ. ಪರಿಹಾರಕ್ಕಾಗಿ ಅರಣ್ಯ ಇಲಾಖೆ ಸಹಿತ ಎಲ್ಲಕಡೆ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ. ಪರಿಹಾರ ಮಾತ್ರ ಮರೀಚಿಕೆಯಾಗಿದೆ ಎನ್ನುತ್ತಾರೆ ಇಲ್ಲಿನ ಕೃಷಿಕರು.
2,536 ಕುಟುಂಬ
ಎರಡು ಕಂದಾಯ ಗ್ರಾಮ ಒಳಗೊಂಡಿರುವ ಈದು ಗ್ರಾ. ಪಂ. ವ್ಯಾಪ್ತಿಯಲ್ಲಿ 2,536 ಕುಟುಂಬಗಳಿವೆ. ಇದರಲ್ಲಿ 537 ಪ. ಜಾತಿ ಕುಟುಂಬ, 71 ಪ. ಪಂಗಡ ಕುಟುಂಬ, 1,927 ಇತರ ಸಮುದಾಯಗಳಿವೆ. ಒಟ್ಟು 11,569 ಜನಸಂಖ್ಯೆ ಇಲ್ಲಿದ್ದು. ಈ ಪೈಕಿ 96 ಮಂದಿ ಅಂಗವಿಕಲರು.
ಮುಂದುವರಿದ ಎಎನ್‌ಎಫ್ ಕೂಂಬಿಂಗ್
ಈದು ಗ್ರಾಮದಲ್ಲಿ ನಕ್ಸಲರ ಚಟುವಟಿಕೆ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಮುಂಜಾನೆಯಿಂದ ಆರಂಭಗೊಂಡ ಎಎನ್‌ಎಫ್ ಕೂಂಬಿಂಗ್ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿತ್ತು.ಉಡುಪಿ ದ.ಕ. ಗಡಿ ಭಾಗದಲ್ಲಿರು ಸೂಕ್ಷ್ಮ ಅರಣ್ಯ ಪ್ರದೇಶವನ್ನು ಜಾಲಾಡುತ್ತಿದ್ದಾರೆ. ಈದು, ನಾರಾವಿ, ಹೆಬ್ರಿ ಮೊದಲಾದ ಕಡೆಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ಬಿಗುಗೊಂಡಿದೆ. 4 ತಂಡಗಳಾಗಿ ಶಸ್ತ್ರಸಜ್ಜಿತ ತಂಡ ಪರಿಶೀಲನೆ ಕೈಗೊಂಡಿದೆ.
ಶ್ವಾನಪಡೆಯು ಎಎನ್‌ಎಫ್ ಸಿಬಂದಿಗೆ ಸಾಥ್ ನೀಡಿದ್ದು, ಡ್ರೋನ್ ಕೆಮರಾ ಬಳಕೆ ಸಹಿತ ಇನ್ನಿತರ ತಾಂತ್ರಿಕ ಆಯಾಮಗಳಲ್ಲೂ ಕಾರ್ಯಚರಣೆ ಮುಂದುವರಿದಿದೆ. ಸ್ಥಳೀಯರಲ್ಲೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಗಳ ಕಾರ್ಯಾಚರಣೆಯಲ್ಲಿ ನಕ್ಸಲ್ ಚಟುವಟಿಕೆ ಸಂಬಂಧಿಸಿ ಯಾವುದೆ ಸುಳಿವು ಲಭ್ಯವಾಗಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ವದಂತಿಗೆ ಕಿವಿಗೊಡಬೇಡಿ: ಎಎನ್‌ಎಫ್ ಎಸ್‌ಪಿ
ಸದ್ಯಕ್ಕೆ ಈದು ಗ್ರಾಮದಲ್ಲಿ ನಕ್ಸಲ್ ಚಟುವಟಿಕೆ ಎಂಬುದು ವದಂತಿಯಾಗಿದ್ದು, ಇದಕ್ಕೆ ಸ್ಥಳೀಯರು ಕಿವಿಗೊಡಬೇಡಿ. ಯಾರೂ ಆತಂಕಗೊಳ್ಳಬೇಕಿಲ್ಲ. ಎಂದಿನಂತೆ ಎಎನ್‌ಎಫ್ ಸಿಬಂದಿ ಕೂಂಬಿಂಗ್ ನಡೆಸುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳಿದ್ದಲ್ಲಿ ಸ್ಥಳೀಯರೂ ಮಾಹಿತಿ ನೀಡುತ್ತಾರೆ. ನಮ್ಮವರು ಈ ಬಗ್ಗೆ ನಿಗಾ ವಹಿಸುತ್ತಾರೆ. ಇಲ್ಲಿಯವರೆಗೆ ಅನುಮಾನಾಸ್ಪದ ವ್ಯಕ್ತಿಗಳ ಓಡಾಟದ ಬಗ್ಗೆ ತಿಳಿದು ಬಂದಿಲ್ಲ. – ಜಿತೇಂದ್ರ ಕುಮಾರ್ ದಯಾಮ, ಎಸ್‌ಪಿ, ಎಎನ್‌ಎಫ್, ಕಾರ್ಕಳ
ಈದು ಅಭಿವೃದ್ಧಿಗೆ ವಿಶೇಷ ಆದ್ಯತೆ
ಈದು ಜನರ ಬೇಡಿಕೆಗೆ ಸ್ಪಂದಿಸಲು ಮತ್ತು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾರ್ಕಳ, ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಅನುದಾನ ಲಭ್ಯತೆ ನೋಡಿಕೊಂಡು ತಾ. ಪಂ., ಜಿ. ಪಂ. ನಿಂದ ಮೂಲಸೌಕರ್ಯಕ್ಕೆ ಬೇಕಾದ ವಾರ್ಷಿಕ ಅನುದಾನ ಜನಪ್ರತಿನಿಧಿಗಳ ಬೇಡಿಕೆಯಂತೆ ಒದಗಿಸಲಾಗುತ್ತಿದೆ. ಈದು ಗ್ರಾಮದಲ್ಲಿ ರಸ್ತೆ ಸಮಸ್ಯೆ, ಸೇತುವೆ ಕಾಮಗಾರಿ ಬಾಕಿ ಸಹಿತ ಆರೋಗ್ಯ, ಪಶು ವೈದ್ಯಕೀಯ ಇಲಾಖೆಯಲ್ಲಿ ಸಿಬಂದಿ ಕೊರತೆ, ಕಾಲೇಜು ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು. – ಪ್ರತೀಕ್ ಬಾಯಲ್, ಸಿಇಒ, ಜಿ. ಪಂ. ಉಡುಪಿ.
– ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.