ಕಾರ್ಕಳ; ವೈಷಮ್ಯಕ್ಕೆ ಒಡಹುಟ್ಟಿದ ಅಣ್ಣನನ್ನು ಇರಿದು ಕೊಂದ ತಮ್ಮ
ಶೇಖರ್ ಮತ್ತು ರಾಜು ಸಹೋದರರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
Team Udayavani, Mar 7, 2022, 9:48 AM IST
ಕಾರ್ಕಳ, ಮಾ. 6: ಜಾಗದ ತಕರಾರಿನ ವೈಷಮ್ಯಕ್ಕೆ ಒಡಹುಟ್ಟಿದ ಅಣ್ಣನನ್ನೇ ಚೂರಿಯಿಂದ ಇರಿದು ಕೊಂದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳ ಎಂಬಲ್ಲಿ ಮಾ. 6ರಂದು ಸಂಭವಿಸಿದೆ.
ಇದನ್ನೂ ಓದಿ:ರಷ್ಯಾದಲ್ಲಿ ಆಹಾರ ಹಾಹಾಕಾರ; ಆಹಾರ ವಸ್ತುಗಳ ಮಿತ ಬಳಕೆಗೆ ಪುತಿನ್ ಸರಕಾರದಿಂದ ಆದೇಶ
ಪರಿಶಿಷ್ಟ ಜಾತಿಗೆ ಸೇರಿದ ಶೇಖರ್ (50) ಕೊಲೆಯಾದವರು. ಅವರ ಸಹೋದರ ರಾಜು (35) ಕೊಲೆಗೈದ ಆರೋಪಿ. ಜಾಗದ ತಕರಾರಿಗೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ. ಶೇಖರ್ ಮತ್ತು ರಾಜು ಸಹೋದರರು ಪ್ರತ್ಯೇಕ ವಾಗಿ ವಾಸಿಸುತ್ತಿದ್ದರು.
ತಾಯಿಗೆ ಮಂಜೂರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದರು. ಅಣ್ಣನೊಂದಿಗೆ ವೈಮನಸ್ಸಿನಿಂದ ರಾಜು ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ ವಾಸವಾಗಿದ್ದ. ರವಿವಾರ ಶೇಖರ ಮನೆಯಲ್ಲಿ ಅಂಗಳದ ಕೆಲಸದಲ್ಲಿ ನಿರತನಾಗಿದ್ದರು. ಮೂವರು ಕೆಲಸಗಾರರೊಂದಿಗೆ ಜಲ್ಲಿಯನ್ನು ಹೊತ್ತು ಮನೆಗೆ ಸಾಗಿಸುತ್ತಿದ್ದರು.
ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ ರಾಜು ಮನೆಯಲ್ಲಿ ದುರಸ್ತಿ ಕೆಲಸ ಮಾಡದಂತೆ ಆಕ್ಷೇಪಿಸಿದ್ದ. ಅದಕ್ಕೆ ಶೇಖರ ಕಿವಿಗೊಡದೆ ತನ್ನ ಪಾಡಿಗೆ ಕೆಲಸ ಮುಂದುವರಿಸಿದ್ದರು. ನಿನಗೆ ಕಲಿಸುತ್ತೇನೆ ಎಂದು ಬೆದರಿಕೆಯೊಡ್ಡಿ ತನ್ನ ಮನೆಗೆ ತೆರಳಿದ ರಾಜು ಚೂರಿಯನ್ನು ಜತೆಗೆ ತಂದು ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ. ಗಂಭೀರ ಗಾಯಗೊಂಡು ಅತೀವ ರಕ್ತಸ್ರಾವದಿಂದ ಶೇಖರ ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.