ಇಂದು ಕರ್ನಾಟಕ ಬಂದ್: ಬಿಗು ಭದ್ರತೆ, ಎಲ್ಲಿ ಹೇಗಿದೆ ಪರಿಸ್ಥಿತಿ?
Team Udayavani, Feb 13, 2020, 9:12 AM IST
ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಇಂದು ಆಚರಿಸಲಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಸಂಚಾರ ವ್ಯವಸ್ಥೆ ಸಹಜವಾಗಿದ್ದರೂ ಬೆಳಗಿನ ಜಾವ ಹಲವೆಡೆ ಜನ ಸಂಚಾರ ವಿರಳವಾಗಿದೆ, ಕರಾವಳಿ ಜಲ್ಲೆಗಳಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ.
ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿಯನ್ನು ಸರಕಾರ ಜಾರಿ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಖಾಸಗಿ ಸಂಚಾರಿ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಓಲಾ, ಊಬರ್, ಖಾಸಗಿ ಟ್ಯಾಕ್ಸಿ, ಆಟೋ ರಿಕ್ಷಾಗಳು ಬಂದ್ ಗೆ ಬೆಂಬಲ ಸೂಚಿಸಿದೆ. ಈ ಸೇವೆಗಳನ್ನೇ ನಂಬಿರುವವರು ಇಂದು ಪರದಾಡುತ್ತಿರುವುದು ಕಂಡು ಬಂದಿದೆ.
ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಇವುಗಳ ಸಂಚಾರ ಯಥಾಸ್ಥಿತಿಯಿದೆ. ಆದರೆ ಬಂದ್ ಕಾರಣದಿಂದ ಜನ ಸಂಚಾರ ವಿರಳವಾಗಿದ್ದು, ಬಸ್ ಗಳು ಬಹುತೇಕ ಖಾಲಿ ಖಾಲಿಯಾಗಿ ಸಂಚರಿಸುತ್ತಿವೆ.
ಶಾಲಾ ಕಾಲೇಜುಗಳು ಎಂದಿನಂತೆ ಮುಂದುವರಿದಿದ್ದು, ಯಾವುದೇ ರೀತಿಯ ರಜೆ ಘೋಷಿಸಲಾಗಿಲ್ಲ. ಆದರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಲಾಗಿದೆ.
ಬಿಗು ಭದ್ರತೆ
ಬೆಂಗಳೂರಿನ ಹಲವೆಡೆ ಬಿಗು ಭದ್ರತೆ ಒದಗಿಸಲಾಗಿದೆ. ಟೌನ್ ಹಾಲ್, ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ, ಮೈಸೂರು ರಸ್ತೆ, ಮೆಜೆಸ್ಟಿಕ್ ಮುಂತಾದ ಕಡೆಗಳಲ್ಲಿ ಪೊಲೀಸರು ಬಿಗು ಭದ್ರತೆ ಒದಗಿಸಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಬಂದ್ ಇಲ್ಲ
ಕರ್ನಾಟಕ ಬಂದ್ ಗೆ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಯಾವುದೇ ಬೆಂಬಲ ದೊರೆತಿಲ್ಲ. ಗುರುವಾರ ಬೆಳಿಗ್ಗೆ ಎಲ್ಲಾ ಸಂಚಾರ ವ್ಯವಸ್ಥೆ ಎಂದಿನಂತಿದ್ದು, ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ. ಇಲ್ಲಿನ ಖಾಸಗಿ ಬಸ್ ಗಳು ಯಾವುದೇ ರೀತಿಯ ಬೆಂಬಲ ನೀಡದಿರುವ ಕಾರಣ ಜನಸಂಚಾರ ಯಥಾಸ್ಥಿತಿಯಲ್ಲಿದೆ.
ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಯಾವುದೇ ಬಂದ್ ವಾತವರಣ ಕಂಡುಬಂದಿಲ್ಲ. ಎಂದಿನಂತೆ ನಡೆಯುತ್ತಿರುವ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ವಾಹನಗಳ ಸಂಚಾರ ಸಹಜಸ್ಥಿತಿಯಲ್ಲಿದೆ.
ಕೊಪ್ಪಳ ಜಿಲ್ಲೆಯಲ್ಲೂ ಯಾವುದೇ ರೀತಿಯ ಬಂದ್ ಬಿಸಿ ತಟ್ಟಿಲ್ಲ. ವ್ಯಾಪಾರ ವ್ಯವಹಾರ, ಸಂಚಾರ ವ್ಯವಸ್ಥೆ, ಶಾಲಾ ಕಾಲೇಜು ಎಂದಿನಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಮುಂದಿನ ವಾರ ‘ಕೈ’ ನಾಯಕರ ದಿಲ್ಲಿ ಪರೇಡ್; ಮತ್ತೆ ಅಸಮಾಧಾನದ ಲಕ್ಷಣ ಗೋಚರ
Ligament pain: ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವು; ವಿಶ್ರಾಂತಿಗೆ ವೈದ್ಯರ ಸೂಚನೆ
Naxalism: ಉಡುಪಿ ಡಿಸಿ ಕಚೇರಿಯಲ್ಲಿ ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀ
Micro Finance: ಮೈಕ್ರೋ ಫೈನಾನ್ಸ್ಗೆ ಆನ್ಲೈನ್ ಕಣ್ಗಾವಲು
OPL vs CM: ನ.15, 16ಕ್ಕೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್ ಭವಿಷ್ಯ
MUST WATCH
ಹೊಸ ಸೇರ್ಪಡೆ
ಟಾಯ್ಲೆಟ್ ಸೀಟ್ ನೆಕ್ಕಿಸಿದರು.. ಮಗನ ಆತ್ಮ*ಹತ್ಯೆ ಹಿಂದಿನ ಭೀಕರತೆಯನ್ನು ಬಿಚ್ಚಿಟ್ಟ ತಾಯಿ
Congress: ಮುಂದಿನ ವಾರ ‘ಕೈ’ ನಾಯಕರ ದಿಲ್ಲಿ ಪರೇಡ್; ಮತ್ತೆ ಅಸಮಾಧಾನದ ಲಕ್ಷಣ ಗೋಚರ
Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ!
Davanagere: ಚನ್ನಗಿರಿ ಪ್ರಕರಣ ಆರೋಪಿ ಅಮ್ಜದ್ ಗೆ ಗಲ್ಲು ಶಿಕ್ಷೆ ಕೊಡಬೇಕು: ಮುತಾಲಿಕ್
Sandalwood: ಮತ್ತೆ ನಿರ್ದೇಶನದತ್ತ ಅನೀಶ್ ತೇಜೇಶ್ವರ