Karnataka: ಅನ್ನ ಭಾಗ್ಯಕ್ಕೆ ಅಕ್ಕಿ ಸಿಗುತ್ತಿಲ್ಲ ಎಂದು BJPಗೆ ಖುಷಿ- ದಿನೇಶ್ ಗುಂಡೂರಾವ್
Team Udayavani, Jun 18, 2023, 7:09 AM IST
ಬೆಂಗಳೂರು: ರಾಜ್ಯ ಸರಕಾರ ಅನ್ನಭಾಗ್ಯದ ಅಕ್ಕಿ ಖರೀದಿಸಿ ಪೂರೈಸಲು ಶತ ಪ್ರಯತ್ನ ನಡೆಸುತ್ತಿದೆ. ನಮ್ಮ ಸರಕಾರದ ಕಡೆಯಿಂದ ಯಾವುದೇ ಲೋಪ ನಡೆಯುತ್ತಿಲ್ಲ. ಆದರೆ ಬಡವರಿಗೆ ಅಕ್ಕಿ ಕೊಡುವ ಈ ಯೋಜನೆಗೆ ಕೈ ಜೋಡಿಸದೆ ಬಿಜೆಪಿ ಮುಖಂಡರು ವಿಕೃತ ಖುಷಿ ಅನುಭವಿಸುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಆಹಾರ ನಿಗಮ ರಾಜ್ಯಕ್ಕೆ ಅಕ್ಕಿ ಕೊಡುತ್ತೇವೆಂದು ಹೇಳಿ ಬಳಿಕ ಹಿಂದೆ ಸರಿದಿಲ್ಲ. ಖಾಸಗಿಯವರಿಗೆ ಅಕ್ಕಿ ಕೊಡುವ ಆಹಾರ ನಿಗಮ, ನಾವು ಹಣ ಕೊಡುತ್ತೇವೆ ಎಂದರೂ ನಮಗೆ ಕೊಡುತ್ತಿಲ್ಲ. ನಾನು ಆಹಾರ ಸಚಿವನಾಗಿದ್ದಾಗ ಆಹಾರ ನಿಗಮದಿಂದಲೇ ಅಕ್ಕಿ ಖರೀದಿಸಿ ಕೊಡುತ್ತಿದ್ದೆವು. ಕೇಂದ್ರದ ಈಗಿನ ನಡೆ ಸಂಶಯಾಸ್ಪದವಾಗಿದೆ ಎಂದರು.
ನಮ್ಮ ಸರಕಾರದ ಕಾರ್ಯಕ್ರಮ ಚೆನ್ನಾಗಿ ನಡೆಯಬಾರದು ಎಂಬ ಉದ್ದೇಶ ಕೇಂದ್ರ ಸರಕಾರಕ್ಕಿದೆಯಾ? ನಾವು ಕರ್ನಾಟಕದಲ್ಲಿ ಸೋತು ಬಿಟ್ಟಿದ್ದೇವೆ ಎಂದು ಜನರಿಗೆ ತೊಂದರೆ ಕೊಡಲು ಕೇಂದ್ರ ಸರಕಾರ ಮುಂದಾಗಿದೆಯೇ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿಗೆ ಮತ ಹಾಕಿದ ಶೇ. 35 ಮಂದಿಗೂ ಅನ್ನಭಾಗ್ಯ ಯೋಜನೆ ಸಿಗುತ್ತದೆ. ಆದ್ದರಿಂದ ಬಿಜೆಪಿ ಅವರು ಈ ರೀತಿ ಅಲೋಚನೆ ಮಾಡಿ ರಾಜ್ಯದ ಜನರ ಪರ ನಿಲ್ಲಲಿ ಎಂದ ದಿನೇಶ್ ಗುಂಡೂರಾವ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.