ಉತ್ತರ ಕೊಡಿ ಶಾ: ಅಮಿತ್ ಶಾ ಗೆ ರಾಜ್ಯ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆ
Team Udayavani, Jan 18, 2020, 12:22 PM IST
ಬೆಂಗಳೂರು: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದೆ.
ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಾಲು ಸಾಲು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ‘ಉತ್ತರ ಕೊಡಿ ಶಾ’ ಎಂದು ಹ್ಯಾಶ್ ಟ್ಯಾಗ್ ಮಾಡಿ ಅಮಿತ್ ಶಾ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಪ್ರಚಾರ ನಡೆಸಲು ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಇದೇ ವೇಳೆ ರಾಜ್ಯದ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತುಕತೆ ನಡೆಸುವ ಸಾಧ್ಯತೆಯಿದೆ.
‘ @AmitShah ಅವರೇ,
ಚುನಾವಣೆಗೆ ಮೊದಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮಹದಾಯಿ ವಿವಾದ ಬಗೆ ಹರಿಯಲಿದೆ ಎಂದಿದ್ದಿರಿ,
ಗೋವಾ ಸಿಎಂ ನೀರು ಬಿಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ @BSYBJP ಅವರಿಗೆ ಪತ್ರ ಬರೆದಿದ್ದರು.
ಇದೆಲ್ಲಾ ಕೇವಲ ಚುನಾವಣಾ ಕುತಂತ್ರವೇ?
ಇನ್ನೂ ಮಹದಾಯಿ ವಿವಾದ ಬಗೆಹರಿಸಲಿಲ್ಲವೇಕೆ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
.@AmitShah ಅವರೆ,
ಭೀಕರ ನೆರೆ ಸಮೀಕ್ಷೆಗೆ “ಗಿಮಿಕ್ ಭೇಟಿ” ಕೊಟ್ಟಿರಿ, ನಿಮ್ಮ ನೆರೆ ವೀಕ್ಷಣೆಯ ಫಲವೇನು?
ರಾಜ್ಯಕ್ಕಾಗಿರುವ ನಷ್ಟ ₹ 35,500 ಕೋಟಿ,
ಕೇಂದ್ರ ಕೊಟ್ಟಿರುವ ಪರಿಹಾರ ಚಿಲ್ಲರೆ ₹1869 ಕೋಟಿ.ರಾಜ್ಯಕ್ಕೆ ಕೇಂದ್ರದಿಂದ ಈ ರೀತಿಯ ವಂಚನೆ ಮಾಡುತ್ತಿರುವುದೇಕೆ?
ಅಗತ್ಯ ನೆರೆ ಪರಿಹಾರ ಕೊಡುವುದಿಲ್ಲವೇ?#ಉತ್ತರಕೊಡಿಶಾ— Karnataka Congress (@INCKarnataka) January 18, 2020
.@AmitShah ಅವರೆ,@BJP4Karnataka ಸರ್ಕಾರದ ಗೂಂಡಾಗಿರಿ ಮಿತಿ ಮೀರಿದೆ.
▪ಮಂಗಳೂರು ಗೋಲಿಬಾರ್
▪ಇತಿಹಾಸಕಾರ ರಾಮಚಂದ್ರ ಗುಹಾರಿಗೆ ಅವಮಾನಿಸಿದ್ದು
▪ಜ್ಯೋತಿನಿವಾಸ್ ಕಾಲೇಜ್ ಪ್ರಕರಣ
▪ಶಾಸಕ ವಿಶ್ವನಾಥ್ ಕಲಾ ಸಂಸ್ಥೆಗೆ ನುಗ್ಗಿದ್ದುಈ ಪ್ರಕರಣಗಳು, “ಗುಜರಾತ್ ಮಾದರಿ” ಅಂದರೆ ಇದೆಯೇನು?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
◼ಭಯೋತ್ಪಾದಕ ದಾವಿಂದರ್ ಸಿಂಗ್ ಬಗ್ಗೆ
ನಿಮ್ಮ ಹಾಗೂ ಪ್ರಧಾನ ಮಂತ್ರಿಯ ಮೌನವೇಕೆ?
◼ಪುಲ್ವಾಮಾ ದಾಳಿಯಲ್ಲಿ ದಾವಿಂದರ್ ಸಿಂಗ್ ಪಾತ್ರವೇನು?
◼ಈತ ಇನ್ನೂ ಅದೆಷ್ಟು ಉಗ್ರರ ಜೊತೆ ಕೈಜೋಡಿಸಿದ್ದಾನೆ?
◼ಈತನ ರಕ್ಷಣೆಗೆ ನಿಂತವರು ಯಾರು ಏಕೆ?
◼ದೇಶದ ಭದ್ರತೆಯ ಗಂಭೀರ ವಿಷಯದಲ್ಲಿ ಜನರಿಂದ ನೀವು ಏನನ್ನು ಮುಚ್ಚಿಡುತ್ತಿರುವಿರಿ?#ಉತ್ತರಕೊಡಿಶಾ— Karnataka Congress (@INCKarnataka) January 18, 2020
.@AmitShah ಅವರೆ,
ಪೌರತ್ವ ತಿದ್ದುಪಡಿಯು ಡಾ.ಅಂಬೇಡ್ಕರ್ ನೀಡಿದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ.
೧೯೫೫ ರ ಕಾಯ್ದೆಯು ಪೌರತ್ವ & ಆಶ್ರಯ ನೀಡುವುದರಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡುವುದಿಲ್ಲ.
೨೦೧೯ರ ತಿದ್ದುಪಡಿಯು ತಾರತಮ್ಯದಿಂದ ಕೂಡಿದ್ದು ಪರಿಚ್ಚೇದ ೧೪ರ ವಿರುದ್ಧವಾಗಿದೆ.
ಸಂವಿಧಾನದ ಜೊತೆ ಚೆಲ್ಲಾಟವೇಕೆ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
.@AmitShah ಅವರೇ
ಸಿಎಎ/ಎನ್ಆರ್ ಸಿ ವಿರೋಧಿಸಿ ದೇಶಾದಾಧ್ಯಂತ ೧ ತಿಂಗಳಿಂದ ನಿರಂತರವಾಗಿ, ಎಲ್ಲಾ ಜಾತಿ-ಧರ್ಮಗಳ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಜನಸಾಮಾನ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಜನಾಭಿಪ್ರಾಯದ ವಿರುದ್ಧ ಸರ್ವಾಧಿಕಾರಿ ಧೋರಣೆ ಏಕೆ?
ಬಿಜೆಪಿಯು ಪ್ರಜಾಪ್ರಭುತ್ವ & ಸಂವಿಧಾನವನ್ನು ಗೌರವಿಸುತ್ತಿಲ್ಲವೇಕೇ?#ಉತ್ತರಕೊಡಿಶಾ
— Karnataka Congress (@INCKarnataka) January 18, 2020
ಕೇವಲ ವರ್ಗಾವಣೆ ದಂಧೆಯಲ್ಲಿ ಮುಳುಗಿರುವ @BJP4Karnataka ಸರ್ಕಾರವು ಟೇಕ್ ಆಫ್ ಆಗಿಲ್ಲ.
◼ಬಿಜೆಪಿ ಆರೆಸ್ಸೆಸ್ ಕಿತ್ತಾಟ
◼ಮಂತ್ರಿ ಮಂಡಲ ರಚನೆಗೆ ನಿಮ್ಮ ತಡೆ ಮತ್ತು ದಬ್ಬಾಳಿಕೆ
◼ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರುಗಳ ಹೊಂದಾಣಿಕೆ ಕೊರತೆಯಿಂದ
ರಾಜ್ಯದ ಅಭಿವೃದ್ಧಿ ಕುಂಠಿತ ಗೊಳಿಸುತ್ತಿರುವುದೇಕೆ?#ಉತ್ತರಕೊಡಿಶಾ— Karnataka Congress (@INCKarnataka) January 18, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.