ವಿಶ್ವದ ನಂ.1 ಪಟ್ಟಕ್ಕೇರಿದ ಕರ್ನಾಟಕ ಡಿಜಿಟಲ್ ಲೈಬ್ರರಿ
Team Udayavani, Nov 1, 2020, 6:00 AM IST
ಬೆಂಗಳೂರು: ಕೊರೊನಾ ವೈರಸ್ ಸಮುದಾಯಗಳ ಭೌತಿಕ ಅಂತರವನ್ನು ಹೆಚ್ಚು ಮಾಡಿದೆ. ಆದರೆ, ಆದರೆ ಸಾಮಾಜಿಕ ಅಂತರವನ್ನು ಹತ್ತಿರ ಮಾಡಿದ್ದು ಅಂತರ್ಜಾಲ!
ರಾಜ್ಯ ಸರ್ಕಾರದ ಸಾರ್ವಜನಿಕ ಗ್ರಂಥಾಲಯದ ಡಿಜಿಟಲ್ ಗ್ರಂಥಾಲಯ ಕಳೆದ 8 ತಿಂಗಳಲ್ಲಿ ವಿಶ್ವದ 31 ಕೋಟಿ ಜನರಿಂದ ಗೂಗಲ್ ಸರ್ಚ್‌ಗೆ ಒಳಗಾಗಿದೆ. ಜನರ ಡಿಜಿಟಲ್ ಹುಡುಕಾಟದಲ್ಲಿ ವಿಶ್ವದಲ್ಲಿಯೇ ನಂ.1 ಸ್ಥಾನಕ್ಕೇರಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ವರ್ಷದ ಆರಂಭದಲ್ಲಿ ಫೆ.26 ರಂದು ಲೋಕಾರ್ಪಣೆಗೊಂಡಿರುವ ಕರ್ನಾಟಕ ಸರ್ಕಾ ರದ ಡಿಜಿಟಲ್ ಗ್ರಂಥಾಲಯ ಅಮೆರಿಕನ್ ಸಾರ್ವಜನಿಕ ಗ್ರಂಥಾಲಯಕ್ಕಿಂತಲೂ ಹೆಚ್ಚಿನ ಜನ ಹುಡುಕಾಡಿದ್ದಾರೆ. ಅಮೆರಿಕನ್ ಸಾರ್ವ ಜನಿಕ ಗ್ರಂಥಾಲಯ ಗೂಗಲ್ ಹುಡುಕಾಟದಲ್ಲಿ ಎರಡನೇ ಸ್ಥಾನದಲ್ಲಿದ್ದು, ನಮ್ಮ ದೇಶದ ನ್ಯಾಷ ನಲ್ ಡಿಜಿಟಲ್ ಲೈಬ್ರರಿ 3ನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಅತಿ ವೇಗವಾಗಿ ಜನರನ್ನು ತಲುಪುತ್ತಿರುವ ಡಿಜಿಟಲ್ ಲೈಬ್ರರಿ ಇದಾಗಿದೆ.
5 ಲಕ್ಷ ಸದಸ್ಯರು: ಕೊರೊನಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ವೃತ್ತ ಪತ್ರಿಕೆಗಳು ಹಾಗೂ ಪುಸ್ತಕ ಓದಲು ಅವಕಾಶ ಕಲ್ಪಿಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆ 26 ನಗರ ಕೇಂದ್ರ ಗ್ರಂಥಾಲಯಗಳು, 30 ಜಿಲ್ಲಾ ಗ್ರಂಥಾಲಯ, 82 ವಾಚನಾಲಯ, 5766 ಗ್ರಾಮ ಪಂಚಾಯಿತಿ ಗ್ರಂಥಾಲಯಗಳು, 100 ಕೊಳಚೆ ಪ್ರದೇಶ ಗ್ರಂಥಾಲಯ, 127 ಅಲೆ ಮಾರಿ ಗ್ರಂಥಾಲಯಗಳು 31 ಸಮುದಾಯ ಮಕ್ಕಳ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ನಗರದ 26 ಜಿಲ್ಲಾ ಕೇಂದ್ರಗಳ 30 ಹಾಗೂ 216 ತಾಲೂಕು ಗ್ರಂಥಾಲಯಗಳು ಸೇರಿ 272 ಗ್ರಂಥಾಲಯ ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ರಾಜ್ಯ ಸರ್ಕಾರ ಆರಂಭಿಸಿರುವ ಡಿಜಿಟಲ್ ಲೈಬ್ರರಿಗೆ 8 ತಿಂಗಳಲ್ಲಿ 5.85 ಲಕ್ಷ ಸದಸ್ಯರು ನೋಂದಣಿಯಾಗಿದ್ದಾರೆ. ಇ ಲೈಬ್ರರಿಯಲ್ಲಿ 14.44 ಲಕ್ಷ ಇ-ಕಂಟೆಂಟ್‌ಗಳನ್ನು ಸಾರ್ವ ಜನಿಕರು ಬಳಕೆ ಮಾಡಿಕೊಂಡಿದ್ದಾರೆ.
ಏನಿದೆ ಇ-ಲೈಬ್ರರಿಯಲ್ಲಿ ?: ರಾಜ್ಯ ಸರಕಾರದ ಡಿಜಿಟಲ್ ಲೈಬ್ರರಿಯಲ್ಲಿ 4.30 ಲಕ್ಷ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ ಇವೆ. 59900 ವಿಶ್ವದ ದಿನ ಪತ್ರಿಕೆಗಳು ಲಭ್ಯ ವಿದೆ. ಶೈಕ್ಷಣಿಕ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲ ವಿಭಾಗಗಳಿಗೆ ಸಂಬಂಧಿಸಿದ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು ಭಾಷೆಯಲ್ಲಿ ಪಾಠಗಳನ್ನು ಒದಗಿಸಲಾಗಿದೆ. ರಾಜ್ಯ, ಸಿಬಿಎಸ್‌ಸಿ ಪಠ್ಯಕ್ರಮ ವನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಡಿಜಿಟಲ್ ರೂಪದಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ.
ಕಲೆ ಮತ್ತು ಮಾನವಿಕತೆ, ವ್ಯಕ್ತಿತ್ವ, ಕೌಶಲ್ಯ ಮತ್ತು ಸಾಹಿತ್ಯ ಒಳಗೊಂಡಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ. ರಾಜ್ಯ ಸರ್ಕಾರ ಹಾಗೂ ಸಿಬಿಎಸ್‌ಸಿ 1 ರಿಂದ 12 ನೇ ತರಗತಿವರೆಗಿನ ಎಲ್ಲ ಪಠ್ಯ ಪುಸ್ತಕಗಳು ಮತ್ತು ವಿಡಿಯೋಗಳು ಲಭ್ಯವಿದೆ. ಕನ್ನಡ ಭಾಷೆಯಲ್ಲಿಯೇ ಸುಮಾರು 600ಕ್ಕೂ ಹೆಚ್ಚು ವಿಡಿಯೋಗಳು ಲಭ್ಯ ಇವೆ.
ಈ ಯೋಜನೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ 10 ಲಕ್ಷ ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕಾ ಸಾಮಗ್ರಿ ಒದಗಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗೂ ಮಾಹಿತಿ: ಇ ಲೈಬ್ರರಿಯಲ್ಲಿ ಐಐಟಿ, ಜೆಇಇ, ನೀಟ್, ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ವಿಷಯಗಳನ್ನು ಅಳವಡಿಸಲಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದೆ.
ಇ ಪ್ಲಾಟ್ ಫಾರ್ಮ್ ಬಳಕೆದಾರರಿಗೆ ವೆಬ್ ಆಧಾರಿತ ಮತ್ತು ಆ್ಯಪ್ ಆಧಾರಿತವಾಗಿದೆ. www.karnataka digitalpublic library.org ವೆಬ್‌ನಲ್ಲಿ ಲಭ್ಯವಿರುವ ಎಲ್ಲ ಮಾಹಿತಿಯೂ ಆ್ಯಪ್‌ನಲ್ಲಿಯೂ ಲಭ್ಯವಿದೆ. e-Sarvajanika Granthalaya ಫ್ಲೆ ಸ್ಟೋರ್‌ನಲ್ಲಿ ಲಭ್ಯವಿದೆ.
ಡಿಜಿಟಲ್ ಗ್ರಂಥಾಲಯದಲ್ಲಿರುವ ಕೊಂಡಿಗಳು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜದ 800 ಇ ಪುಸ್ತಕಗಳು, ನ್ಯಾಷನಲ್ ಎಮರ್ಜನ್ಸಿ ಲೈಬ್ರರಿ ಇ ಪುಸ್ತಕಗಳು, ತಂತ್ರಜ್ಞಾನ ವರ್ಧಿತ ಕಲಿಕೆಯ ರಾಷ್ಟ್ರೀಯ ಕಾರ್ಯಕ್ರಮ, ಇ-ಜ್ಞಾನಕೋಶ, ಸ್ವಾಮಿ ಆನ್‌ಲೈನ್ ಕೋರ್ಸ್‌ಗಳು, ಯುಜಿ, ಪಿಜಿ ಕೋರ್ಸ್‌ಗಳು, ಸಾಮಾಜಿಕ ವಿಜ್ಞಾನ, ಕಲೆ, ಲಲಿತಕಲೆ ಮತ್ತು ಮಾನವಿಕತೆ, ನೈಸರ್ಗಿಕ ಮತ್ತು ಗಣಿತ ವಿಜ್ಞಾನದ 70 ಸ್ನಾತಕೋತ್ತರ ವಿಭಾಗದ 23000 ಇ ಪಠ್ಯ ಪುಸ್ತಕ ಹಾಗೂ ವಿಡಿಯೋಗಳನ್ನು ಅಳವಡಿಸಲಾಗಿದೆ.
ಟಾಪ್ ಟೆನ್ ಪುಸ್ತಕಗಳು
– ಎಫ್ಡಿಎ ಮತ್ತು ಎಸ್‌ಡಿಎ
– ಇತಿಹಾಸ
– ಕರ್ನಾಟಕ ಪ್ರಾದೇಶಿಕ
– ಭೂಗೋಳ ಶಾಸ್ತ್ರ
– ಚಿದಂಬರ ರಹಸ್ಯ
– ಕೆ ಎ ಎಸ್.
– ಪ್ರಾಕೃತಿಕ ವಸ್ತುನಿಷ್ಠ ಭೂಗೋಳ- ವಸ್ತುನಿಷ್ಠ ಮಾದರಿ ಪ್ರಶ್ನೋತ್ತರಗಳು
– ಕನ್ನಡ ಕೈಪಿಡಿ
– ತೇಜಸ್ವಿ ನನಗೆ ನಿಮಿತ್ತ
– ಅಪರಾಧ ಶಾಸ್ತ್ರ
– ಸಮಗ್ರ ಇತಿಹಾಸ
ನಮ್ಮ ಸಾರ್ವಜನಿಕ ಗ್ರಂಥಾಲಯದ ಡಿಜಿಟಲ್ ಲೈಬ್ರರಿ ವಿಶ್ವದಲ್ಲಿ ಅತಿ ಹೆಚ್ಚು ಜನರಿಂದ ಹುಡುಕಾಟ ಆಗಿರುವುದು ನಮ್ಮ ಶ್ರಮಕ್ಕೆ ದೊರೆತ ಫಲ. ಕೊರೊನಾ ಸಂದರ್ಭದಲ್ಲಿ ಜನರಿಗೆ ಹತ್ತಿರವಾಗಲು ಮಾಡಿರುವ ಇ ಲೈಬ್ರರಿ ಅತ್ಯಂತ ವೇಗವಾಗಿ ಜನರನ್ನು ತಲುಪುತ್ತಿದ್ದು, 10 ಲಕ್ಷ ವಿಷಯಗಳನ್ನು ಅಳವಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಡಾ. ಸತೀಶ್‌ಕುಮಾರ್ ಹೊಸಮನಿ, ಸಾರ್ವಜನಿಕ ಗ್ರಂಥಾಲಯ ನಿರ್ದೇಶಕರು
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.