Karnataka Government: 7ನೇ ವೇತನ ಆಯೋಗ: ಪರಿಷ್ಕೃತ ವೇತನ ಶ್ರೇಣಿ ಪ್ರಕಟ
ಕನಿಷ್ಠ 27 ಸಾವಿರ, ಗರಿಷ್ಠ 2.41 ಲಕ್ಷ ರೂ. , ಕುಟುಂಬ ಪಿಂಚಣಿ 80,400 ರೂ.ಗೆ ಮಿತಿ
Team Udayavani, Jul 23, 2024, 6:10 AM IST
ಬೆಂಗಳೂರು: ಏಳನೇ ವೇತನ ಆಯೋಗದ ಶಿಫಾರಸಿನಂತೆ ಆಗಸ್ಟ್ 1ರಿಂದ ಸರಕಾರಿ ನೌಕರರ ವೇತನ ಶ್ರೇಣಿ, ಪಿಂಚಣಿ ಮತ್ತು ಕುಟುಂಬ ಪಿಂಚಣಿಯು ಪರಿಷ್ಕರಣೆಗೊಳ್ಳಲಿದ್ದು 2022ರಲ್ಲಿದ್ದ ಮೂಲ ವೇತನವನ್ನು ಪರಿಗಣಿಸಿ, ಬೆಲೆ ಸೂಚ್ಯಂಕ ಆಧರಿಸಿ ಶೇ. 31ರಷ್ಟು ತುಟ್ಟಿಭತ್ತೆ, ಶೇ. 27.50ರಷ್ಟು ಫಿಟ್‌ಮೆಂಟ್ ಸೌಲಭ್ಯವನ್ನು ಹೆಚ್ಚಿಸಲಾಗಿದೆ.
ಈ ಕುರಿತು ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೊಮವಾರ ಸರಕಾರದ ನಡಾವಳಿ ಪ್ರಕಟಿಸಿದ್ದು ಮುಖ್ಯವೇತನ ಶ್ರೇಣಿ ಹಾಗೂ 25 ಸ್ಥಾಯೀ ವೇತನ ಶ್ರೇಣಿಗಳೂ 7ನೇ ವೇತನ ಆಯೋಗದ ಶಿಫಾರಸಿನಂತೆ ಪರಿಷ್ಕರಣೆಗೊಳ್ಳಲಿದೆ.
ಮುಖ್ಯ ವೇತನ ಶ್ರೇಣಿಯು ಕನಿಷ್ಠ 27 ಸಾವಿರ ರೂ. ಇರಲಿದ್ದು ಗರಿಷ್ಠ 2.41 ಲಕ್ಷ ರೂ. ಇರಲಿದೆ. ಅದೇ 25 ಸ್ಥಾಯೀ ವೇತನ ಶ್ರೇಣಿಯೂ ಪರಿಷ್ಕರಣೆಗೊಳ್ಳಲಿದೆ. ಜತೆಗೆ ಮಾಸಿಕ ಕನಿಷ್ಠ 13,500 ರೂ.ಗಳಿಂದ ಗರಿಷ್ಠ 1,20,600 ರೂ. ವರೆಗೆ ಇರಲಿದ್ದು ಕುಟುಂಬ ಪಿಂಚಣಿಯ ಮೊತ್ತವನ್ನು 80,400 ರೂ.ಗೆ ಮಿತಿಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.