ರಾಜ್ಯದಲ್ಲೂ ಗುಜರಿ ನೀತಿ
Team Udayavani, Dec 23, 2022, 7:10 AM IST
![tdy-46](https://www.udayavani.com/wp-content/uploads/2022/12/tdy-46-2-620x372.jpg)
![tdy-46](https://www.udayavani.com/wp-content/uploads/2022/12/tdy-46-2-620x372.jpg)
ಬೆಂಗಳೂರು/ಬೆಳಗಾವಿ: “ಅವಧಿ ಮೀರಿದ ನೋಂದಾಯಿತ ವಾಹನಗಳ ನಾಶ ಪಡಿಸುವ ನೀತಿ’ (ಗುಜರಿ ನೀತಿ) ಗೆ ಸಚಿವ ಸಂಪುಟ ಗುರುವಾರ ಅನುಮೋದಿಸಿತು.
ರಾಜ್ಯದಲ್ಲಿ 15 ವರ್ಷ ಮೇಲ್ಪಟ್ಟ ವಾಹ ನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. 2021ರ ಎಪ್ರಿಲ್‌ನಲ್ಲೇ ಕೇಂದ್ರ ಸರಕಾರವು ವಾಹನಗಳ ಗುಜರಿ ನೀತಿ ಘೋಷಿ ಸಿತ್ತು. ಅದಕ್ಕೆ ಪೂರಕವಾಗಿ ರಾಜ್ಯ ಸರ ಕಾರವು ನೀತಿ ರೂಪಿಸಿದ್ದು, ಸಾರಿಗೆ ಇಲಾಖೆಯು ನೀತಿ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ.
ಅನುಮೋದಿತ ನೀತಿಯಂತೆ ಅವಧಿ ಮೀರಿದ ಯಾವುದೇ ವಾಹನಗಳನ್ನು ಒತ್ತಾಯ ಪೂರ್ವಕವಾಗಿ ಗುಜರಿಗೆ ಹಾಕುವು ದಿಲ್ಲ. ಸ್ವಯಂಪ್ರೇರಿತವಾಗಿ ವಾಹನ ಮಾಲಕರು ಗುಜರಿ ಕೇಂದ್ರಕ್ಕೆ ಒಪ್ಪಿಸಿ ದರೆ ಮಾತ್ರ ನಾಶಪಡಿಸಲಾಗುವುದು. ಇದಕ್ಕೆ ಪ್ರತಿಯಾಗಿ ವಾಹನ ಸವಾರರಿಗೆ ಠೇವಣಿ ಪ್ರಮಾಣಪತ್ರ (ಸಿಒಡಿ) ನೀಡಲಾಗುತ್ತದೆ. ಅದನ್ನು ಮಾಲಕರು ಹೊಸ ವಾಹನ ಖರೀದಿಸುವಾಗ ಪ್ರಸ್ತುತಪಡಿಸಿದರೆ, ನಾಶ ಪಡಿಸಿದ ವಾಹನದ ತೆರಿಗೆಯಲ್ಲಿನ ಶೇ. 25ರಷ್ಟು ವಿನಾಯಿತಿ ದೊರೆಯಲಿದೆ.
ಉದಾಹರಣೆಗೆ ಗುಜರಿಗೆ ಹಾಕಿದ ವಾಹನಕ್ಕೆ ಮಾಲಕರು ಒಂದು ಲಕ್ಷ ರೂ. ತೆರಿಗೆ ಪಾವತಿಸಿದ್ದರು ಅಂದುಕೊಳ್ಳೋಣ. ಆ ಪೈಕಿ 25 ಸಾವಿರ ರೂ. ಹೊಸ ವಾಹನ ಖರೀ ದಿಸುವಾಗ ತೆರಿಗೆ ವಿನಾಯಿತಿ ಸಿಗಲಿದೆ. ಬಸ್‌ಗಳಿಗೂ ಇದು ಅನ್ವಯವಾಗಲಿದೆ. ಪ್ರತಿ ವರ್ಷ ಶೇ. 15ರಷ್ಟು ರಸ್ತೆ ತೆರಿಗೆ ವಿನಾಯಿತಿಯನ್ನು 15 ವರ್ಷಗಳ ಕಾಲ ನೀಡಲಾಗುತ್ತದೆ. ಇನ್ನು ಅವಧಿ ಮೀರಿದ ವಾಹನಗಳನ್ನು ಫಿಟ್‌ನೆಸ್ ಸರ್ಟಿಫಿಕೇಟ್‌ಗಾಗಿ ನೀಡುವ ಸಂದರ್ಭದಲ್ಲಿ ಯಾವುದೇ ವಾಹನ ಸತತ ಎರಡು ಬಾರಿ ಫಿಟ್‌ನೆಸ್ ಸರ್ಟಿಫಿಕೇಟ್ ಪಡೆಯುವಲ್ಲಿ ವಿಫಲವಾದರೆ, ಆ ವಾಹನವನ್ನು ಗುಜರಿಗೆ ಹಾಕಲೇಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ](https://www.udayavani.com/wp-content/uploads/2025/02/car-3-150x82.jpg)
![Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ](https://www.udayavani.com/wp-content/uploads/2025/02/car-3-150x82.jpg)
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
![Instagram provides clues to finding suspect who had been on the run for 9 years](https://www.udayavani.com/wp-content/uploads/2025/02/inst-150x82.jpg)
![Instagram provides clues to finding suspect who had been on the run for 9 years](https://www.udayavani.com/wp-content/uploads/2025/02/inst-150x82.jpg)
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
![Devegowda](https://www.udayavani.com/wp-content/uploads/2025/02/Devegowda-150x90.jpg)
![Devegowda](https://www.udayavani.com/wp-content/uploads/2025/02/Devegowda-150x90.jpg)
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
![Sathish-rajanna-mahadevappa](https://www.udayavani.com/wp-content/uploads/2025/02/Sathish-rajanna-mahadevappa-150x90.jpg)
![Sathish-rajanna-mahadevappa](https://www.udayavani.com/wp-content/uploads/2025/02/Sathish-rajanna-mahadevappa-150x90.jpg)
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
![Jayalalittha-Golds](https://www.udayavani.com/wp-content/uploads/2025/02/Jayalalittha-Golds-150x90.jpg)
![Jayalalittha-Golds](https://www.udayavani.com/wp-content/uploads/2025/02/Jayalalittha-Golds-150x90.jpg)
Jayalalithaa Assets: ಮಾಜಿ ಸಿಎಂ ಜಯಲಲಿತಾ 27 ಕೆ.ಜಿ. ಚಿನ್ನಾಭರಣ ತಮಿಳುನಾಡು ವಶಕ್ಕೆ