ರಾಜ್ಯಪಾಲರು ಬಿಜೆಪಿಯ ಏಜೆಂಟ್: ದಿನೇಶ್ ಗುಂಡೂರಾವ್
Team Udayavani, Jul 10, 2019, 12:39 PM IST
ಬೆಂಗಳೂರು : ಶಾಸಕರ ರಾಜೀನಾಮೆ ವಿಚಾರವನ್ನು ಆದಷ್ಟು ಬೇಗ ಇತ್ಯರ್ಥ ಮಾಡಿ ಎಂದು ಸ್ಪೀಕರ್ ಗೆ ರಾಜ್ಯಪಾಲರು ಒತ್ತಾಯ ಮಾಡಿದ್ದಾರೆ.ಅವರು ಬಿಜೆಪಿಯ ಏಜೆಂಟ್ ಆಗಿದ್ದಾರೆ.
ರಾಜಭವನವನ್ನ ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಕೆ.ಕೆ. ಗೆಸ್ಟ್ ಬಳಿ ದಿನೇಶ್ ಗುಂಡೂರಾವ್ ಅವರು ಈ ಹೇಳಿಕೆ ನೀಡಿದ್ದಾರೆ.
ಡಿ ಕೆ ಶಿವಕುಮಾರ್ ಅವರಿಗೆ ಹೋಟೆಲ್ ಬಳಿ ತಡೆ ಓಡಿದ್ದಾರೆ.
ಬಿಜೆಪಿ ಪಕ್ಷದವರು ಏನು ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತಿದೆ. ಮುಂಬಯಿಯಲ್ಲಿರುವ ಹೋಟೆಲ್ ಸರ್ಕಾರಿ ಜಾಗ ಅಲ್ಲ. ಅದು ಖಾಸಗಿ ಹೋಟೆಲ್, ಡಿ ಕೆ ಶಿವಕುಮಾರ್ ಅಲ್ಲಿ ರೂಂ ಬುಕ್ ಮಾಡಿದ್ದಾರೆ ಆದರೂ ಅವರಿಗೆ ಒಳ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ದೇಶದಲ್ಲಿ ಆಪರೇಷನ್ ಕಮಲಕ್ಕೆ ಕೋಟಿ ಕೋಟಿ ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು.
ಬಿಜೆಪಿಯವರ ಜೊತೆಯಲ್ಲಿರುವ ಎಲ್ಲರೂ ಸಾಚಗಳು ಆಗುತ್ತಾರೆ,
ಇಲ್ಲಾಂದ್ರೆ ನಾವು ಕೆಟ್ಟವರು ಆಗಿ ಬಿಡುತ್ತೇವೆ ಎಂದರು.
ಅತೃಪ್ತರು ಸುಪ್ರೀಂ ಕೋರ್ಟ್ ಹೋಗೋದಕ್ಕೆ ಸ್ವಂತಂತ್ರರು ಎಂದರು.
ಸ್ಪೀಕರ್ ರಮೇಶ್ ಕುಮಾರ್ ಕೆ.ಜಿ ಬೋಪಯ್ಯ ರೀತಿ ಅಲ್ಲ,
ಹಿಂದೆ ಸ್ಪೀಕರ್ ಆಗಿದ್ದ ಬೋಪಯ್ಯ ಹಿಂದೆ ಏನ್ ಮಾಡಿದ್ದಾರೆ ಎಂದು ರಾಜ್ಯದ ಜನರಿಗೆ ಗೊತ್ತಿದೆ. ನಮ್ಮ ಸ್ಪೀಕರ್ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಾರೆ ಎಂದರು.
ಬಿಜೆಪಿಯ ಕುತಂತ್ರಕ್ಕೆ ನಮ್ಮ ಶಾಸಕರು ಬಲಿಯಾದ್ರೆ ಬೀದಿಯಲ್ಲಿ ನಿಂತುಕೊಳ್ಳಬೇಕಾಗುತ್ತೆ. ನಮ್ಮ ಶಾಸಕರು ಅನರ್ಹ ಆದ್ಮೇಲೆ ಅಮಿತ್ ಶಾ ಸೇರಿ ಯಾರೂ ಮಾತನಾಡಿಸುವುದಿಲ್ಲ.ಈ ಬಗ್ಗೆ ನಮ್ಮ ಶಾಸಕರು ಎಚ್ಚರದಿಂದ ಇರಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.