ಆನ್‌ಲೈನ್ ಗೇಮ್ ನಿಷೇಧ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Team Udayavani, Dec 22, 2021, 9:45 PM IST
ಬೆಂಗಳೂರು : ಆನ್‌ಲೈನ್ ಗ್ಯಾಂಬ್ಲಿಂಗ್ ಮತ್ತು ಬೆಟ್ಟಿಂಗ್ ನಿಷೇಧಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ-2021ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪನಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿರುವುದಾಗಿ ಹೇಳಿತು.
ಅರ್ಜಿದಾರರ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಅಭಿಷೇಕ್ ಮನುಸಿಂಘ್ವಿ, ಗೇಮ್ ಆಫ್ ಚಾಯ್ಸ ಮತ್ತು ಗೇಮ್ ಆಫ್ ಸ್ಕಿಲ್ ನಡುವೆ ವ್ಯತ್ಯಾಸವಿದೆ. ಗೇಮ್ ಆಫ್ ಚಾನ್ಸ್ ಅನ್ನು ನಿರ್ಬಂಧಿಸಲು ಸರ್ಕಾರಕ್ಕೆ ಎಲ್ಲ ಅಧಿಕಾರವಿದೆ. ಆದರೆ ಕೌಶಲ್ಯದ ಆಟಗಳನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ವಾದಿಸಿದರು.
ಹಿರಿಯ ವಕೀಲ ಮುಕುಲ್ ರೋಹಟಗಿ, ಗ್ಯಾಂಬ್ಲಿಂಗ್ ಮತ್ತು ಗೇಮ್ ಆಫ್ ಚಾನ್ಸ್ ಅನ್ನು ನಿರ್ಬಂಧಿಸಲು ಕಾನೂನಿಗೆ ತಿದ್ದುಪಡಿ ತಂದು ಅದರಡಿ ಕೌಶಲ್ಯದ ಆಟವನ್ನೂ ನಿಷೇಧಿಸುತ್ತಿರುವ ಸರ್ಕಾರದ ಕ್ರಮ ಏಕಪಕ್ಷೀಯ ಹಾಗೂ ಸಂವಿಧಾನಬಾಹಿರವಾಗಿದೆ ಎಂದರು.
ಇದನ್ನೂ ಓದಿ : ಸ್ಮಾರ್ಟ್‌ಫೋನ್ ಖರೀದಿಸಿದ್ದಕ್ಕೆ ಅದ್ಧೂರಿ ಮೆರವಣಿಗೆ, ಭೂರಿ ಭೋಜನ : ವಿಡಿಯೋ ವೈರಲ್
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಗೊತ್ತಿಲ್ಲದ ಫಲಿತಾಂಶಕ್ಕಾಗಿ ಬೆಟ್ಟಿಂಗ್ ಮೂಲಕ ಹಣ ಪಂಥ ಅಥವಾ ಬಾಜಿ ಕಟ್ಟುವುದು ಕೂಡ ಕೌಶಲ್ಯದ ಕ್ರೀಡೆಯಾಗುತ್ತದೆ. ಅಂತಹ ಆನ್ ಲೈನ್ ಗೇಮ್‌ಗಳನ್ನು ನಿರ್ಬಂಧಿಸುವುದೇ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿಯ ಉದ್ದೇಶವಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್ ಜಾರಕಿಹೊಳಿ
Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Micro Finance: ಮೀಟರ್ ಬಡ್ಡಿ ಕಿರುಕುಳ: ಊರೇ ತೊರೆದ 100ಕ್ಕೂ ಹೆಚ್ಚು ಕುಟುಂಬ
Rule of Safety: ಖಾಸಗಿ ಅಷ್ಟೇ ಅಲ್ಲ, ಸರಕಾರಿ ಶಾಲೆಗಳಿಗೂ ʼಅಗ್ನಿ ಸುರಕ್ಷೆʼ ಬಿಸಿ
MUST WATCH
ಹೊಸ ಸೇರ್ಪಡೆ
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.