ಆಗ-ಈಗ-ಕಣ ಕಥನ: ಆಗ ಚುನಾವಣೆ ಎಂದರೆ ಎಲ್ಲೆಡೆ ಹಬ್ಬದ ವಾತಾವರಣ
Team Udayavani, Jan 27, 2023, 2:15 PM IST
1999ರ ಚುನಾವಣೆಯಲ್ಲಿ ಸಂಯುಕ್ತ ಜನತಾ ದಳ ಮತ್ತು ಬಿಜೆಪಿ ಸ್ಥಾನ ಹೊಂದಾಣಿಕೆ ಮಾಡಿ ಕೊಂಡಿದ್ದವು. ಸಂತೆಮರಹಳ್ಳಿ ಕ್ಷೇತ್ರಕ್ಕೆ ಸಂಯುಕ್ತ ದಳದಿಂದ ಎ.ಆರ್. ಕೃಷ್ಣ ಮೂರ್ತಿ ಅಭ್ಯರ್ಥಿಯಾಗಿದ್ದರು. ಸಂಯುಕ್ತ ದಳ, ಬಿಜೆಪಿ ಒಡಂಬಡಿಕೆ ಇತ್ತು. ಆದರೂ ಈ ಕೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾನು ಟಿಕೆಟ್ ಪಡೆದಿದ್ದೆ.
ತೀವ್ರ ಪೈಪೋಟಿಯಿದ್ದ ಆ ಚುನಾವಣೆಯಲ್ಲಿ ಎ.ಆರ್. ಕೃಷ್ಣಮೂರ್ತಿ 33,977 ಮತಗಳನ್ನು ಪಡೆದು ಜಯಶಾಲಿಯಾದರು. ನಾನು 28,071 ಮತಗಳನ್ನು ಪಡೆದಿದ್ದೆ. ಅದೊಂದು ಮರೆಯಲಾಗದ ಅನುಭವ. ಆಗ ಚುನಾವಣೆಗಳಲ್ಲಿ ಇಷ್ಟೊಂದು ವೆಚ್ಚ ಇರಲಿಲ್ಲ. ಬಹಳ ಕಡಿಮೆ ಹಣದಲ್ಲಿ ಚುನಾವಣೆ ಮುಗಿ ಯುತ್ತಿತ್ತು. ಪ್ರಚಾರದ ಭರಾಟೆ ಜೋರಾಗಿತ್ತು. ರಾತ್ರಿಯೆಲ್ಲ ಪ್ರಚಾರ ಮಾಡಬಹುದಿತ್ತು.
ಗ್ರಾಮಗಳಲ್ಲಿ, ಬಂಟಿಂಗ್ಸ್ ಬ್ಯಾನರ್‌ಗಳು, ಪಾಂಪ್ಲೆಟ್‌ಗಳು ರಾರಾಜಿಸುತ್ತಿದ್ದವು. ಕಾರುಗಳಲ್ಲಿ ಮೈಕ್ ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದರು. ಚುನಾವಣೆ ಎಂದರೆ ಹಬ್ಬದ ವಾತಾವರಣ ಇರುತ್ತಿತ್ತು.ನಾವು ಸಮಯದ ಪರಿವೆ ಇಲ್ಲದೇ, ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುತ್ತಿ ದ್ದೆವು. ಆಗ ಟಿವಿ ಚಾನೆಲ್‌ಗಳು ಹೆಚ್ಚು ಇರಲಿಲ್ಲ. ಅಭ್ಯರ್ಥಿಗಳನ್ನು ಜನರು ಹತ್ತಿರದಿಂದ ನೋಡಿ ರುತ್ತಿರಲಿಲ್ಲ. ಹಾಗಾಗಿ ಅಭ್ಯರ್ಥಿಗಳನ್ನು ನೋಡುವ ಸಲುವಾಗಿಯೇ ಕುತೂಹಲದಿಂದ ನೆರೆಯುತ್ತಿದ್ದರು. ಗ್ರಾಮಗಳಿಗೆ ಪ್ರಚಾರದ ಕಾರುಗಳು ಹೋದಾಗ ಬಾಲಕರು ಕರಪತ್ರಗಳನ್ನು ಪಡೆಯಲು ಕಾರಿನ ಹಿಂದೆ ಓಡಿಬರುತ್ತಿದ್ದರು.
ಆಗ ಜನಸಾಮಾನ್ಯರಿಗೆ ರಾಜಕೀಯವಾಗಿ ಹೆಚ್ಚು ತಿಳಿದಿರುತ್ತಿರಲಿಲ್ಲ. ಗ್ರಾಮದಲ್ಲಿ ರಾಜಕೀಯದ ಹಿನ್ನೆಲೆಯಿದ್ದ ಮುಖಂಡರಿಗೆ ಮಾತ್ರ ರಾಜಕೀಯ ಆಸಕ್ತಿ ಇತ್ತು. ಈಗ ಸುದ್ದಿ ಮಾಧ್ಯಮಗಳು, ಮೊಬೈಲ್‌ಗಳು ಸಾಮಾಜಿಕ ಜಾಲ ತಾಣಗಳಿಂದಾಗಿ ಸಾಮಾನ್ಯ ಜನರಲ್ಲೂ ರಾಜಕೀಯ ಆಸಕ್ತಿ ಹೆಚ್ಚಾಗಿದೆ. ಚುನಾಯಿತ ಪ್ರತಿನಿಧಿಗಳಿಂದ ಜನರು ಹೆಚ್ಚು ನಿರೀಕ್ಷೆ ಮಾಡುತ್ತಿರಲಿಲ್ಲ. ಈಗ ಜನರಿಗೆ ಬಹಳ ತಿಳಿವಳಿಕೆ ಬಂದಿದೆ. ಗ್ರಾಮಗಳಿಗೆ ಹೋದಾಗ ರಾಜಕಾರಣಿಗಳನ್ನು ಪ್ರಶ್ನೆ ಮಾಡುತ್ತಾರೆ. ಗ್ರಾಮಗಳಿಗೆ ಆಗಬೇಕಾದ ಕೆಲಸಗಳನ್ನು ಕೇಳುವಷ್ಟು ಪ್ರಬುದ್ಧರಾಗಿದ್ದಾರೆ. ಮತ ಕೇಳಲು ಊರುಗಳಿಗೆ ಹೋದಾಗ, ಕೆಲಸ ಮಾಡದಿದ್ದ ರಾಜಕಾರಣಿಗಳನ್ನು ಜನರು ಪ್ರಶ್ನೆ ಮಾಡಿ ಹಿಂದಕ್ಕೆ ಕಳುಹಿಸಿದ ನಿದರ್ಶನಗಳೂ ಇವೆ.
● ಆರ್. ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ
ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.