ಉಭಯ ಪಕ್ಷಗಳ ಹೊಸಬರ ಮಧ್ಯೆ ತುರುಸಿನ ಸ್ಪರ್ಧೆ
Team Udayavani, May 5, 2023, 8:00 AM IST
ಸುಳ್ಯ: ಬಿಸಿಲಿನ ತೀವ್ರತೆಯಿಂದ ಪಯಸ್ವಿನಿಯಲ್ಲಿ ನೀರಿನ ಮಟ್ಟ ಕುಸಿತ ಗೊಂಡು ಇನ್ನೇನು ನೀರಿನ ಸಮಸ್ಯೆ ಉಂಟಾಗಲಿದೆ ಎನ್ನುವ ಆತಂಕದ ಕ್ಷಣದಲ್ಲಿ ಮಳೆಯಾಯಿತು. ಪರಿಣಾಮ ಸದ್ಯಕ್ಕೆ ನೀರಿನ ಸಮಸ್ಯೆಯಿಲ್ಲ. ಆದರೆ ಕ್ಷೇತ್ರದಲ್ಲಿ ಇನ್ನೂ ಮೋಡ ಮುಸುಕಿದೆ, ಮಳೆ ಬರುವ ಹಾಗಿಲ್ಲ !
ಸುಳ್ಯ ಹಾಗೂ ಕಡಬ ತಾಲೂಕು ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ. ಅರು ಅವಧಿ ಯಲ್ಲಿ ಗೆದ್ದ ಬಿಜೆಪಿ, ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಹಲವು ವರ್ಷಗಳಿಂದ ಕೈ ತಪ್ಪಿರುವ ಸುಳ್ಯದಲ್ಲಿ ಮತ್ತೆ ಬಾವುಟ ಹಾರಿಸಲು ಕಾಂಗ್ರೆಸ್ ಕಾರ್ಯ ನಿರತವಾಗಿದೆ. ಕಾಂಗ್ರೆಸ್‌ನ ಟಿ. ಕೃಷ್ಣಪ್ಪ ಅವರಿಗೆ ಬಿಜೆಪಿಯ ಭಾಗೀರಥಿ ಮುರುಳ್ಯ ಎದುರಾಳಿ.
ಈ ಬಾರಿ ಕ್ಷೇತ್ರಕ್ಕೆ ಎರಡೂ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರೇ ಬಂದಿರುವುದು ವಿಶೇಷ. ಎ.25ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ದಲ್ಲಿ ಪಾಲ್ಗೊಂಡಿದ್ದರೆ, ಎ.30ರಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಿ ದ್ದರು. ಆದರೆ ಇವರ ಭೇಟಿ ಮತ ತಂದುಕೊಟ್ಟಿàತೇ ಎಂಬುದೇ ಕುತೂಹಲ.
ಅಭಿವೃದ್ಧಿ ಮಾಡಿಲ್ಲ; ಮಾಡಿದ್ದೇವೆ
ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಅಭಿವೃದ್ಧಿ ಮಾಡಿಲ್ಲ ವರ್ಸಸ್ ಮಾಡಿ ದ್ದೇವೆ ಎಂಬ ಆರೋಪ-ಪ್ರತ್ಯಾರೋಪ ನಡೆದಿದೆ. ಮೂವತ್ತು ವರ್ಷ ಗಳಿಂದ ಬಿಜೆಪಿಯ ಶಾಸಕರಿದ್ದರೂ ರಸ್ತೆ, ಸೇತುವೆ, 110 ಕೆವಿ ಸಬ್‌ಸ್ಟೇಷನ್‌ನಂಥ ಸಮಸ್ಯೆಗಳನ್ನು ಪರಿಹರಿಸಿಲ್ಲ ಎಂಬುದು ಕಾಂಗ್ರೆಸ್‌ನ ಟೀಕೆ. ಅವೆಲ್ಲವೂ ಸುಳ್ಳು. ಸಬ್‌ಸ್ಟೇಷನ್ ಕಾಮಗಾರಿ ಆರಂಭ, ಕಿಂಡಿ ಅಣೆಕಟ್ಟು ಕಾಮಗಾರಿಗೆ ಚಾಲನೆ, ರಸ್ತೆ, ಸೇತುವೆ, ಬಸ್ ನಿಲ್ದಾಣ, ಕಡಬ ತಾಲೂಕು ಇತ್ಯಾದಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ ಎಂಬುದು ಬಿಜೆಪಿ ವಾದ.
ಚುನಾವಣಾ ಪ್ರಚಾರ ಭಾಷಣದಲ್ಲಿ ಎರಡೂ ಪಕ್ಷಗಳ ನಾಯಕರು ರಾಜ್ಯ, ರಾಷ್ಟ್ರಮಟ್ಟದ ವಿಷಯಗಳನ್ನು ಪ್ರಸ್ತಾವಿಸುತ್ತಿದ್ದರೆ, ಮತದಾರರು ಸ್ಥಳೀಯ ಬೇಡಿಕೆ, ಸಮಸ್ಯೆಗಳ ಬಗ್ಗೆಯೇ ಗಮನ ಸೆಳೆಯುತ್ತಿರುವುದು ವಿಶೇಷ. ಇದು ಮನೆ ಭೇಟಿ ಸಂದರ್ಭದಲ್ಲೂ ವ್ಯಕ್ತವಾಗುತ್ತಿದೆ.
ಎರಡೂ ಪಕ್ಷಗಳಲ್ಲೂ ಅಭ್ಯರ್ಥಿಗಳು ಹೊಸಬರು. ಆದರೆ ಬಿಜೆಪಿಯ ಹಾಲಿ ಶಾಸಕರ ಬಗ್ಗೆ ಇರುವ ಸಜ್ಜನ ಎಂಬ ಅಭಿಪ್ರಾಯ ಆ ಪಕ್ಷದ ಹೊಸಮುಖಕ್ಕೆ ವರದಾನವಾಗಬಹುದು. ಕಾಂಗ್ರೆಸ್ ಟಿಕೆಟ್ ಹಂಚಿಕೆ ಯಲ್ಲೂ ಸ್ವಲ್ಪ ಅಸಮಾಧಾನ ಉಂಟಾಗಿತ್ತು. ಟಿಕೆಟ್ ಆಕಾಂಕ್ಷಿಯೊಬ್ಬರು ಪ್ರತಿಭಟನೆ, ಬಂಡಾಯಕ್ಕೂ ಮುಂದಾಗಿದ್ದರು. ಕೊನೆಗೆ ಪಕ್ಷದ ಹಿರಿಯರ ಮಧ್ಯಸ್ಥಿಕೆಯಿಂದ ಎಲ್ಲವೂ ಸುಖಾಂತ್ಯಗೊಂಡಿದೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ಶಕ್ತಿ ತುಂಬೀತು.
ಪ್ರವೀಣ್ ನೆಟ್ಟಾರು ಪ್ರಕರಣ
ಇಡೀ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ಬಿಜೆಪಿ ಯುವ ನಾಯಕ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಹಿಂದೂ ಕಾರ್ಯಕರ್ತರ ಆಕ್ರೋಶ ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನೇ ಅಲುಗಾಡಿಸಿ, ಪಲ್ಟಿ ಮಾಡುವ ಮಟ್ಟಿಗೆ ನ್ಪೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪಿಎಫ್ಐ ನಿಷೇಧ ಸೆರಿದಂತೆ ಅಸಮಾಧಾನಿತರನ್ನು ಸಂತೈಸಲು ಹಲವು ಕ್ರಮ ಗಳನ್ನು ಕೈಗೊಂಡಿತು. ಇಲ್ಲದಿದ್ದರೆ ಈ ಆಕ್ರೋಶ ಬಿಜೆಪಿಯ ಮತಗಳಿಕೆಗೆ ಪೆಟ್ಟು ಕೊಡುವ ಸಾಧ್ಯತೆ ಇತ್ತು.
ಕಳೆದ ಚುನಾವಣೆಯಲ್ಲಿ ಮೋದಿ ಅಲೆ ಸಹ ಕ್ಷೇತ್ರದ ಗೆಲುವಿಗೆ ಕಾರಣವಾಗಿದ್ದಿರಬ ಹುದು. ಈ ಬಾರಿ ಮತ್ತೆ ಮೋದಿ ಅಲೆ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಿಸಬಹುದು. ಕಾಂಗ್ರೆಸ್ ಹೆಚ್ಚು ಪರಿಶ್ರಮ ಹಾಕಬೇಕಿರುವುದು ಅನಿವಾರ್ಯ.
ಕಣದಲ್ಲಿರುವ ಅಭ್ಯರ್ಥಿಗಳು 8
- ಭಾಗೀರಥಿ ಮುರುಳ್ಯ (ಬಿಜೆಪಿ)
- ಜಿ. ಕೃಷ್ಣಪ್ಪ (ಕಾಂಗ್ರೆಸ್)
- ಎಚ್.ಎಲ್. ವೆಂಕಟೇಶ್ (ಜೆಡಿಎಸ್)
- ಸುಮನಾ ಬೆಳ್ಳಾರ್ಕರ್ (ಎಎಪಿ)
- ಸುಂದರ ಮೇರ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ)
- ಗಣೇಶ್ ಎಂ. (ಕರ್ನಾಟಕ ರಾಷ್ಟ್ರ ಸಮಿತಿ)
- ರಮೇಶ್ ಬಿ. (ಉತ್ತಮ ಪ್ರಜಾಕೀಯ ಪಕ್ಷ)
- ಗುರುವಪ್ಪ ಕಲ್ಲುಗುಡ್ಡೆ (ಪಕ್ಷೇತರ)
ಲೆಕ್ಕಾಚಾರ ಏನು?
ಬಿಜೆಪಿಗೆ ಅಂಗಾರರ ಅವಧಿಯ ಅಭಿವೃದ್ಧಿ, ಮಹಿಳೆ ಎಂಬ ಅಂಶಗಳು ನೆರವಿಗೆ ಬರಬಹುದು. ಮತದಾರ ಒಮ್ಮೆ ಪಕ್ಷವನ್ನು ಬದಲಾ ಯಿಸೋಣ ಎಂದರೆ ಕಾಂಗ್ರೆಸ್‌ಗೆ ಖುಷಿಯಾಗಬಹುದು.
– ದಯಾನಂದ ಕಲ್ನಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.