ಕನ್ನಡವೆನೆ ಕುಣಿದಾಡುವುದೆನ್ನೆದೆ…
Team Udayavani, Nov 1, 2020, 8:00 AM IST
ಹೊರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಪ್ರತೀ ವರ್ಷ ಕನ್ನಡ ರಾಜ್ಯೋತ್ಸವವನ್ನು ಹೇಗೆ ಆಚರಿಸುತ್ತಾರೆ, ಅವರ
ಬದುಕಿನ ನಿತ್ಯದ ಚಟುವಟಿಕೆಗಳಲ್ಲೂ ಕನ್ನಡದ ಕಂಪು ಹೇಗೆ ಆವರಿಸಿದೆ ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ…
ಕನ್ನಡದ ಸೇವೆ ಮಾಡುವುದೇ ಹೆಮ್ಮೆ
ಮಸ್ಕತ್ ಕರ್ನಾಟಕ ಸಂಘವು, ಒಮನ್‌ನಿನ ಭಾರತೀಯ ಸಾಮಾಜಿಕ ವೇದಿಕೆ ಇದರ ಒಂದು ಅಂಗ ಸಂಸ್ಥೆಯಾಗಿದ್ದು , ಭಾರತೀಯ ಸಾಮಾಜಿಕ ವೇದಿಕೆ ಹಾಗೂ ಒಮಾನಿನ ಭಾರತೀಯ ರಾಯಭಾರ ಕಚೇರಿಯ ಮಾರ್ಗದರ್ಶಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಓಮಾನ್ ದೇಶದ ರಾಜಧಾನಿಯಾದ ಮಸ್ಕತ್‌ನ ಕನ್ನಡ, ತುಳು, ಕೊಂಕಣಿ, ಕೊಡವ ಮುಂತಾಗಿ ಕರ್ನಾಟಕ ಮೂಲದ ಜನರ ಸಾಮಾಜಿಕ, ಸಾಂಸ್ಕೃತಿಕ, ಹಾಗೂ ಭಾಷಾ ಕಲಿಕೆಯ ಅಗತ್ಯಗಳನ್ನು ಪೂರೈಸುವುದೇ ಮಸ್ಕತ್ ಕರ್ನಾಟಕ ಸಂಘ ಸ್ಥಾಪನೆ ಉದ್ದೇಶ. ಸುಮಾರು 400 ಕ್ಕೂ ಮೇಲ್ಪಟ್ಟು ಕರ್ನಾಟಕ ಮೂಲದ ಕುಟುಂಬಗಳು ಕರ್ನಾಟಕ ಸಂಘದ ಸದಸ್ಯರಾಗಿದ್ದಾರೆ. ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಆಡಳಿತ ಸಮಿತಿಯ ಸದಸ್ಯರನ್ನು ಅಂದರೆ ಒಟ್ಟು 9 ಜನರನ್ನು ಆರಿಸಲಾಗುತ್ತದೆ. ಮೂವರು ಹೆಂಗಳೆಯರು ನಮ್ಮ ಸಮಿತಿಯಲ್ಲಿರುವುದು ಹೆಮ್ಮೆಯ ವಿಷಯ. ಸದಸ್ಯರ ಮಕ್ಕಳಿಗಾಗಿ ಉಚಿತ ಕನ್ನಡ ತರಗತಿಗಳನ್ನು ನಡೆಸುತ್ತಿದ್ದೇವೆ. ಕನ್ನಡಿಗರ 125 ಕ್ಕಿಂತಲೂ ಹೆಚ್ಚು ಮಕ್ಕಳು ಕನ್ನಡ ಕಲಿಕೆಯಲ್ಲಿ ತೊಡಗಿ¨ªಾರೆ. ಸಂಘದ ಸದಸ್ಯರು ಸ್ವಯಂಪ್ರೇರಿತರಾಗಿ ನಮ್ಮ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ.
– ಕರುಣಾಕರ ರಾವ್, ಒಮನ್ ಕನ್ನಡ ಸಂಘದ ಅಧ್ಯಕ್ಷ
ವಿದ್ಯಾರ್ಥಿಗಳ ಸೇವೆಯೇ ಮುಖ್ಯ ಧ್ಯೇಯ
ಕಳೆದ ಐದು ವರ್ಷಗಳಿಂದ ಇಟಲಿಯಲ್ಲಿ ಕನ್ನಡ ಸಂಘ ಆರಂಭ ಮಾಡಲಾಗಿದೆ. ನಾವು ಮೊದಲು ಇಲ್ಲಿ ಓದಲು ಬರುವ ಕನ್ನಡದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಅಂತ ಕನ್ನಡ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಕೆಲಸ ಮಾಡಿದೆವು. ಮೊದಲು ಸಿನಿಮಾ ಪ್ರದರ್ಶನ ಆರಂಭ ಮಾಡಿ, ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಿದೆವು. ಕನ್ನಡದ ಚಲನಚಿತ್ರ ನಟರನ್ನು ಕರೆಸಿ ಅವರೊಂದಿಗೆ ಇಲ್ಲಿನ ಕನ್ನಡ ಜನರ ಜೊತೆ ಸಂವಾದ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಕೊರೊನಾ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದ 60 ಜನ ಕನ್ನಡಿಗ ವಿದ್ಯಾರ್ಥಿಗಳನ್ನು ಇಟಲಿ ಕನ್ನಡ ಸಂಘ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆ ಸಂಪರ್ಕ ಮಾಡಿ ಯಾವುದೇ ಆರ್ಥಿಕ ವೆಚ್ಚವಿಲ್ಲದೇ ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸುವ ಕೆಲಸ ಮಾಡಿದ್ದೇವೆ. ಇಟಾಲಿಯನ್ ಕನ್ನಡಿಗರಿಗೆ ಕನ್ನಡದ ಹಾಡುಗಳನ್ನು ಕಲಿಸಿ ಅವರಿಂದ ಕನ್ನಡದ ಹಾಡುಗಳನ್ನು ಹಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇಟಾಲಿಯನ್ ಪ್ರಜೆಯೊಬ್ಬರು ಕರ್ನಾಟಕಕ್ಕೆ ಬಂದು ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಪಿಎಚ್‌ಡಿ ಮಾಡಿದ್ದಾರೆ. ಅವರನ್ನು ಅಭಿನಂದಿಸಲಾಗಿದೆ.
– ಹೇಮೇಗೌಡ ಮಧು, ಇಟಲಿ ಕನ್ನಡ ಸಂಘದ ಅಧ್ಯಕ್ಷರು.
ಫ್ರಾನ್ಸ್ ನೆಲದಲ್ಲಿ ಕನ್ನಡ ಉಳಿಸುವ ಜತೆಗೆ ನಾಡ ಸೇವೆ
ಫ್ರಾನ್ಸ್ ಕನ್ನಡ ಬಳಗವು (ಎಫ್ಕೆಬಿ) ಕರ್ನಾಟಕದ ಮತ್ತು ಕನ್ನಡಿಗರ ಸಂಸ್ಕೃತಿಯನ್ನು ಫ್ರಾನ್ಸ್‌ನಲ್ಲಿ ಹರಡುವ ಉದ್ದೇಶ ದಿಂದ 2013ರಲ್ಲಿ ಸ್ಥಾಪನೆಯಾಗಿತ್ತು. ಫ್ರಾನ್ಸ್‌ನಲ್ಲಿ ಕನ್ನಡಿಗರಿ ಗಾಗಿ ಹಲವಾರು ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ನಡೆಸುವ ಮೂಲಕ ಫ್ರಾನ್ಸ್‌ನಲ್ಲಿ ಕನ್ನಡಿಗರನ್ನು ಒಟ್ಟುಗೂಡಿ ಸುವಲ್ಲಿ ಸಕ್ರಿಯವಾಗಿದೆ. ಪ್ರತಿ ವರ್ಷ ರಾಜ್ಯೋತ್ಸವ ಹಾಗೂ ದೀಪಾವಳಿ ಸಮಾರಂಭ ಆಯೋಜಿಸಲಾಗುವುದು. ಸಮಾರಂ ಭದಲ್ಲಿ ಅಂತ್ಯಾಕ್ಷರಿ, ರಸಪ್ರಶ್ನೆ, ಸಂಗೀತ ಮಾಧುರ್ಯ ಮತ್ತು ಇತರೆ ಆಟಗಳು ಮತ್ತು ಕಾರ್ಯಕ್ರಮಗಳೊಂದಿಗೆ ಸಮಾ ರಂಭ ಆಚರಿಸಲಾಗುವುದು. ಇದರ ಜತೆಗೆ, ಸಮಾರಂಭ ದಲ್ಲಿ ವರ್ಷದ ಕನ್ನಡಿಗ ಹಾಗೂ ಕನ್ನಡತಿ ಸ್ಪರ್ಧೆ ನಡೆಸಲಾಗು ತ್ತದೆ. ಫ್ರಾನ್ಸ್ ಕನ್ನಡ ಸಂಘವು ಪ್ರತಿ ವರ್ಷ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ಯುಗಾದಿ, ದಸರಾ, ದೀಪಾವಳಿ ಹಬ್ಬಗಳನ್ನು ಆಚರಣೆ ಮಾಡುತ್ತ ಬರುತ್ತಿದೆ. ವಿಶೇಷವಾಗಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಲು ಪ್ರಯತ್ನ ನಡೆಸಲಾಗುತ್ತಿದೆ. ಮಕ್ಕಳಿಗೆ ಕನ್ನಡದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಲು ಅಂತ್ಯಾಕ್ಷರಿ ಹಾಡುವುದು, ಹಳ್ಳಿ ಆಟಗಳ ಸ್ಪರ್ಧೆ ಏರ್ಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
– ಸಾಗರ ಉದಯಕುಮಾರ, ಕಾರ್ಯದರ್ಶಿ, ಫ್ರಾನ್ಸ್ ಕನ್ನಡ ಬಳಗ
ವಿಶ್ವದೆಲ್ಲೆಡೆ ಕನ್ನಡ ಜ್ಯೋತಿ ಬೆಳಗಿಸುತ್ತಿದ್ದೇವೆ
ಯುನೈಟೆಡ್ ಕಿಂಗಡಮ್‌ನಲ್ಲಿ 18 ವರ್ಷದಿಂದ ಕನ್ನಡ ಸಂಘದ ಕೆಲಸ ಮಾಡುತ್ತಿದ್ದೇವೆ. ಸೌತ್ ಇಂಡಿ¿åನ್ ಅಸೋಸಿಯೇಷನ್‌ನಲ್ಲಿ ಕನ್ನಡ ತೆಲುಗು, ತಮಿಳು, ಮಲಯಾಳಿಗಳಿದ್ದಾರೆ. ಅದರಲ್ಲಿ ಕನ್ನಡದ ಸಂಸ್ಕೃತಿ ಕಾರ್ಯಕ್ರಮ, ನಾಟಕ ರೂಪದಲ್ಲಿ ನೃತ್ಯ ರೂಪಕದಲ್ಲಿ ಪ್ರದರ್ಶನ ಮಾಡುತ್ತೇವೆ. ರಾಮಾಯಣ, ಮೈಸೂರು ದಸರಾ, ಕುರುಕ್ಷೇತ್ರ, ಪರ ಭಾಷಿಗರ ಮುಂದೆ ಕನ್ನಡಿಗರ ಪರಂಪರೆಯನ್ನು ಪ್ರಸ್ತುತ ಪರಿಸುವ ಕೆಲಸ ಮಾಡುತ್ತೇವೆ. ಯುಕೆ ನಲ್ಲಿ ದಸರಾ ಮೆರವಣಿಗೆ ಮಾಡಿ ಮೆಕ್ಯಾನಿಕಲ್ ಆನೆ ಮಾಡಿ, ಸ್ಥಳೀಯ ಕಲಾವಿದರಿಗೆ ತರಬೇತಿ ನೀಡಿ ದಸರಾ ಉತ್ಸವ ಮಾಡಿದ್ದೇವೆ.
ಕನ್ನಡ ಸಾಂಸ್ಕೃತಿಕ ಜ್ಯೋತಿಯನ್ನು ವಿಶ್ವದಾದ್ಯಂತ ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿರುವ ಕನ್ನಡಿಗರಿಂದ ಈ ಜ್ಯೋತಿಯನ್ನು ಬೆಳಗಿಸುವ ಕಾರ್ಯ ಮಾಡಲಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಜ್ಯೋತಿ ಬೆಳಗಿಸಲಿದ್ದಾರೆ. ಈಶಾನ್ಯ ದೇಶದಿಂದ ಪಾಶ್ಚಿಮಾತ್ಯ ದೇಶಕ್ಕೆ ಈ ಜ್ಯೋತಿ ತೆರಳಲಿದ್ದು, ಒಂದೊಂದು ದೇಶದಲ್ಲಿ ಒಂದೊಂದು ಸಮಯದಲ್ಲಿ ಸೂರ್ಯೋದಯ ಆಗುವುದರಿಂದ ಅದರ ಆಧಾರದಲ್ಲಿ ಜ್ಯೋತಿ ವಿಶ್ವ ಪರ್ಯಟನೆ ನಡೆಸಲಿದೆ. ನೂರಕ್ಕೂ ಹೆಚ್ಚು ಸಂಘಗಳು ಒಂದೇ ವೇದಿಕೆಗಳು ಬರುತ್ತಿರುವುದು ಹೆಮ್ಮೆಯ ವಿಷಯ.
– ಹರಿಶ್ ರಾಮಯ್ಯ, ಡಾರ್ಬಿ ಕನ್ನಡಿಗರು, ಅಧ್ಯಕ್ಷರು, ಯುಕೆ
ರಾಜ್ಯೋತ್ಸವ ಕಪ್ ಕ್ರಿಕೆಟ್
ಆಸ್ಟ್ರೇಲಿಯಾದಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಕನ್ನಡ ಸಂಘಗಳು ಸಕ್ರಿಯವಾಗಿವೆ. ನಮ್ಮದು ಕನ್ನಡ ರಾಕರ್ಸ್ ರಾಜ್ಯೋತ್ಸವ ಬಳಗ. ಕಳೆದ ಆರೇಳು ವರ್ಷದಿಂದ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಟೂರ್ನಿಮೆಂಟ್ ನಡೆಸುತ್ತೇವೆ. ಕನ್ನಡಿಗರು ಮತ್ತು ಬೇರೆ ಭಾಷಿಕರ 12 ಟೀಮ್ ಬರುತ್ತವೆ. ಅಂದು ಲೇಡಿಸ್ ಗೆ ಥ್ರೊ ಬಾಲ್, ಮಕ್ಕಳಿಗೆ ಬೇರೆ ಬೇರೆ ಆಟಗಳನ್ನು ಆಡಿಸುತ್ತೇವೆ.
ನಮ್ಮ ರಾಕರ್ಸ್ ಬಳಗದ ವಿಶೇಷತೆ ಏನು ಅಂದ್ರೆ ಕ್ರಿಕೆಟ್ ನಲ್ಲಿ ಜಯ ಗಳಿಸಿದ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಡಿಸುವುದು, ನೃತ್ಯ ಮಾಡಿಸುವುದು ಕನ್ನಡ ಸಂಘದ ಮುಖಾಂತರ ಲೈಬ್ರರಿಯಲ್ಲಿ ಓದುಗರ ಕೂಟದಲ್ಲಿ ಕನ್ನಡ ಪುಸ್ತಕಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ.
ಪ್ರತಿ ವರ್ಷ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ರಾಜ್ಯೋತ್ಸವದ ದಿನ ಮಕ್ಕಳಿಗೆ ಕನ್ನಡದ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುತ್ತದೆ. ಪ್ರತಿ ವರ್ಷ ರಾಜ್ಯದ ಕಲಾವಿದರನ್ನು ಕರೆಸಿ ಸಮ್ಮಾನಿಸಲಾಗುತ್ತಿದೆ.
– ಮಂಜುನಾಥ, ರಾಕರ್ಸ್ ರಾಜ್ಯೋತ್ಸವ ಬಳಗ, ಮೆಲ್ಬೋರ್ನ್, ಆಸ್ಟ್ರೇಲಿಯಾ
ಡಚ್ಚರ ನಾಡಲ್ಲಿ ಕನ್ನಡ ಕಲರವ
ನವೆಂಬರ್ ಬಂತೆಂದರೆ ಕನ್ನಡದ ಹಬ್ಬ ಆಚರಣೆ ಇರಲೇಬೇಕು. ಈ ಹಬ್ಬ ಆಚರಿಸಲು ಕನ್ನಡ ನೆಲದಲ್ಲಿ ಇರಲೇ ಬೇಕು ಎಂದಿಲ್ಲ. ಕೆಲಸದ ನಿಮಿತ್ತ ಅಥವಾ ಇನ್ನಾವುದೋ ಕಾರಣಕ್ಕಾಗಿ ಕನ್ನಡ ನೆಲದಿಂದ ದೂರ ಉಳಿದವರು ಕೂಡ ತನ್ನ ಬೇರನ್ನು ಮರೆಯದೇ ಅಷ್ಟೇ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿವುದು ಹೆಮ್ಮೆಯ ವಿಷಯ. ದಶಕಗಳಿಂದಲೂ ನೆದರಲ್ಯಾಂಡ್‌ಗೆ ಬಂದು ನೆಲೆಯೂರಿದವರೆಲ್ಲ ಕನ್ನಡಿಗರನ್ನು ಒಟ್ಟುಗೂಡಿಸಲು ಶ್ರಮ ನಿರಂತರ ನಡೆದಿದೆ. ಅಷ್ಟಲ್ಲದೇ, ಕನ್ನಡದ ಪ್ರತಿಭೆಗಳನ್ನೆಲ್ಲ ಹುಡುಕಿ ಹೆಕ್ಕಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕನ್ನಡದ ನೆಲವನ್ನು ಬಹುದೂರ ಬಿಟ್ಟು ಬಂದವರಿಗೆ, ಒಂದೇ ಸೂರಿನಡಿಯಲ್ಲಿ ಸೇರಲು ಇದೊಂದು ಉತ್ತಮ ಅವಕಾಶವಾಗಿದೆ. ಬೆಂಗಳೂರು, ಮಂಗಳೂರು, ಉತ್ತರ ಕರ್ನಾಟಕ ಹೀಗೆ ಹತ್ತು ಹಲವು ಪ್ರದೇಶಗಳಿಂದ ಬಂದವರೆಲ್ಲ ಒಂದೆಡೆ ಸೇರುವುದೇ ಸಂಭ್ರಮ. ಈ ಬಾರಿ ಸಂಭ್ರಮ ಆರಂಭವಾಗುವುದಕ್ಕೂ ಮುನ್ನವೇ ಮತ್ತೆ ಲಾಕ್ ಡೌನ್ ಆರಂಭವಾಗಿದೆ. ವರ್ಚುವಲ್ ಆಚರಣೆಗೆ ಅವಕಾಶ ಇದೆಯಾದರೂ, ಒಂದೆಡೆ ಸೇರುವ ಗಮ್ಮತ್ತು, ಕಂಪ್ಯೂಟರ್ ಎದುರು ಕುಳಿತು ನೋಡುವಾಗ ಇರದು. ಮತ್ತೆ ಎಲ್ಲ ಕನ್ನಡದ ಮನಸುಗಳೂ ಒಂದೆಡೆ ಸೇರುವಂತಾಗಲಿ ಎಂಬುದೇ ನೆದರ್‌ಲ್ಯಾಂಡಿನಲ್ಲಿರುವ ಎಲ್ಲ ಕನ್ನಡಿಗರ ಆಶಯ.
– ಚೈತ್ರ ಎಲ್ ಹೆಗಡೆ, ನೆದರ್‌ಲ್ಯಾಂಡ್ ಕನ್ನಡ ಸಂಘದ ಸದಸ್ಯರು
ಹೊರಗಿರುವ ನಮಗೆ ಕನ್ನಡ ಅಭಿಮಾನ ಹೆಚ್ಚು
ಮೆಲ್ಬೋರ್ನ್ ಕನ್ನಡ ಸಂಘಕ್ಕೆ 34 ವರ್ಷ ಆಯ್ತು ಪ್ರತಿ ವರ್ಷ ರಾಜ್ಯೋತ್ಸವ ಆಚರಿಸುತ್ತೇವೆ. ಈ ವರ್ಷ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿಯವರಿಂದ ರಾಜ್ಯೋತ್ಸವ ಉದ್ಘಾಟನೆ ಮಾಡುತ್ತಿದ್ದೇವೆ.
ಮೆಲ್ಬೋರ್ನ್ ಕನ್ನಡ ಸಂಘದ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಸುತ್ತೇವೆ. ಇಲ್ಲಿನ ಕನ್ನಡಿಗರು ಸಾಕಷ್ಟು ಸಕ್ರಿಯರಾಗಿದ್ದೇವೆ. ಬೇರೆ ಕನ್ನಡ ಸಂಘದವರು ಸಕ್ರಿಯರಾಗಿದ್ದಾರೆ. ಇಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ. ಎರಡು ಕೇಂದ್ರದಲ್ಲಿ 220 ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ. ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದವರೇ ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಎಲ್ಲ ರಾಜ್ಯಗಳಲ್ಲಿ ಕನ್ನಡ ಸಂಘಗಳು ಸಕ್ರೀಯವಾಗಿವೆ. ಹೊರಗಡೆ ಇರುವ ನಮಗೆ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಇಲ್ಲಿ ಒಂದು ಕನ್ನಡ ಭವನ ನಿರ್ಮಾಣ ಮಾಡುವ ಪ್ರಯತ್ನ ನಡೆಸಿದ್ದೇವೆ. ರಾಜ್ಯದಿಂದ ಓದಲು ಬರುವ ಕನ್ನಡದ ವಿದ್ಯಾರ್ಥಿಗಳಿಗೆ ವಾಸಕ್ಕೆ ಸಮಸ್ಯೆಯಾಗುತ್ತಿದೆ ಅವರಿಗೆ ಅನುಕೂಲ ಕಲ್ಪಿಸಲು ಕನ್ನಡ ಭವನ ನಿರ್ಮಾಣ ಮಾಡುವ ಪ್ರಯತ್ನ ನಡೆಸಿದ್ದೇವೆ.
– ಶ್ರೀನಿವಾಸ್ ಶರ್ಮಾ, ಮೆಲ್ಬೋರ್ನ್ ಕನ್ನಡ ಸಂಘದ ಉಪಾಧ್ಯಕ್ಷರು
ಕತಾರ್‌ನಲ್ಲಿ ಪ್ರತಿ ಶುಕ್ರವಾರ ಕನ್ನಡ ತರಗತಿ
ಕತಾರ್‌ನಲ್ಲಿ ಸುಮಾರು 35 ಸಾವಿರ ಕನ್ನಡಿಗರಿದ್ದಾರೆ. ಅದರಲ್ಲಿ ಶೇ 65 ರಷ್ಟು ಕೂಲಿ ಕಾರ್ಮಿಕರಿದ್ದಾರೆ. ಕತಾರ್‌ನ ಎರಡು ಶಾಲೆಯಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಎಂ ಇಎಸ್ ಮತ್ತು ಐಡಿಯಲ್ ಇಂಡಿಯನ್ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಕನ್ನಡ ಕಲಿಸಲಾಗುತ್ತಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಕನ್ನಡ ತರಗತಿಗಳನ್ನು ಆರಂಭಿಸಲು ಮನವಿ ಮಾಡಿದ್ದೆವು. ಅವರು ಸುಮಾರು 250 ವಿದ್ಯಾರ್ಥಿಗಳು ಬೇಕು ಎನ್ನುತ್ತಾರೆ. ಅದಕ್ಕಾಗಿ ಕತಾರ್ ಕನ್ನಡ ಸಂಘದಿಂದ ಪ್ರತಿ ಶುಕ್ರವಾರ ಮಕ್ಕಳಿಗೆ ಒಂದು ಗಂಟೆ ಕನ್ನಡ ತರಗತಿ ನಡೆಸಲಾಗುತ್ತದೆ. ಮಕ್ಕಳಿಗೆ ಕನ್ನಡದ ಬಗ್ಗೆ ಆಶುಭಾಷಣ ಮಾಡಿಸಲಾಗುತ್ತದೆ. ಕನ್ನಡ ತರಗತಿಗೆ ಹೆಚ್ಚು ಹಾಜರಾದ ಮಕ್ಕಳಿಗೆ ವಿಶೇಷ ಬಹುಮಾನ ನೀಡಲಾಗುತ್ತಿದೆ. ಭಾರತೀಯ ಸಮುದಾಯ ಹಿತರಕ್ಷಣಾ ವೇದಿಕೆ ಮೂಲಕ ಕೊರೊನಾ ಸಂದರ್ಭದಲ್ಲಿ ಸುಮಾರು 3 ಸಾವಿರ ಕನ್ನಡಿಗರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ಉದ್ಯೋಗ ಕಳೆದುಕೊಂಡಿದ್ದ ಕನ್ನಡಿಗರಿಗೆ ಎರಡು ಚಾರ್ಟರ್ಡ್ ಫ್ಲೆçಟ್ ಮಾಡಿ ತವರಿಗೆ ಕಳುಹಿಸಿ ಕೊಡಲಾಗಿದೆ.
– ಸುಬ್ರಹ್ಮಣ್ಯ ಹೆಬ್ಟಾಗಿಲು, ಕತಾರ್ ಕನ್ನಡ ಸಂಘದ ಮಾಜಿ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದ ರಾಜಕೀಯ ಪಿತೂರಿ: ಡಿಕೆಶಿ
Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ
Republic Day Parade: ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.