14 ಮಂದಿ ಸಾಧಕರಿಗೆ ಸಂದೇಶ ಪ್ರಶಸ್ತಿ
Team Udayavani, Feb 9, 2022, 5:55 AM IST
ಮಂಗಳೂರು: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಸಾಹಿತ್ಯ, ಶಿಕ್ಷಣ, ಮಾಧ್ಯಮ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಘಟನೆಗಳಿಗೆ ನೀಡುವ ವಾರ್ಷಿಕ 2020-21 ಮತ್ತು 2021-22ನೇ ಸಾಲಿನ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿಗೆ 14 ಸಾಧಕರು, ಒಂದು ಸಂಘಟನೆ ಮತ್ತು ಒಂದು ಪತ್ರಿಕೆಯನ್ನು ಆಯ್ಕೆ ಮಾಡಿದೆ ಎಂದು ಸಂದೇಶ ಪ್ರತಿಷ್ಠಾನದ ವಿಶ್ವಸ್ತ ರೊಯ್ ಕ್ಯಾಸ್ತಲಿನೊ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.
ಸಾಹಿತ್ಯ ಪ್ರಶಸ್ತಿ: ಕನ್ನಡ- ಬರಗೂರು ರಾಮಚಂದ್ರಪ್ಪ (ತುಮಕೂರು), ಕೊಂಕಣಿ- ಅಮರ್ ಕೊಂಕಣಿ (ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆ ವತಿಯಿಂದ ಆರಂಭವಾದ ಪತ್ರಿಕೆ), ತುಳು- ಡಾ| ಸುನಿತಾ ಎಂ. ಶೆಟ್ಟಿ (ದಕ್ಷಿಣ ಕನ್ನಡ), ಮಾಧ್ಯಮ ಪ್ರಶಸ್ತಿ- ನಾಗೇಶ ಹೆಗಡೆ (ಉತ್ತರ ಕನ್ನಡ), ಕೊಂಕಣಿ ಸಂಗೀತ ಪ್ರಶಸ್ತಿ-ಮೀನ ರೆಬಿಂಬಸ್ (ದ.ಕ.), ಕಲಾ ಪ್ರಶಸ್ತಿ- ಅವಿತಾಸ್ ಎಡೋಲ#ಸ್ ಕುಟಿನ್ಹಾ (ದ.ಕ.), ಶಿಕ್ಷಣ ಪ್ರಶಸ್ತಿ- ಡಾ| ಲಕ್ಷ್ಮಣ್ ಸಾಬ್ ಚೌರಿ (ಬಾಗಲಕೋಟೆ) ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್ (ಬೆಂಗಳೂರು) 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಪ್ರಶಸ್ತಿ: ಕನ್ನಡ – ರಹ್ಮತ್ ತರೀಕೆರೆ (ಚಿಕ್ಕಮಗಳೂರು), ಕೊಂಕಣಿ – ಮೆಲ್ವಿನ್ ರಾಡ್ರಿಗಸ್ (ದ.ಕ.), ತುಳು- ಬಿ.ಕೆ. ಗಂಗಾಧರ್ ಕಿರೋಡಿಯನ್ (ದ.ಕ.), ಮಾಧ್ಯಮ ಪ್ರಶಸ್ತಿ- ಡಾ| ಟಿ.ಸಿ. ಪೂರ್ಣಿಮಾ (ಬೆಂಗಳೂರು), ಕೊಂಕಣಿ ಸಂಗೀತ ಪ್ರಶಸ್ತಿ- ಆಲ್ವಿನ್ ನೊರೊನ್ಹಾ (ದ.ಕ.), ಕಲಾ ಪ್ರಶಸ್ತಿ- ಕಾಸರಗೋಡು ಚಿನ್ನಾ (ಕಾಸರಗೋಡು), ಶಿಕ್ಷಣ ಪ್ರಶಸ್ತಿ- ಡಾ| ಪಿ.ಕೆ. ರಾಜಶೇಖರ್ (ಮೈಸೂರು), ವಿಶೇಷ ಪ್ರಶಸ್ತಿ- ಸ. ರಘುನಾಥ್ (ಚಿಕ್ಕಬಳ್ಳಾಪುರ) 2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಲೇರಿಯನ್ ರಾಡ್ರಿಗಸ್ ಅಧ್ಯಕ್ಷ ತೆಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ| ಬಿ.ಎಸ್. ತಲ್ವಾಡಿ, ಡಾ| ನಾ.ದಾ.
ಶೆಟ್ಟಿ, ಕೊನ್‌ಸೆಪಾr ಆಳ್ವ, ಚಂದ್ರಕಲಾ ನಂದಾವರ ಮತ್ತು ಮೊಹಮ್ಮದ್ ಬಡೂxರು ಸದಸ್ಯರಾಗಿದ್ದಾರೆ. ಪ್ರತಿಷ್ಠಾ
ನದ ನಿರ್ದೇಶಕ ಫಾ| ಫ್ರಾನ್ಸಿಸ್ ಅಸ್ಸಿಸಿ ಅಲ್ಮೆಡಾ, ಮ್ಯಾನೇಜರ್ ಸೈಮನ್ ಡಿ’ಸೋಜಾ ಉಪಸ್ಥಿತರಿದ್ದರು.
ಫೆ. 22ರಂದು ಪ್ರಶಸ್ತಿ ಪ್ರದಾನ
ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಪ್ರಶಸ್ತಿ ಆಯ್ಕೆ, ಪ್ರದಾನ ನಡೆಯದ ಕಾರಣ ಈಗ ಎರಡೂ ವರ್ಷಗಳದ್ದನ್ನು ಪ್ರದಾನ ಮಾಡಲಾಗುತ್ತಿದೆ. ಫೆ. 22ರಂದು ಸಂಜೆ 5.30ಕ್ಕೆ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂದೇಶ ಪ್ರತಿಷ್ಠಾನದ ಅಧ್ಯಕ್ಷ, ಬಳ್ಳಾರಿ ಬಿಷಪ್ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅಧ್ಯಕ್ಷತೆ ವಹಿಸುವರು. ಮಂಗಳೂರು ವಿ.ವಿ. ಕುಲಪತಿ ಡಾ| ಪಿ.ಎಸ್. ಯಡಪಡಿತ್ತಾಯ, ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹ, ಉಡುಪಿ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.