ಕ್ಷೇತ್ರ ದರ್ಶನ: ಜನತಾ ಪರಿವಾರದ ಭದ್ರ ನೆಲೆ!


Team Udayavani, Jan 23, 2023, 6:40 AM IST

ಕ್ಷೇತ್ರ ದರ್ಶನ: ಜನತಾ ಪರಿವಾರದ ಭದ್ರ ನೆಲೆ!

ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಜಿಲ್ಲೆ ಎಂದರೆ ಅದು ಹಾಸನ. ಹಿಂದಿ ನಿಂದಲೂ ಜನತಾ ಪರಿವಾರದ ಭದ್ರ ನೆಲೆಯಂತಿರುವ ಇಲ್ಲಿ ಕಾಂಗ್ರೆಸ್‌, ಬಿಜೆಪಿಗಿಂತ ಇವರೇ ಹೆಚ್ಚು ಬಾರಿ ಆಯ್ಕೆಯಾಗಿದ್ದಾರೆ. ಹಾಗೆಯೇ ದೇಶಕ್ಕೆ ಪ್ರಧಾನಿ ಕೊಟ್ಟ ಜಿಲ್ಲೆ ಎಂಬ ಖ್ಯಾತಿಯೂ ಈ ಜಿಲ್ಲೆಗಿದೆ.

ಹಾಸನ: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಪ್ರಭಾವಿಯಾಗಿರುವ ಹಾಸನ ಜಿಲ್ಲೆ ಜನತಾ ಪರಿವಾರದ ಭದ್ರನೆಲೆ. ತುರ್ತು ಪರಿಸ್ಥಿತಿಯ ಬಳಿಕ ನಡೆದ ಚುನಾವಣೆಗಳಲ್ಲಿ ಒಂದೆರೆಡು ಸಂದರ್ಭ ಬಿಟ್ಟರೆ ಕಾಂಗ್ರೆಸೇತರ, ಇತ್ತೀಚಿನ ದಿನಗಳಲ್ಲಿಯೂ ಕಾಂಗ್ರೆಸ್‌ ಮತ್ತು ಬಿಜೆಪಿಯೇತರ ರಾಜಕೀಯ ಶಕ್ತಿಯನ್ನು ಪೋಷಿಸಿಕೊಂಡು ಬಂದಿದೆ. ಹಳೆ ಮೈಸೂರು ಪ್ರಾಂತದಲ್ಲಿ ಬಂಡಾಯ ರಾಜಕಾರಣದ ಮೂಲಕವೇ ಹಾಸನ ಜಿಲ್ಲೆಯ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.
ಹಾಸನ ಜಿಲ್ಲೆಯ ರಾಜಕಾರಣಿಗಳು ಹೊರ ಜಿಲ್ಲೆಗಳಿಗೂ ವಲಸೆ ಹೋಗಿ ರಾಜಕೀಯ ಯಶಸ್ಸು ಕಂಡುಕೊಂಡಿದ್ದಾರೆ. ರಾಜ್ಯದಲ್ಲಿ ಮೂರು ಬಾರಿ ಹಾಸನ ಜಿಲ್ಲೆಯವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಹಾಸನ ಜಿಲ್ಲೆಯವರೆಂದು ತಾಂತ್ರಿಕವಾಗಿ ಹೇಳಿ ಕೊಳ್ಳಲಾಗದು. ಎಚ್‌.ಡಿ.ದೇವೇಗೌಡ ಅವರು ಸತತ ಆರು ಬಾರಿ ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾದರೂ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯ ಮಂತ್ರಿಯಾದರು. ಹಾಗೆಯೇ ಎಚ್‌.ಡಿ.ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯ ಮಣ್ಣಿನ ಮಗನಾದರೂ ಅವರು ರಾಮನಗರ ಜಿಲ್ಲೆಯಲ್ಲಿ ರಾಜಕೀಯ ನೆಲೆ ಕಂಡುಕೊಂಡು ಎರಡು ಬಾರಿ ಮುಖ್ಯಮಂತ್ರಿಯಾದರು. ಅರಕಲಗೂಡು ವಿಧಾನಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಎಚ್‌.ಎನ್‌.ನಂಜೇಗೌಡ ಒಮ್ಮೆ ಬೆಂಗಳೂರು ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿದ್ದವರು.
ಮೈಸೂರು ಪ್ರಾಂತದ ವಿಧಾನಸಭೆಗೆ 1952ರಲ್ಲಿ ಚುನಾವಣೆ ನಡೆದಾಗ ಹೊಳೆನರಸೀಪುರ, ಅರಕಲಗೂಡು, ಚನ್ನರಾಯಪಟ್ಟಣ, ಜಾವಗಲ್‌, ಅರಸೀಕೆರೆ ಸಹಿತ 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದ ಜಿಲ್ಲೆ ಮೈಸೂರು ರಾಜ್ಯದಲ್ಲಿ 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿತ್ತು. ಅನಂತರ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದ ಜಿಲ್ಲೆ ಕ್ಷೇತ್ರಗಳ ಪುನರ್‌ ವಿಂಗಡಣೆಯ ಅನಂತರ ಕ್ಷೇತ್ರಗಳ ಸಂಖ್ಯೆ 7ಕ್ಕೆ ಸೀಮಿತವಾಯಿತು. ಈಗಿರುವ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಸಕಲೇಶಪುರ ಕ್ಷೇತ್ರ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರ. ಇನ್ನುಳಿದ 6 ಸಾಮಾನ್ಯ ವಿಧಾನಸಭಾ ಕ್ಷೇತ್ರಗಳಾಗಿವೆ.

ಹೊಳೆನರಸೀಪುರ
ಹೊಳೆನರಸೀಪುರ ಒಟ್ಟು 15 ಬಾರಿ ಚುನಾವಣೆಗಳನ್ನು ಎದುರಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಎ.ಜಿ.ರಾಮಚಂದ್ರರಾವ್‌ 1952ರಲ್ಲಿ ಪ್ರಥಮ ಬಾರಿ ಪ್ರತಿನಿಧಿಸಿದ್ದರು. 1962ರಿಂದ 1985ರ ವರೆಗೆ ಸತತ 6 ಬಾರಿ ಎಚ್‌.ಡಿ.ದೇವೇಗೌಡ ಅವರು ಗೆದ್ದಿರುವುದು ದಾಖಲೆ. ದೇವೇಗೌಡ ಅವರು ಪ್ರಥಮ ಬಾರಿ ಪಕ್ಷೇತರ ರಾಗಿ ಈ ಕ್ಷೇತ್ರದಿಂದ ಗೆದ್ದಿದ್ದರು. ಅನಂತರ ಭಾರ ತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಬಳಿಕ 1978ರಲ್ಲಿ ಜನತಾ ಪಕ್ಷದಿಂದ ಗೆದ್ದು ಜನತಾಪರಿವಾರದ ನಾಯ ಕರಾಗಿ ಹೊರ ಹೊಮ್ಮಿದವರು. ವಿಧಾನಸಭೆಯ ವಿಪಕ್ಷ ನಾಯಕರು, ಸಚಿವರಾಗಿದ್ದ ದೇವೇಗೌಡ 1989ರಲ್ಲಿ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿ ಗೌಡ ಎದುರು ಸೋತ ಅನಂತರ ಕ್ಷೇತ್ರದತ್ತ ಬರಲಿಲ್ಲ. 1994ರಲ್ಲಿ ದೇವೇಗೌಡರ ಪುತ್ರ ಎಚ್‌.ಡಿ.ರೇವಣ್ಣ ಅವರು ಜಿ.ಪುಟ್ಟಸ್ವಾಮಿಗೌಡರನ್ನು ಸೋಲಿಸಿದ್ದರು. 1999ರಲ್ಲಿ ಎ.ದೊಡ್ಡೇಗೌಡ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದನ್ನು ಬಿಟ್ಟರೆ, ಜೆಡಿ ಎ ಸ್‌ನ ಎಚ್‌. ಡಿ.ರೇ ವಣ್ಣ ಕಳೆದ ಐದು ಬಾರಿ ಯಿಂದ ಕ್ಷೇತ್ರ ವನ್ನು ಪ್ರತಿ ನಿ ಧಿ ಸು ತ್ತಿ ದ್ದಾ ರೆ. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ ಹೊಳೆನರಸೀಪುರ ಕ್ಷೇತ್ರ 3 ತಾಲೂಕುಗಳ ಹೋಬಳಿಗಳನೊ°ಳಗೊಂಡಿದೆ. ಹೊಳೆನರಸೀಪುರ ತಾಲೂಕಿನ ಕಸಬಾ, ಹಳೆಕೋಟೆ ಹೋಬಳಿ, ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿ, ಹಾಸನ ತಾಲೂಕಿನ ದುದ್ದ ಮತ್ತು ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯನ್ನು ಹೊಂದಿದೆ.

ಅರಕಲಗೂಡು
1952ರಿಂದ ಒಟ್ಟು 15 ಚುನಾವಣೆಗಳನ್ನು ಎದುರಿಸಿರುವ ಅರಕಲಗೂಡು ಕ್ಷೇತ್ರವನ್ನು ಜಿ.ಎ.ತಿಮ್ಮಪ್ಪ ಗೌಡ ಅವರು ಎರಡು ಬಾರಿ ಪ್ರತಿನಿಧಿಸಿದ್ದರು. ಜನತಾ ಪರಿವಾರದ ಕೆ.ಬಿ.ಮಲ್ಲಪ್ಪ ಅವರು ಸತತ ಮೂರು ಬಾರಿ ಪ್ರತಿನಿಧಿಸಿದ್ದು, ಈ ಕ್ಷೇತ್ರದ ದಾಖಲೆ. 1957ರಲ್ಲಿ ಪುಟ್ಟೇಗೌಡ ಅವರು ಒಮ್ಮೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇನ್ನುಳಿದವರು 2 ರಿಂದ 4 ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಎಚ್‌.ಎನ್‌. ನಂಜೇಗೌಡ 2 ಬಾರಿ, ಎ.ಮಂಜು 3 ಬಾರಿ, ಎ.ಟಿ.ರಾಮಸ್ವಾಮಿ 4 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಎಚ್‌.ಎನ್‌.ನಂಜೇಗೌಡ, ಕೆ.ಬಿ.ಮಲ್ಲಪ್ಪ, ಎ.ಮಂಜು ಸಚಿವರೂ ಆಗಿದ್ದರು. ಅತೀ ಹೆಚ್ಚು ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಗೆದ್ದಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿ ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿಕೊಂಡಿದ್ದು, ಅರಕಲಗೂಡು ತಾಲೂಕಿನ ಕಸಬಾ, ರಾಮನಾಥಪುರ, ಕೊಣನೂರು, ಮಲ್ಲಿಪಟ್ಟಣ ಸೇರಿ ಒಟ್ಟು 5 ಹೋಬಳಿ ವ್ಯಾಪ್ತಿಯನ್ನು ಕ್ಷೇತ್ರ ಒಳಗೊಂಡಿದೆ. ಸದ್ಯ ಎ.ಟಿ. ರಾ ಮ ಸ್ವಾಮಿ ಅವರು ಕ್ಷೇತ್ರ ವನ್ನು ಪ್ರತಿ ನಿ ಧಿ ಸು ತ್ತಿ ದ್ದಾರೆ.

ಬೇಲೂರು
1957ರಲ್ಲಿ ಅಸ್ತಿತ್ವಕ್ಕೆ ಬಂದಾಗ ಬೇಲೂರು ಕ್ಷೇತ್ರ ದ್ವಿಸದಸ್ಯ ಕ್ಷೇತ್ರವಾ ಗಿತ್ತು. ಸಾಮಾನ್ಯ ವರ್ಗದ ಬಿ.ಎನ್‌.ಬೋರಣ್ಣ ಗೌಡ ಮತ್ತು ಪರಿಶಿಷ್ಟ ಸಮುದಾ ಯದ ಎಚ್‌.ಕೆ.ಸಿದ್ಧಯ್ಯ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1962ರಲ್ಲಿ ಏಕಸದಸ್ಯ ಕ್ಷೇತ್ರವಾದ ಬೇಲೂರು ಪರಿಶಿಷ್ಟ ಜಾತಿಗೆ ಮೀಸಲಾದ ಅನಂತರ ಬಿ.ಎಚ್‌.ಲಕ್ಷ್ಮಣಯ್ಯ 3 ಪ್ರತಿನಿಧಿಸಿದ್ದರು. ಅನಂತರ ಎಸ್‌.ಎಚ್‌.ಪುಟ್ಟರಂಗನಾಥ್‌ 3 ಬಾರಿ, ಜನತಾ ಪರಿವಾರದ ಎಚ್‌.ಕೆ.ಕುಮಾರಸ್ವಾಮಿ 3 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೆ, 1983ರಲ್ಲಿ ಡಿ.ಮಲ್ಲೇಶ್‌ ಜನತಾ ಪಕ್ಷದಿಂದ ಒಂದು ಬಾರಿ ಗೆದ್ದಿದ್ದರು. ಈ ಕ್ಷೇತ್ರದಲ್ಲಿ ಜನತಾ ಪರಿವಾರದ ಅಭ್ಯರ್ಥಿಗಳು 7 ಬಾರಿ ಗೆದ್ದಿರುವುದು ದಾಖಲೆ. ಕಾಂಗ್ರೆಸ್‌ನ ಅಭ್ಯರ್ಥಿಗಳು 6 ಬಾರಿ ಗೆದ್ದಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ ಸಾಮಾನ್ಯ ಕ್ಷೇತ್ರವಾದ ಬೇಲೂರು ಕ್ಷೇತ್ರಕ್ಕೆ ಅರಸೀಕೆರೆ ತಾಲೂಕಿನ ಜಾವಗಲ್‌ ಹೋಬಳಿ ಸೇರ್ಪಡೆ ಯಾಯಿತು. ಅನಂತರ ನಡೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ವೈ.ಎನ್‌.ರುದ್ರೇಶಗೌಡ ಸತತ ಎರಡು ಬಾರಿ ಗೆದ್ದಿದ್ದರೆ, ಜೆಡಿಎಸ್‌ನ ಕೆ.ಎಸ್‌.ಲಿಂಗೇಶ್‌ ಒಂದು ಬಾರಿ ಚುನಾಯಿತರಾಗಿದ್ದಾರೆ.

ಸಕಲೇಶಪುರ
1962ರಲ್ಲಿ ಸಕಲೇಶಪುರ ಮತ್ತು ಆಲೂರು ತಾಲೂಕುಗಳನ್ನೊಳಗೊಂಡು ಅಸ್ತಿತ್ವಕ್ಕೆ ಬಂದ ಸಕಲೇಶಪುರ ಕ್ಷೇತ್ರ ಈವರೆಗೆ 13 ಚುನಾವಣೆಗಳನ್ನು ಎದುರಿಸಿದೆ. ಪ್ರಥಮ ಬಾರಿಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ವಾಸಪ್ಪ ಶೆಟ್ಟಿ ಕ್ಷೇತ್ರವನ್ನು ಪ್ರತಿನಿಧಿಸಿದವರು. ಅನಂತರ ಜನತಾ ಪರಿವಾರದವರೇ ಹೆಚ್ಚು ಬಾರಿ ಗೆದ್ದಿರುವ ಕ್ಷೇತ್ರವಿದು. ಕಾಂಗ್ರೆಸ್‌ನಿಂದ ಜೆ.ಡಿ.ಸೋಮಪ್ಪ ಮತ್ತು ಬಿಜೆಪಿಯ ಬಿ.ಬಿ.ಶಿವಪ್ಪ ಸತತ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಜೆಡಿಎಸ್‌ನ ಎಚ್‌.ಕೆ.ಕುಮಾರಸ್ವಾಮಿ ಅವರು ಸತತ ಮೂರು ಬಾರಿ ಗೆದ್ದಿರುವುವುದು ಈ ಕ್ಷೇತ್ರದ ದಾಖಲೆ. 1985ರಲ್ಲಿ ಜನತಾ ಪಕ್ಷದಿಂದ ಗೆದ್ದಿದ್ದ ಬಿ.ಡಿ.ಬಸವರಾಜು ಅವರು ಸಚಿವರಾಗಿ ಕ್ಷೇತ್ರ ಪ್ರವೇಶಿಸುವ ಮುನ್ನವೇ ಮಾಜಿಯಾಗಿದ್ದರು. ಕಾಂಗ್ರೆಸ್‌ನಿಂದ ಬಿ.ಆರ್‌.ಗುರುದೇವ್‌, ಜೆಡಿಎಸ್‌ನಿಂದ ಎಚ್‌.ಎಂ. ವಿಶ್ವನಾಥ್‌ ಒಂದೊಂದು ಬಾರಿ ಶಾಸಕರಾಗಿದ್ದರು. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಸಕಲೇಶಪುರ ಮತ್ತು ಆಲೂರು ತಾಲೂಕುಗಳ ಜತೆಗೆ ಹಾಸನ ತಾಲೂಕಿನ ಕಟ್ಟಾಯ ಹೋಬಳಿಯೂ ಸಕಲೇಶಪುರ ಕ್ಷೇತ್ರ ವ್ಯಾಪ್ತಿಗೆ ಸೇರಿದೆ. 2008ರಿಂದ ಸತತ ಮೂರು ಬಾರಿ ಎಚ್‌.ಕೆ. ಕುಮಾರಸ್ವಾಮಿ ಈ ಕ್ಷೇತ್ರದ ಶಾಸಕರು. ಒಮ್ಮೆ ಸಚಿವರೂ ಆಗಿದ್ದಾರೆ.

ಹಾಸನ
ಕಾಂಗ್ರೆಸೇತರ ಅಭ್ಯರ್ಥಿಗಳೇ ಹೆಚ್ಚು ಬಾರಿ ಗೆದ್ದಿರುವ ಹಾಸನ ವಿಧಾನಸಭಾ ಕ್ಷೇತ್ರ ಇದುವರೆಗೂ 14 ಚುನಾವಣೆಗಳನ್ನು ಎದುರಿಸಿದೆ. ಜಿಲ್ಲೆಯಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ಗೆದ್ದಿರುವ ಏಕೈಕ ಕ್ಷೇತ್ರ ವಿ ದು. 1962ರಲ್ಲಿ ಯಶೋಧರಮ್ಮ ದಾಸಪ್ಪ ಹಾಸನದಿಂದ ಗೆದ್ದಿದ್ದು, ಅವರು ಸಚಿವರೂ ಆಗಿದ್ದರು. ಒಬ್ಬರು ಪಕ್ಷೇತರ, ಒಬ್ಬರು ಸ್ವತಂತ್ರ ಪಾರ್ಟಿ, ಮೂರು ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಗೆದ್ದಿದ್ದರೆ, 6 ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು, ಎರಡು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಕೆ.ಎಚ್‌.ಹನುಮೇಗೌಡ ಅವರು 3 ಬಾರಿ ಕಾಂಗ್ರೆಸ್‌, ಒಂದು ಬಾರಿ ಬಿಜೆಪಿಯಿಂದ, ಎಚ್‌.ಎಸ್‌.ಪ್ರಕಾಶ್‌ ಅವರು 4 ಬಾರಿ ಜನತಾ ದಳದಿಂದ ಗೆದ್ದಿರುವುದು ದಾಖಲೆ. ಬಿ.ವಿ.ಕರೀಗೌಡ ಅವರು 2 ಬಾರಿ ಜನತಾ ಪಾರ್ಟಿಯಿಂದ ಗೆದ್ದಿದ್ದಾರೆ. ಸದ್ಯ ಇಲ್ಲಿ ಬಿಜೆ ಪಿಯ ಪ್ರೀತಂ ಗೌಡ ಶಾಸ ಕ ರಾ ಗಿ ದ್ದಾರೆ.

ಅರಸೀಕೆರೆ
1952ರಿಂದ ಒಟ್ಟು 15 ಚುನಾವಣೆಗಳನ್ನು ಎದುರಿಸಿರುವ ಅರಸೀಕೆರೆ ಕ್ಷೇತ್ರದಲ್ಲಿ ಹೆಚ್ಚು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆಗೆ ಮೊದಲು ಈ ಕ್ಷೇತ್ರ ದಲ್ಲಿ ಸತತವಾಗಿ ಗೆದ್ದ ಅಭ್ಯರ್ಥಿಗಳು ಗೆದ್ದಿರುವ ದಾಖಲೆ ಇಲ್ಲ. ಆದರೆ ಕ್ಷೇತ್ರ ಪುನರ್‌ ವಿಂಗಡ ಣೆಯ ಬಳಿಕ ಜೆಡಿಎಸ್‌ನ ಕೆ.ಎಂ.ಶಿವಲಿಂಗೇ ಗೌಡರು ಸತತ ಮೂರು ಬಾರಿ ಗೆದ್ದಿ ರು ವುದು ಈ ಕ್ಷೇತ್ರದ ಚುನಾವಣೆಯ ದಾಖಲೆ. ಆನಂತರ ಡಿ.ಬಿ.ಗಂಗಾಧರಪ್ಪ ಅವರು ಒಂದು ಬಾರಿ ಕಾಂಗ್ರೆಸ್‌ನಿಂದ, ಒಂದು ಬಾರಿ ಜನತಾ ಪಕ್ಷದಿಂದ ಗೆದ್ದಿರುವುದನ್ನು ಬಿಟ್ಟರೆ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದವರಿಲ್ಲ. 8 ಬಾರಿ ಕಾಂಗ್ರೆಸ್‌, ಒಂದು ಬಾರಿ ಪಿಎಸ್‌ಪಿ, ಒಂದು ಬಾರಿ ಬಿಜೆಪಿ, ಒಂದು ಬಾರಿ ಜನತಾ ಪಾರ್ಟಿ, ಮೂರು ಬಾರಿ ಜೆಡಿಎಸ್‌ ಗೆದ್ದಿರುವ ಈ ಅರಸೀಕೆರೆ ಕ್ಷೇತ್ರವು 2008ರ ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ ಅರಸೀಕೆರೆ ತಾಲೂಕು ವ್ಯಾಪ್ತಿಯನ್ನಷ್ಟೇ ಹೊಂದಿದೆ.

ಶ್ರವಣಬೆಳಗೊಳ
ಭಾರತ ರಾಷ್ಟ್ರೀಯ ಭದ್ರ ನೆಲೆಯಾಗಿದ್ದ ಶ್ರವಣಬೆಳಗೊಳ ಕ್ಷೇತ್ರ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಎಚ್‌.ಸಿ.ಶ್ರೀಕಂಠಯ್ಯ ಅವರು ಕಾರಣ. 1952ರಿಂದ 15 ವಿಧಾ ನಸಭಾ ಚುನಾವಣೆಗಳನ್ನು ಎದುರಿಸಿರುವ ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರ ನೆಲೆಯೂ ಆಗಿತ್ತು. ಆ ಪಕ್ಷದ ನೇತಾರ ಎಚ್‌.ಸಿ.ಶ್ರೀಕಂಠಯ್ಯ ಅವರು 4 ಬಾರಿ ಪ್ರತಿನಿಧಿಸಿದ್ದು ದಾಖಲೆ. ಅನಂತರ ಜನತಾದಳದಿಂದ ಸಿ.ಎಸ್‌.ಪುಟ್ಟೇಗೌಡ 3 ಬಾರಿ ಗೆದ್ದು ದಾಖಲೆ ಮಾಡಿ ದ್ದರು. ದೇವರಾಜ ಅರಸು ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಶ್ರೀಕಂಠಯ್ಯ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಪ್ರಜಾ ಸೋಶಲಿಸ್ಟ್‌ ಪಾರ್ಟಿಯ ಎಸ್‌.ಶಿವಪ್ಪ 2 ಬಾರಿ, ಜೆಡಿಎಸ್‌ನ ಸಿ.ಎಸ್‌. ಬಾಲಕೃಷ್ಣ ಸತತ ಎರಡು ಬಾರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.

– ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.