ಕಾಶ್ಮೀರಕ್ಕಾಗಿ ಕರುನಾಡಲ್ಲೂ ನಡೆದಿತ್ತು ಹೋರಾಟ!

29 ವರ್ಷಗಳ ಹಿಂದೆ ಎಬಿವಿಪಿಯಿಂದ ನಡೆದಿತ್ತು ಹೋರಾಟ ಹೊಸಬಾಳೆ, ಲಿಂಬಾವಳಿ ನೇತೃತ್ವ

Team Udayavani, Aug 6, 2019, 6:00 AM IST

Kashmir-through

ಬೆಂಗಳೂರು: ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲು ಆಗ್ರ ಹಿಸಿ ಸರಿಸುಮಾರು 29 ವಷಗಳ ಹಿಂದೆಯೇ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿ ವಿಪಿ) ದೊಡ್ಡ ಮಟ್ಟದ ಹೋರಾಟ ರೂಪಿಸಿತ್ತು. ಕರ್ನಾಟಕದಿಂದಲೂ ಸಾವಿರಾರು ವಿದ್ಯಾರ್ಥಿ ಗಳು ಈ ಹೋರಾಟದಲ್ಲಿ ಭಾಗವಹಿಸಿದ್ದರು!

ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಈಗ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ತೆಗೆದುಹಾಕಿದೆ. ಇದು ಕೇಂದ್ರದ ತತ್‌ಕ್ಷಣದ ನಿರ್ಧಾರ ಎಂದು ಅನ್ನಿಸಿದರೂ ಇದರ ಹಿಂದೆ ದೊಡ್ಡ ಹೋರಾಟದ ಯಶೋ ಗಾಥೆಯಿದೆ. ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ರೂಪಿಸಿದ್ದ ಹೋರಾಟದ ಅನಂತರ ಬಿಜೆಪಿ ಕೂಡ ದೊಡ್ಡ ಮಟ್ಟದ ಅಭಿಯಾನ ನಡೆಸಿತ್ತು. ಇದೆಲ್ಲದರ ಫ‌ಲವಾಗಿ ಕೇಂದ್ರ ಸರಕಾರ ಈಗ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದುಕೊಂಡಿದೆ.

ಎಬಿವಿಪಿಯಿಂದ ಕಾಶ್ಮೀರ ಚಲೋ
ಇಂದು ಕಾಶ್ಮೀರ ಉಳಿದರೆ, ಭವಿಷ್ಯದಲ್ಲಿ ಭಾರತ ಉಳಿಯಲಿದೆ ಎಂಬ ಧ್ಯೇಯವಾಕ್ಯ ದೊಂದಿಗೆ 1990ರಲ್ಲಿ ಅಖೀಲಭಾರತೀಯ ವಿದ್ಯಾರ್ಥಿ ಪರಿಷತ್‌ ಕಾಶ್ಮೀರ್‌ ಚಲೋ ಅಭಿ ಯಾನ ಹಮ್ಮಿಕೊಂಡಿತ್ತು. 1990ರ ಸೆ.11ರಂದು ಕಾಶ್ಮೀರದ ಶ್ರೀನಗರದಲ್ಲಿ ತ್ರಿವರ್ಣಧ್ವಜ ಹಾರಿ ಸುವುದು ಮತ್ತು ಕಾಶ್ಮೀರದ ಸಮಸ್ಯೆಯನ್ನು ಜನ ಸಾಮಾನ್ಯರಿಗೆ ತಿಳಿಸುವುದು ಅಭಿಯಾನದ ಮೂಲ ಉದ್ದೇಶವಾಗಿತ್ತು.

ಅದರಂತೆ 1990ರ ಆರಂಭದಲ್ಲಿ ವಿದ್ಯಾರ್ಥಿ ಪರಿಷತ್‌ ಅಭಿಯಾನದ ರೂಪುರೇಷೆಗಳನ್ನು ಸಿದ್ಧಪಡಿಸಿತ್ತು. ಆಗಸ್ಟ್‌ ಅಂತ್ಯದವರೆಗೂ ವಿವಿಧ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಸಭೆ, ಸೆಮಿನಾರ್‌, ಚರ್ಚಾಗೋಷ್ಠಿ ಇತ್ಯಾದಿ ಎಲ್ಲವನ್ನೂ ಏರ್ಪಡಿಸಿತ್ತು. ಸೆ.11ರಂದು ಕಾಶ್ಮೀರ್‌ ಚಲೋ ದಿನಾಂಕ ನಿಗದಿ ಮಾಡಿದ್ದರಿಂದ ಬೆಂಗಳೂರು, ಮಂಗಳೂರು, ಬೀದರ್‌, ಕಲಬುರಗಿ, ಹುಬ್ಬಳ್ಳಿ ಸಹಿತವಾಗಿ ರಾಜ್ಯದ ಬೇರೆ ಬೇರೆ ಕಡೆಗಳಿಂದ ತಂಡತಂಡವಾಗಿ ಜಮ್ಮುವಿಗೆ ಹೋಗುವ ಸಿದ್ಧತೆ ಮಾಡಿಕೊಂಡೆವು. ಅದರಂತೆ ರೈಲಿನಲ್ಲಿ ಸುಮಾರು 1,200 ವಿದ್ಯಾರ್ಥಿಗಳ ಸಮೂಹ ಜಮ್ಮುವಿಗೆ ಹೊರಟಿತ್ತು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಅಂದಿನ ರಾಜ್ಯ ಸಂಘಟನ ಕಾರ್ಯದರ್ಶಿ ಹಾಗೂ ಈಗ ವಿದ್ಯಾಭಾರತೀ ಜವಾಬ್ದಾರಿ ಹೊತ್ತಿರುವ ಜಿ.ಆರ್‌. ಜಗದೀಶ್‌ ಅವರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಜಮ್ಮುವಿನಿಂದ ಶ್ರೀನಗರಕ್ಕೆ ಬಸ್‌ ವ್ಯವಸ್ಥೆಯನ್ನು ಸಂಘಟನೆ ಯಿಂದಲೇ ಮಾಡಲಾಗಿತ್ತು. ಸೆ.11ರಂದು ಶ್ರೀನಗರದಲ್ಲಿ ತ್ರಿವರ್ಣಧ್ವಜ ಹಾರಿಸುವ ಯೋಜನೆ ಇದ್ದುದರಿಂದ ಜಮ್ಮುವಿಗೆ ಹೋಗಿ ಇಳಿದ ನಮ್ಮ ತಂಡ ಬಸ್‌ಗಳ ಮೂಲಕ ಶ್ರೀನಗರ ಕಡೆಗೆ ಪ್ರಯಾಣ ಬೆಳೆಸಿತ್ತು. ಆದರೆ ಅಂದಿನ ಜಮ್ಮು-ಕಾಶ್ಮೀರ ಸರಕಾರ ನಮ್ಮನ್ನು ಉಧಂಪುರದಲ್ಲೇ ತಡೆಯಿತು. ಅಷ್ಟೊತ್ತಿಗಾಗಲೆ ದೇಶದ ವಿವಿಧ ಭಾಗದ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಜಮ್ಮುವಿನಲ್ಲಿ ಸೇರಿದ್ದರು. ಇದರಲ್ಲಿ ಶೇ.20ರಿಂದ 30ರಷ್ಟು ವಿದ್ಯಾರ್ಥಿನಿಯರು ಇದ್ದರು.

ಉಧಂಪುರದಿಂದ ಪಾದಯಾತ್ರೆ ಮೂಲಕ ಶ್ರೀನಗರಕ್ಕೆ ಹೋಗುವ ಪ್ರಯತ್ನ ಮಾಡಿದ್ದೆವು. ಅದನ್ನೂ ಪೊಲೀಸರು ತಡೆದು ಬಂಧಿಸಿದರು. ಆದರೂ ಯುವ ಸಮೂಹದಲ್ಲಿನ ಉತ್ಸಾಹವನ್ನು ಅಲ್ಲಿನ ಸರಕಾರಕ್ಕೆ ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಹೋರಾಟದ ಆ ದಿನಗಳು ನೆನಪಿಸಿಸಿಕೊಂಡರೆ, ಇಂದು ಸರಕಾರ ತೆಗೆದುಕೊಂಡು ನಿರ್ಧಾರದಿಂದ ಸಾರ್ಥಕ ಭಾವ ಮೂಡುತ್ತದೆ ಎಂದು ವಿವರಿಸಿದರು.

ತಿಂಗಳ ಅಭಿಯಾನ
ಕರ್ನಾಟಕದಿಂದ ದತ್ತಾತ್ರೇಯ ಹೊಸಬಾಳೆ, (ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ), ಅರವಿಂದ ಲಿಂಬಾವಳಿ (ಈಗ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ) ಸಹಿತವಾಗಿ ಅನೇಕ ನಾಯಕರು ಹೋರಾಟದ ಮುಂದಾಳತ್ವವನ್ನು ವಹಿಸಿದ್ದರು. ಕರ್ನಾಟಕದಲ್ಲಿ 1 ತಿಂಗಳ ಅಭಿಯಾನ ನಡೆಸಿದ್ದೆವು. ಇದಕ್ಕಾಗಿ ಲಕ್ಷಕ್ಕೂ ಹೆಚ್ಚು ಕರಪತ್ರ ಹಂಚಿ ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನದಿಂದ ಕೆಲವರಿಗೆ ಮಾತ್ರ ಆಗುತ್ತಿದ್ದ ಅನುಕೂಲ, ದೇಶಕ್ಕೆ ಬಂದಿರುವ ಅಪಾಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದೆವು ಎಂದಿದ್ದಾರೆ.

- ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.