ತಿಮಿಂಗಿಲ ವಾಂತಿ ಪ್ರಕರಣ : ಮಾಲು ಖರೀದಿಸಿದ್ದು ಪುತ್ತೂರಿನ ವ್ಯಕ್ತಿಯಿಂದ
Team Udayavani, Sep 4, 2022, 8:54 AM IST
ಕಾಸರಗೋಡು: ಆಗಸ್ಟ್ 28ರಂದು ಸಂಜೆ ಹೊಸದುರ್ಗ ನಗರದ ಟೂರಿಸ್ಟ್ ಹೋಂ ಒಂದರಿಂದ ಪೊಲೀಸರು ವಶಪಡಿಸಿಕೊಂಡ 10 ಕೋಟಿ ರೂ. ಮೌಲ್ಯದ 10 ಕಿಲೋ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್) ಕರ್ನಾಟಕದ ಪುತ್ತೂರಿನ ವ್ಯಕ್ತಿಯೊಬ್ಬನಿಂದ ಲಭಿಸಿತ್ತೆಂದು ಅರಣ್ಯ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದೆ.
ಪೊಲೀಸರು ವಶಪಡಿಸಿಕೊಂಡ ತಿಮಿಂಗಿಲ ವಾಂತಿ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ಈ ಪ್ರಕರಣದ ಆರೋಪಿಗಳಲ್ಲೋರ್ವನಾದ ನಿಶಾಂತ್ ಪುತ್ತೂರಿನ ವ್ಯಕ್ತಿಯೋರ್ವನಿಂದ ಪಡೆದುಕೊಂಡಿದ್ದನು. ಇದನ್ನು ಸಿದ್ದಿಕ್ ಜತೆ ಸೇರಿ ಮಾರಾಟಕ್ಕೆ ಎರಡು ತಿಂಗಳಿಂದ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಕೆಲವರು ಅದರ ಸ್ಯಾಂಪಲ್ ಪಡೆದುಕೊಂಡು ಹೋದರೂ ಬಳಿಕ ಖರೀದಿಸಿರಲಿಲ್ಲ. ಕೊನೆಗೆ ಪಿ. ದಿವಾಕರನ್ ಮಧ್ಯಸ್ಥಿಕೆಯಲ್ಲಿ ಆ. 28ರಂದು ಮಾರಾಟಕ್ಕೆ ಯತ್ನಿಸಿದಾಗ ರಹಸ್ಯ ಮಾಹಿತಿ ಲಭಿಸಿದ ಪೊಲೀಸರು ಈ ಮೂವರನ್ನು ಬಂಧಿಸಿ ತಿಮಿಂಗಲ ವಾಂತಿಯನ್ನು ವಶಪಡಿಸಿಕೊಂಡಿದ್ದರು.
ಆರೋಪಿಗಳಿಗೆ ತಿಮಿಂಗಿಲ ವಾಂತಿ ನೀಡಿದ ಪುತ್ತೂರಿನ ವ್ಯಕ್ತಿಯನ್ನು ಪತ್ತೆಹಚ್ಚುವ ಕಾರ್ಯವನ್ನು ಅರಣ್ಯ ಅಧಿಕಾರಿಗಳು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.