Kasaragodu: ಎಂಡಿಎಂಎ ಬೆಂಗಳೂರಿನಿಂದ ಪೂರೈಕೆ: ಎಸ್‌ಪಿ ಶಿಲ್ಪಾ
ಉಪ್ಪಳದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಪಾರ ಅಮಲು ಪದಾರ್ಥ
Team Udayavani, Sep 22, 2024, 6:55 AM IST
ಕಾಸರಗೋಡು: ಉಪ್ಪಳಕ್ಕೆ ಸಮೀಪದ ಮುಳಿಂಜ ಗ್ರಾಮದ ಪತ್ವಾಡಿಯ ಮನೆಯೊಂದರಿಂದ ವಶಪಡಿಸಿಕೊಂಡ ಭಾರೀ ಪ್ರಮಾಣದ ಅಮಲು ಪದಾರ್ಥವನ್ನು ಬೆಂಗಳೂರಿನಿಂದ ತರಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ ಎಂದು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.
ಅಮಲು ಪದಾರ್ಥ ವಶಪಡಿಸಿಕೊಂಡಿರುವುದು ರಾಜ್ಯದಲ್ಲೇ ನಡೆದ ಅತೀ ದೊಡ್ಡ ಮಾದಕ ದ್ರವ್ಯ ಬೇಟೆಯಾಗಿದೆ ಎಂದಿದ್ದಾರೆ. ಬಂಧಿತ ಆರೋಪಿ ಪತ್ವಾಡಿಯ ಅಸ್ಕರ್ ಅಲಿ (26)ಯ ಬ್ಯಾಂಕ್ ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದಿದ್ದಾರೆ. ಎರಡು ಅಂತಸ್ತಿನ ಮನೆಯ ಕಪಾಟುಗಳಲ್ಲಿ ಹಾಗೂ ಇತರೆಡೆ ಬಚ್ಚಿಡಲಾಗಿದ್ದ 3.409 ಕೆ.ಜಿ. ಎಂಡಿಎಂಎ, 640 ಗ್ರಾಂ ಗ್ರೀನ್ ಗಾಂಜಾ, 96.96 ಗ್ರಾಂ ಕೊಕೇನ್, 30 ಕ್ಯಾಪ್ಸೂಲ್‌ಗಳನ್ನು ವಶಪಡಿಸಲಾಗಿದೆ.
ಅಮಲು ಪದಾರ್ಥಗಳನ್ನು ಬೆಂಗಳೂರಿನಿಂದ ತರಲಾಗಿದೆ ಎಂದು ಬಂಧಿತ ಆರೋಪಿ ಅಸ್ಕರ್ ಅಲಿ ತಿಳಿಸಿದ್ದಾನೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಇದ್ದು, ಅವರ ಮಾಹಿತಿ ಲಭಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಆರೋಪಿಗಳ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲವೆಂದು ಎಸ್. ಪಿ.ಯವರು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಜೋಡುಕಲ್ಲು ಪ್ರದೇಶಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ 200 ಕಿಲೋ ಗಾಂಜಾವನ್ನು ವಶಪಡಿಸಿಕೊಂಡಿರುವುದು ಕಾಸರ ಗೋಡು ಜಿಲ್ಲೆಯಲ್ಲಿ ಅತೀ ದೊಡ್ಡ ಅಮಲು ಪದಾರ್ಥ ಬೇಟೆಯಾಗಿತ್ತು. ಆ ಬಳಿಕ ಇದು ಅತೀ ದೊಡ್ಡ ಬೇಟೆಯಾಗಿದೆ. ಐದು ಗ್ರಾಂ ನಿಂದ 50 ಗ್ರಾಂ ತನಕ ಆನ್‌ಲೈನ್ ಮೂಲಕ ಕಳುಹಿಸುತ್ತಿದ್ದ. ಏಜೆಂಟರು ಮುಖಕ್ಕೆ ಬಟ್ಟೆ ಕಟ್ಟಿ ಅಗತ್ಯದಾರರಿಗೆ ಅಮಲು ಪದಾರ್ಥ ತಲುಪಿಸುತ್ತಿದ್ದರು.
ಅಮಲು ಪದಾರ್ಥ ಖರೀದಿಗೆ ಹಣ ಎಲ್ಲಿಂದ ?
ಪತ್ವಾಡಿಯ ಅಸ್ಕರ್ ಅಲಿಗೆ ಅಮಲು ಪದಾರ್ಥ ಖರೀದಿಸಲು ಕೋಟ್ಯಂತರ ರೂ. ಎಲ್ಲಿಂದ ಬಂದಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಕುಳಗಳೇ ಇದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಅಸ್ಕರ್ ಅಲಿಯಿಂದ ಆನ್‌ಲೈನ್ ಮೂಲಕ ಅಮಲು ಪದಾರ್ಥ ಖರೀದಿಸಿದವರ ಬಗ್ಗೆಯೂ ಪೊಲೀಸ್ ತನಿಖೆ ನಡೆಯುತ್ತಿದೆ. ಇಷ್ಟು ಮೊತ್ತವನ್ನು ಯಾರು ನೀಡಿದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ಅಸ್ಕರ್ ಅಲಿ ಉಪ್ಪಳದ ಜವಳಿ ಅಂಗಡಿಯೊಂದರಲ್ಲಿ ನೌಕರನಾಗಿದ್ದನೆಂದು ಪೊಲೀ ಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.