Kasaragodu: ಹೊಸ ದಾಖಲೆ ಸೃಷ್ಟಿಸಿದ ಉದಯವಾಣಿ “ಚಿಣ್ಣರ ಬಣ್ಣ-2024′
ಭಾಗಿಯಾದ ಎಲ್ಲ ಮಕ್ಕಳಿಗೆ ಉಡುಗೊರೆ, ಪ್ರಮಾಣ ಪತ್ರ
Team Udayavani, Oct 27, 2024, 2:48 AM IST
ಕಾಸರಗೋಡು: ಉದಯವಾಣಿ ವತಿಯಿಂದ ಆರ್ಟಿಸ್ಟ್ ಫೋರಂ ಸಹಯೋಗದೊಂದಿಗೆ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕುಂಬಳೆಯ ಸೈಂಟ್ ಮೋನಿಕಾ ಇಂಗ್ಲಿಷ್ ಮೀಡಿಯಂ ಸ್ಕೂಲ್ (ಸಿಬಿಎಸ್‌ಇ) ನಲ್ಲಿ ಆಯೋಜಿಸಿದ ಪ್ರತಿಷ್ಠಿತ ಮಕ್ಕಳ ಚಿತ್ರಕಲಾ ಸ್ಪರ್ಧೆ “ಚಿಣ್ಣರ ಬಣ್ಣ-2024′ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ಹೊಸ ಇತಿಹಾಸ ನಿರ್ಮಿಸಿತು.
ಗಡಿನಾಡು ಕಾಸರಗೋಡಿನ ಮಕ್ಕಳಿಗಾಗಿ ಪ್ರಥಮ ಬಾರಿ ಆಯೋಜಿಸಿದ ಚಿಣ್ಣರ ಬಣ್ಣ ಸ್ಪರ್ಧೆಯಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿದರು. ಅಪರಾಹ್ನ 2 ಗಂಟೆಯಿಂದಲೇ ಮಕ್ಕಳು ಹೆತ್ತವರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಮೂರು ಗಂಟೆ ವೇಳೆಗೆ ಸಭಾಂಗಣ ಭರ್ತಿಯಾಗಿತ್ತು. ಕಾಸರಗೋಡಿನಲ್ಲಿ ಈ ಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಪ್ರಥಮವಾದುದರಿಂದ ಸಹಜವಾಗಿ ಮಕ್ಕಳಲ್ಲಿ, ಹೆತ್ತವರಲ್ಲಿ ಕುತೂಹಲವಿತ್ತು. ಪುಟಾಣಿ ಮಕ್ಕಳು ನೆಲದಲ್ಲಿ ಕುಳಿತು ಚಿತ್ರ ರಚಿಸುವುದು ಮನಸ್ಸಿಗೆ ಮುದ ನೀಡುತ್ತಿತ್ತು. ಭಾಗವಹಿಸಿದ ಎಲ್ಲ ಮಕ್ಕಳಿಗೆ ಉಡುಗೊರೆ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಇದು ಮಕ್ಕಳ ಮೊಗದಲ್ಲಿ ಸಂತೋಷದ ನಗುಬೀರಿಸಿತು.
ಕಾಸರಗೋಡು-ಮಂಜೇಶ್ವರ ತಾಲೂಕುಗಳ ಮಕ್ಕಳಿಗೆ ಲಭಿಸಿದ ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಮಕ್ಕಳು ಸಭಾಂಗಣದಲ್ಲಿ ಚಿತ್ರ ರಚಿಸುತ್ತಿದ್ದರೆ, ಹೆತ್ತವರು ಸಭಾಂಗಣದ ಹೊರಗೆ ಮಕ್ಕಳು ಹೇಗೆ ಚಿತ್ರ ರಚಿಸಿರಬಹುದು ಎಂಬ ಬಗ್ಗೆಯೇ ಚಿಂತಿತರಾಗಿದ್ದರು. ಆದರೂ
ಅವರಲ್ಲಿ ಹುಮ್ಮಸು ಕಂಡು ಬಂತು. ಕಾಸರಗೋಡಿನ ಕನ್ನಡಿಗರಿಗೆ ಅವಕಾಶ ದೊಂದಿಗೆ ಹೊಸ ಹುಮ್ಮಸ್ಸು ಸಿಕ್ಕಿದೆ.
ಮುಂದೆಯೂ ಕಾರ್ಯಕ್ರಮಗಳನ್ನು ಆಯೋಜಿಸಿದ್ದಲ್ಲಿ ಇನ್ನಷ್ಟು ಮಕ್ಕಳು ಭಾಗವಹಿಸುವರು ಎಂಬ ಅಭಿಪ್ರಾಯ ಗಳು ಕೇಳಿ ಬಂತು. ಅನೇಕ ಮಕ್ಕಳು ಬಹುಮಾನಕ್ಕಿಂತ ಅವಕಾಶ ಸಿಕ್ಕಿದ್ದು ಹೆಚ್ಚು ಖುಷಿ ನೀಡಿದೆ ಎಂದಿದ್ದಾರೆ. ಸಬ್ ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿ 1,000ಕ್ಕೂ ಅಧಿಕ ಮಕ್ಕಳು ಭಾಗವಹಿಸಿದರು.
ಇಂದಿನ ಸ್ಪರ್ಧೆ
ಅ. 27ರಂದು ಕಡಬ ತಾಲೂಕು ಮಟ್ಟದ ಸ್ಪರ್ಧೆಯು ಸೈಂಟ್ ಜೋಕಿಂ ಸಮುದಾಯ ಭವನ ಕಡಬ, ಸುಳ್ಯ ತಾಲೂಕು ಮಟ್ಟದ ಸ್ಪರ್ಧೆಯು ಕೆವಿಜಿ ಕಾನೂನು ಮಹಾ ವಿದ್ಯಾಲಯ, ಚೆನ್ನಕೇಶವ ದೇವಸ್ಥಾನದ ಬಳಿ, ಸುಳ್ಯ, ಕುಂದಾಪುರ ತಾಲೂಕು ಮಟ್ಟದ ಸ್ಪರ್ಧೆಯು ಬಸ್ರೂರು ಮೂರ್ಕೈಯಲ್ಲಿರುವ ಎಚ್‌ಎಂಎಂ ಮತ್ತು ವಿಕೆಆರ್ ಶಾಲೆಗಳಲ್ಲಿ, ಬ್ರಹ್ಮಾವರ ತಾಲೂಕು ಮಟ್ಟದ ಸ್ಪರ್ಧೆಯು ಬಂಟರ ಭವನ, ಬಸ್‌ನಿಲ್ದಾಣದ ಎದುರು, ಬ್ರಹ್ಮಾವರ ಇಲ್ಲಿ ಬೆಳಗ್ಗೆ 9.30ರಿಂದ 11 .30ರ ತನಕ ನಡೆಯಲಿದೆ.
ಬೆಳ್ತಂಗಡಿ ತಾಲೂಕು ಮಟ್ಟದ ಸ್ಪರ್ಧೆಯು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ, ಸಂತೆಕಟ್ಟೆ ಬೆಳ್ತಂಗಡಿ, ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆಯು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘ ಪುತ್ತೂರು, ಬೈಂದೂರು ತಾಲೂಕು ಮಟ್ಟದ ಸ್ಪರ್ಧೆಯು ಜೆ.ಎನ್.ಆರ್. ಕಲಾ ಮಂದಿರ, ಬೈಂದೂರು, ಹೆಬ್ರಿ ತಾಲೂಕು ಮಟ್ಟದ ಸ್ಪರ್ಧೆಯು ಎಸ್.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿಯಲ್ಲಿ ಜರಗಲಿದೆ. ಈ ನಾಲ್ಕು ತಾಲೂಕುಗಳಲ್ಲಿ ಸ್ಪರ್ಧೆಯು ಅ. 27ರ ಅಪರಾಹ್ನ 3ರಿಂದ 5ರ ವರೆಗೆ ನಡೆಯಲಿದೆ.
2ನೇ ಹಂತದ ಸ್ಪರ್ಧೆಯು ನ. 2, 3ರಂದು ದ.ಕ. ಮತ್ತು ಉಡುಪಿ ಜಿಲ್ಲೆಯ 8 ತಾಲೂಕುಗಳಲ್ಲಿ ನಡೆಯಲಿದೆ. ನ. 10ರಂದು ತಾಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗಾಗಿ ಮೂರು ಜಿಲ್ಲಾಮಟ್ಟದ ಸ್ಪರ್ಧೆಯು ಮಂಗಳೂರಿನಲ್ಲಿ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.