ಎಸ್‌ಎಂಇ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಕಾಸಿಯಾ ಒತ್ತಾಯ
Team Udayavani, Apr 27, 2020, 5:15 AM IST
ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಶೇ. 40ರಷ್ಟು ಉದ್ಯಮಗಳು ಚಟುವಟಿಕೆ ಸ್ಥಗಿತಗೊಳಿಸಿ ಮುಚ್ಚುವ ಸ್ಥಿತಿಗೆ ತಲುಪಿವೆ. ಕೂಡಲೇ ಮುಖ್ಯಮಂತ್ರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು ಆಗ್ರಹಿಸಿದ್ದಾರೆ.
ಸೂಕ್ಷ್ಮ, ಸಣ್ಣ ಕೈಗಾರಿಕೆಗಳು ಆರ್ಥಿಕ, ಕಾರ್ಮಿಕರು, ವಿದ್ಯುತ್, ಜಿಎಸ್‌ಟಿ ಸಮಸ್ಯೆಗಳಿಂದ ನಲುಗುತ್ತಿದ್ದು, ಶೇ. 40ರಷ್ಟು ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಹಾಗಾಗಿ ಕೂಡಲೇ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅವಧಿ ವಿಸ್ತರಣೆಗೆ ಮನವಿ
ಎಫ್‌ಐಆರ್‌ಸಿ ಬಿಲ್ ಪಾವತಿ ಕಾಲಾವಕಾಶ ವಿಸ್ತರಿಸಬೇಕು. ಅವಧಿ ಸಾಲ, ಓವರ್ ಡ್ರಾಫ್ಟ್, ಒಸಿಸಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆ/ ಡಾಕ್ಯುಮೆಂಟೇಷನ್ ಶುಲ್ಕ ಮನ್ನಾ ಇಲ್ಲವೆ ಇಳಿಕೆ ಮಾಡಬೇಕು. ಪ್ಯಾಕಿಂಗ್ ಕ್ರೆಡಿಟ್ ಅವಧಿ ಯನ್ನು 30 ದಿನಗಳಿಂದ 180 ದಿನಗಳಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜ.1ರಿಂದ ಪೂರ್ವಾ ನ್ವಯವಾಗುವಂತೆ ಎಲ್. ಸಿ./ ಬಿ.ಜಿ. ಮೇಲಿನ ಕಮಿಷನ್ ಇಳಿಕೆ, ದುಡಿಮೆ ಬಂಡವಾಳ ಸಹಿತ ಮುಂದೂಡಲ್ಪಟ್ಟ ಅವಧಿ ಸಾಲ ಪಾವತಿ, ಇಎಂಐ, ಬಡ್ಡಿ ಸಂಬಂಧ ಘೋಷಿಸಲಾದ ವಿನಾಯಿತಿಯನ್ನು ಯಥಾಸ್ಥಿತಿಗೆ ಮರಳುವ ದಿನದಿಂದ ನಿಗದಿತ ಅವಧಿಗೆ ವಿಸ್ತರಿಸಬೇಕು ಎಂದು ಕೋರಿದ್ದಾರೆ.
ಸರಕುಗಳ ಆಮದಿನ ಮೇಲಿನ ಹೆಚ್ಚುವರಿ ದಂಡ ಮನ್ನಾ, ಎಸ್‌ಎಂಇ ವಲಯದ ಉದ್ಯಮಿಗಳಿಗೆ ಅವಧಿ ಸಾಲ/ ಒಡಿ/ ಸಿಸಿ ಮೇಲಿನ ಬಡ್ಡಿಯನ್ನು 3 ತಿಂಗಳ ಕಾಲ ಮನ್ನಾ, ಅನುತ್ಪಾದಕ ಸಾಲ ಪ್ರಮಾಣದ ಮಾನದಂಡಗಳ ಉದಾರೀಕರಣ ಮತ್ತು ಎಸ್‌ಎಂಇಗಳ ಹಣಕಾಸು ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಬ್ಯಾಂಕ್‌ಗಳು ಸಹಾಯಕೇಂದ್ರ ತೆರೆಯಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿದ್ಯುತ್ ಮಾಸಿಕ ಶುಲ್ಕ ಮನ್ನಾಕ್ಕೆ ಆಗ್ರಹ
ಎಲ್ಲ ವರ್ಗಗಳ ಉದ್ಯಮಿಗಳಿಗೆ 2020ರ ಮಾರ್ಚ್‌ನಿಂದ ಒಂದು ವರ್ಷ ಕಾಲ ನಿಗದಿತ ಮಾಸಿಕ ಶುಲ್ಕ ಮನ್ನಾ, ವಿದ್ಯುತ್ ಬಳಕೆ ಆಧಾರದ ಮೇಲೆ ಬಿಲ್ ಮೊತ್ತ ಸಂಗ್ರಹ, ಹೆಚ್ಚಳ ವಾಗಲಿರುವ 3 ಎಂಎಂಡಿ ಪಾವತಿಯನ್ನು 6 ತಿಂಗಳವರೆಗೆ ತಾತ್ಕಾಲಿಕವಾಗಿ ತಡೆ, ಎಲ್. ಟಿ.- 5 ಮತ್ತು ಎಚ್. ಟಿ. – ಎ ವರ್ಗದಡಿ ವಿದ್ಯುತ್ ಶುಲ್ಕ ಕಡಿಮೆ ಮಾಡಬೇಕು ಎಂದರು.
ಎಸ್‌ಎಂಇ ವಲಯದ ಉದ್ಯಮಗಳಿಗೆ ವಿದ್ಯುತ್ ತೆರಿಗೆ/ ವಿಳಂಬ ಪಾವತಿ ಮೇಲಿನ ಬಡ್ಡಿ ಮನ್ನಾ, ಸ್ಲಾ$Âಬ್ ಗಣನೆಗೆ ತೆಗೆದುಕೊಳ್ಳದೆ ಏಕರೂಪ ವಿದ್ಯುತ್ ದರ ನಿಗದಿ, ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಎಸ್‌ಟಿ ಸಲ್ಲಿಕೆ ದಿನಾಂಕ ವಿಸ್ತರಿಸಿ
ದಂಡ ಮತ್ತು ಬಡ್ಡಿ ವಿಧಿಸದೆ ಜಿಎಸ್‌ಟಿ- 9 ಎಬಿಸಿ ಸಲ್ಲಿಕೆ, ಇ-ಸರಕುಪಟ್ಟಿ ದಿನಾಂಕ ವಿಸ್ತರಣೆ, ಎಸ್‌ಎಂಇಗಳಿಗೆ ಮಾರ್ಚ್, ಎಪ್ರಿಲ್, ಮೇ ತಿಂಗಳಿಗೆ ಜಿಎಸ್‌ಟಿ ಪಾವತಿಯನ್ನು ದಂಡ ಮತ್ತು ಬಡ್ಡಿ ವಿಧಿಸದೆ 3 ತಿಂಗಳು ಮುಂದೂಡಬೇಕು. ಎಲ್ಲ ಬಗೆಯ ನೋಟಿಸ್ ಮತ್ತು ತೆರಿಗೆ ಸಂಬಂಧಿತ ಕ್ರಮ, ಪ್ರಕರಣಗಳನ್ನು 6 ತಿಂಗಳು ಮುಂದೂಡಬೇಕು ಎಂದು ಆರ್.ರಾಜು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.