ಕಟಪಾಡಿ-ಶಿರ್ವ ಅಪೂರ್ಣ ದ್ವಿಪಥ; ಸಂಚಾರಕ್ಕೆ ತೊಡಕು
Team Udayavani, Mar 11, 2022, 5:25 AM IST
ಶಿರ್ವ: ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ಮುಖ್ಯ ರಸ್ತೆಯು ಶಿರ್ವ ಗ್ರಾ.ಪಂ. ವ್ಯಾಪ್ತಿಯ ಪಂಜಿಮಾರು ಫಲ್ಕೆಯವರೆಗೆ ದ್ವಿಪಥಗೊಂಡಿದ್ದು, ಫಲ್ಕೆಯಿಂದ ಶಿರ್ವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದವರೆಗಿನ ಸುಮಾರು 2 ಕಿ.ಮೀ. ರಸ್ತೆಯು ದ್ವಿಪಥ ರಸ್ತೆಯಾಗಿ ವಿಸ್ತರಣೆಯಾಗದೆ ಸಂಚಾರಕ್ಕೆ ತೊಡಕಾಗಿದೆ. ದಿನವೊಂದಕ್ಕೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಕಾಪು ಶಾಸಕರ ಅನುದಾನದ ಸುಮಾರು 7 ಕೋ.ರೂ. ವೆಚ್ಚದ ಕಟಪಾಡಿ-ಶಿರ್ವ ದ್ವಿಪಥ ರಸ್ತೆಯು ಶಿರ್ವ ಗ್ರಾ.ಪಂ. ವ್ಯಾಪ್ತಿಯ ಪಂಜಿಮಾರು ಫಲ್ಕೆಯವರೆಗೆ 2018ರಲ್ಲಿ ದ್ವಿಪಥಗೊಂಡು ವಿಸ್ತರಣೆಯಾಗಿತ್ತು. 2018ರ ಫೆ. 25 ರಂದು ಅಂದಿನ ಶಾಸಕ ವಿನಯ ಕುಮಾರ್ ಸೊರಕೆ ದ್ವಿಪಥ ರಸ್ತೆಯನ್ನು ಉದ್ಘಾಟಿಸಿ ಶಿರ್ವದಿಂದ ಮಲ್ಪೆಯವರೆಗೆ ಪ್ರವಾಸೋದ್ಯಮ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚಿಸಿದ್ದು, ಪಕ್ಷ ಭೇದವಿಲ್ಲದೆ ಜನರ ಸೇವೆ ನಡೆಸುವುದಾಗಿ ತಿಳಿಸಿದ್ದರು. 10.5 ಕಿ.ಮೀ. ರಸ್ತೆಯಲ್ಲಿ 8.5 ಕಿ.ಮೀ. ರಸ್ತೆ ಮಾತ್ರ ವಿಸ್ತರಣೆಗೊಂಡಿದ್ದು ಉಳಿದ 2 ಕಿ.ಮೀ. ರಸ್ತೆಯು 4 ವರ್ಷ ಕಳೆದರೂ ಪೂಣಗೊಳ್ಳದೆ ನನೆಗುದಿಗೆ ಬಿದ್ದಿದೆ.
ಅಪಘಾತ ವಲಯ
ಪಂಜಿಮಾರು ಫಲ್ಕೆಯಿಂದ ಸಿದ್ಧಿ ವಿನಾಯಕ ದೇವಸ್ಥಾನದವರೆಗಿನ ಸುಮಾರು 2 ಕಿ.ಮೀ. ರಸ್ತೆಯು ಅಂಕುಡೊಂಕಾಗಿದ್ದು ಅಪಘಾತ ವಲಯವಾಗಿ ಪರಿಣಮಿಸಿದೆ. ಇಲ್ಲಿನ ಮಧ್ಯಭಾಗದ ಕೋಡು-ಪಂಜಿಮಾರು ತಿರುವಿನಲ್ಲಿ ಆಗಾಗ್ಗೆ ರಸ್ತೆ ಅಪಘಾತಗಳು ನಡೆಯುತ್ತಿದ್ದು ವಾಹನ ಸವಾರರ ಜೀವಕ್ಕೆ ಸಂಚಕಾರವಿದೆ. ಇದೇ ಪರಿಸರದಲ್ಲಿ ಮದುವೆ ದಿಬ್ಬಣದ ಬಸ್ಸೊಂದು ಅಪಘಾತ ಸಂಭವಿಸಿ ಹಲವರು ಪ್ರಾಣ ಕಳೆದುಕೊಂಡಿದ್ದರು.
ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಉಳಿದ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ವಿಸ್ತರಣೆಗೊಳಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವುಗೊಳಿಸಬೇಕೆಂಬುದು ಪರಿಸರದ ನಾಗರಿಕರ ಒತ್ತಾಸೆಯಾಗಿದೆ.
ಸರಕಾರಕ್ಕೆ ಪ್ರಸ್ತಾವನೆ
ಬಾಕಿಯುಳಿದ 2.ಕಿ.ಮೀ. ರಸ್ತೆಯನ್ನು ವಿಸ್ತರಣೆ ಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆ ಯಾದ ಕೂಡಲೆ ರಸ್ತೆಯನ್ನು ದ್ವಿಪಥಗೊಳಿಸಲಾಗುವುದು.
-ಜಗದೀಶ ಭಟ್, ಕಾರ್ಯನಿರ್ವಾಹಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಉಡುಪಿ
ಇಲಾಖೆಗೆ ಪತ್ರ
ಗ್ರಾ.ಪಂ. ವ್ಯಾಪ್ತಿಯ ಸುಮಾರು 2 ಕಿ.ಮೀ.ರಸ್ತೆ ವಿಸ್ತ ರ ಣೆಗೊಳ್ಳದೆ ವಾಹನ ಸವಾರರಿಗೆ ತೊಂದರೆಯಾಗಿದೆ. ರಸ್ತೆಯನ್ನು ದ್ವಿಪಥಗೊಳಿಸಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ.
-ಕೆ.ಆರ್.ಪಾಟ್ಕರ್ , ಶಿರ್ವ ಗ್ರಾ.ಪಂ. ಅಧ್ಯಕ್ಷ
– ಸತೀಶ್ಚಂದ್ರ ಶೆಟ್ಟಿ ಶಿರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.