Kaup: ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
ಕಳೆದ ರಾತ್ರಿ ಪೆರಂಪಳ್ಳಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ತನ್ನ ತಂಡದೊಂದಿಗೆ ಭಾಗಿಯಾಗಿದ್ದ
Team Udayavani, Dec 15, 2024, 8:49 PM IST
ಕಾಪು: ಉದ್ಯಾವರ ಕೇದಾರ್ ಬೊಳ್ಜೆ ನಿವಾಸಿ, ಯುವ ಕ್ರಿಕೆಟರ್ ಆದಿತ್ಯ (24) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಮುಂಜಾನೆ ನಡೆದಿದೆ.
ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟ ತನ್ನ ಸ್ನೇಹಿತ ಸುಕ್ಷಿತ್‌ನ ಹೆಸರಿನಲ್ಲಿ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡಿದ್ದ ಆದಿತ್ಯ ಶನಿವಾರ ರಾತ್ರಿ ಪೆರಂಪಳ್ಳಿಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ತನ್ನ ತಂಡದೊಂದಿಗೆ ಭಾಗವಹಿಸಿದ್ದ. ರವಿವಾರ ಮುಂಜಾನೆ 3 ಗಂಟೆಗೆ ಮನೆಗೆ ಬಂದ ಬಳಿಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.
ಬೆಳಗ್ಗೆ 7.30ಕ್ಕೆ ಅಜ್ಜಿ ಬಾಗಿಲು ಬಡಿದಾಗ, ಬಾಗಿಲು ತೆರೆಯದೇ ಇದ್ದು ಕಿಟಕಿಯಿಂದ ಇಣುಕಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತನ ತಂದೆ, ತಾಯಿ ತೀರಿ ಹೋಗಿದ್ದು, ಅಜ್ಜಿ ಮತ್ತು ಸಹೋದರನ ಆಶ್ರಯದಲ್ಲಿ ಬೆಳೆಯುತ್ತಿದ್ದ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆತನ ಸಹೋದರ ಸಚಿನ್ ಅವರು ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.