ಕೇರಳ ರಾಜಕೀಯ ಅಖಾಡ: ತಾವರೆ ಅರಳಿದ “ನೇಮಂ”ನಲ್ಲಿ ರಂಗೇರಿದ ಹಣಾಹಣಿ
ಈ ಕ್ಷೇತ್ರದಲ್ಲಿ ಬಿಜೆಪಿ-ಸಿಪಿಎಂ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು.
Team Udayavani, Mar 19, 2021, 5:30 PM IST
ಕಾಸರಗೋಡು, ಮಾ.19: ಕೇರಳದಲ್ಲಿ ಪ್ರಪ್ರಥಮವಾಗಿ ತಾವರೆ ಅರಳಿದ ನೇಮಂ ವಿಧಾನಸಭಾ ಕ್ಷೇತ್ರ ದೇಶದ ಗಮನ ಸೆಳೆದಿದೆ. ಘಟಾನುಘಟಿಗಳು ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರ ರಂಗೇರಿಸಿಕೊಂಡಿದೆ.
ತಿರುವನಂತಪುರ ಜಿಲ್ಲೆಯ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ 2016 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪ್ರಥಮ ಬಾರಿಗೆ ಗೆದ್ದುಕೊಂಡು ಇತಿಹಾಸ ರಚಿಸಿತ್ತು. ಹಿರಿಯ ಬಿಜೆಪಿ ನಾಯಕ ಒ.ರಾಜಗೋಪಾಲ್ ಗೆಲುವು ಸಾಧಿಸಿದ್ದರು. ಈ ಸೀಟನ್ನು ಉಳಿಸಿಕೊಳ್ಳಲು ಬಿಜೆಪಿ ಹೋರಾಡುತ್ತಿದ್ದರೆ, ಬಿಜೆಪಿಯಿಂದ ಕಸಿದುಕೊಳ್ಳಲು ಕಾಂಗ್ರೆಸ್, ಸಿಪಿಎಂ ತೀವ್ರ ಹಣಾಹಣಿ ನಡೆಸುತ್ತಿದೆ.
ಬಿಜೆಪಿಯಿಂದ ಹಿರಿಯ ನೇತಾರ, ಮಾಜಿ ಮಿಜೋರಾಂ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಲೀಡರ್ ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ದಿ|ಕೆ.ಕರುಣಾಕರನ್ ಅವರ ಪುತ್ರ, ಕಾಂಗ್ರೆಸ್ ಮಾಜಿ ರಾಜ್ಯ ಸಮಿತಿ ಅಧ್ಯಕ್ಷ, ವಡಗರ ಸಂಸದ ಕೆ.ಮುರಳೀಧರನ್ ಕಣಕ್ಕಿಳಿದಿದ್ದಾರೆ. ಎಡರಂಗದಿಂದ ಸಿಪಿಎಂ ಮುಖಂಡ ವಿ.ಶಿವನ್ ಕುಟ್ಟಿ ಸ್ಪರ್ಧಿಸುತ್ತಿದ್ದಾರೆ. ಈ ಮೂವರು ಅಭ್ಯರ್ಥಿಗಳ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ತ್ರಿಕೋನ ಸ್ಪರ್ಧೆ ನಡೆಯಲಿರುವ ಈ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
2016 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲೇ ಪ್ರಥಮವಾಗಿ ತಾವರೆ ಅರಳಿತ್ತು. ಬಿಜೆಪಿಯ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಒ.ರಾಜಗೋಪಾಲ್ ಅವರು ಗೆಲುವು ಸಾಧಿಸಿದ್ದರು. ಒ.ರಾಜಗೋಪಾಲ್ 67,813 ಮತಗಳನ್ನು, ಸಿಪಿಎಂನ ಎ.ಶಿವನ್ ಕುಟ್ಟಿ 59,142, ಐಕ್ಯರಂಗದ ಅಭ್ಯರ್ಥಿ ಸುರೇಂದ್ರನ್ ಪಿಳ್ಳೆ 13860 ಮತಗಳನ್ನು ಪಡೆದಿದ್ದರು. ಅನಂತರದ ಲೋಕಸಭೆ ಮತ್ತು ಪಂಚಾಯತ್ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯೇ ಮೊದಲ ಸ್ಥಾನ ಉಳಿಸಿಕೊಂಡಿದೆ.
ತಿರುವನಂತಪುರಂ ಸೆಕ್ರೆಟರಿಯೇಟ್‌ನಿಂದ 9 ಕಿ.ಮೀ. ದೂರವಿರುವ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ 21 ಕಾರ್ಪರೇಶನ್ ವಾರ್ಡ್‌ಗಳಿವೆ. ಇದರಲ್ಲಿ 14 ವಾರ್ಡ್‌ಗಳು ಬಿಜೆಪಿಯ ಕೈಯಲ್ಲಿದ್ದರೆ, ಬಾಕಿ 7 ವಾರ್ಡ್‌ಗಳು ಸಿಪಿಎಂ ಕೈಯಲ್ಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ-ಸಿಪಿಎಂ ಮಧ್ಯೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ನೇತಾರ ಕೆ.ಮುರಳೀಧರನ್ ಸ್ಪರ್ಧಿಸುತ್ತಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ರಾಜ್ಯದಲ್ಲಿ ಪ್ರಪ್ರಥಮವಾಗಿ ತಾವರೆ ಅರಳಿದ ನೇಮಂ ಬಿಜೆಪಿ ಉಳಿಸಿಕೊಳ್ಳುವುದೇ, ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಸಿಪಿಎಂ ಈ ಕ್ಷೇತ್ರವನ್ನು ಕಸಿದುಕೊಳ್ಳುವುದೇ, ಕಾಂಗ್ರೆಸ್ ಗೆಲುವು ಸಾಧಿಸುವುದೇ ಎಂಬುದು ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್ ನ ಸ್ವೀಪರ್ ಪತ್ನಿಯೇ ಬ್ಲಾಕ್ ನ ಮುಖ್ಯಸ್ಥೆಯಾಗಿ ಅಧಿಕಾರ
ಮಂಜೇಶ್ವರ ವಿಧಾನಸಭಾ ಕ್ಷೇತ್ರ : ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ
ಕಾಸರಗೋಡು ವಿಧಾನಸಭಾ ಕ್ಷೇತ್ರ ಮುಸ್ಲಿಂಲೀಗ್‌ನ ಭದ್ರಕೋಟೆ: ಈ ಬಾರಿ ತ್ರಿಕೋನ ಸ್ಪರ್ಧೆ
ಕೇರಳ ಅಖಾಡ: ಕೋನ್ನಿ ಕ್ಷೇತ್ರ-ಐಕ್ಯರಂಗ, ಎಡರಂಗ ಕೋಟೆಯೊಳಗೆ ಕಮಲ ಅರಳುತ್ತಾ?
ಕೇರಳ ಅಖಾಡ: ಸೋಲಿಲ್ಲದ ಸರದಾರ…12ನೇ ಬಾರಿಯೂ ಚಾಂಡಿ ದಾಖಲೆಯ ಜಯ ಸಾಧಿಸುತ್ತಾರಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.