‌ಅಂದು ಗಂಡನ ದೌರ್ಜನ್ಯ ತಾಳದೆ ಸಾಯಲು ಹೊರಟವಳು ಇಂದು ಮಹಿಳಾ ಪೊಲೀಸ್‌ ಅಧಿಕಾರಿ

ಸುಹಾನ್ ಶೇಕ್, Jan 7, 2023, 5:30 PM IST

thum

ಸಾಧಿಸುವ ಛಲವಿದ್ದರೆ ಯಾವ ಕಷ್ಟಗಳಿದ್ದರೂ ಅದನ್ನು ‌ಮೀರಿಸಿ ನಿಲ್ಲುವುದು ಅಸಾಧ್ಯವಲ್ಲ. ಇದು ಮಾತಿನಲ್ಲಿ ಹೇಳುವಷ್ಟರ ಮಟ್ಟಿಗೆ ಸುಲಭವಲ್ಲ. ಈ ದಾರಿಯಲ್ಲಿ ‌ಸಾಗಿ ಬಂದವರೆಲ್ಲಾ ಇಂದು ಮಾದರಿ ವ್ಯಕ್ತಿತ್ವವಾಗಿ ನಮ್ಮ ಮುಂದೆ‌ ನಿಂತಿದ್ದಾರೆ.

ಸಾಧಕರ ವ್ಯಕ್ತಿತ್ವದಲ್ಲಿ ಕೋಜಿಕ್ಕೋಡ್ ನ 31 ವರ್ಷದ ನೌಜಿಶಾ ಕೂಡ ಒಬ್ಬರು. ಬಾಲ್ಯದಿಂದಲೇ ಕಲಿಯುವುದರಲ್ಲಿ ಮುಂದಿದ್ದ ನೌಜಿಶಾ ಎಂಸಿಎ ಪದವೀಧರೆ. ಕಲಿಕೆಯ‌ ಬಳಿಕ ಊರಲ್ಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನೌಜಿಶಾ ಅವರಿಗೆ‌‌ ಮದುವೆ ನಿಶ್ಚಯವಾಗುತ್ತದೆ. ಮದುವೆ‌ ನಿಶ್ಚಯವಾಗುವ ವೇಳೆಯೇ ಗಂಡನ‌ ಮನೆಯವರಲ್ಲಿ ಹಾಗೂ ಭಾವಿ ಪತಿಯ ಬಳಿ ತಾನು ಮದುವೆಯ‌ ಬಳಿಕವೂ ಕೆಲಸಕ್ಕೆ‌‌ ಹೋಗಬೇಕೆನ್ನುವ ತನ್ನ ‌ಮನದಾಸೆಯನ್ನು ಹೇಳುತ್ತಾರೆ.

ಮದುವೆಯ ವೇಳೆ ಭಾವಿ‌ ಪತಿ ನೌಜಿಶಾಳ‌ ಎಲ್ಲಾ ಇರಾದೆಗಳಿಗೆ ಆಯಿತೆಂದು ಹೇಳಿ‌ ಮದುವೆಯಾಗುತ್ತಾರೆ. ತನ್ನ ಗಂಡ ನನ್ನ ಕನಸಿಗೆ ಬಣ್ಣ ಬಳಿದು, ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದು ಎಲ್ಲಾ ಹೆಣ್ಣು ‌ಮಕ್ಕಳಂತೆ ಅಂದುಕೊಂಡಿದ್ದ ನೌಜಿಶಾಳಿಗೆ ಜೀವನದಲ್ಲಿ ಎಂದು ಕಾಣದ ಕಷ್ಟದ ದಿನಗಳು ಶುರುವಾಗುತ್ತದೆ.

ಕೆಲಸಕ್ಕೆ ಹೋಗಬೇಕೆಂದು ಹೇಳುತ್ತಿದ್ದಾಗ ಗಂಡ ಸಿಟ್ಟು ಮಾಡಿಕೊಂಡು‌ ಹೊಡೆಯುತ್ತಿದ್ದರು.‌ ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಗಂಡ ಎಷ್ಟು ಕ್ರೂರಿ‌ ಎನ್ನುವುದು ಅರಿವಾಗುತ್ತದೆ. ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ದೈಹಿಕ ದೌರ್ಜನ್ಯ, ಮಾನಸಿಕ ಹಿಂಸೆ ತಾಳಲಾರದೆ ನೌಜಿಶಾ ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ಬಾವಿಗೆ ಹಾರಲು ಹೋಗುತ್ತಾರೆ. ಇನ್ನೇನು ಎಲ್ಲಾ ದೌರ್ಜನ್ಯದಿಂದ ಮುಕ್ತಳಾಗಿ ಇಹಲೋಕ ತ್ಯಜಿಸಬೇಕೆನ್ನುವಾಗಲೇ ಕೈ ಕಾಲು ಅಲುಗಾಡಿ, ಬಾವಿ ಹತ್ತಿರದಿಂದ ದೂರ ಸರಿದು ವಾಪಾಸು ಬರುತ್ತಾರೆ.

ಮೂರುವರೆ ವರ್ಷದ ಬಳಿಕ ನೌಜಿಶಾ ತನ್ನ ಮಗನೊಂದಿಗೆ ಗಂಡನ ಮನೆಗೆ ಮತ್ತೆಂದು ಹೋಗಬಾರದೆನ್ನುವ ನಿರ್ಧಾರದೊಂದಿಗೆ ತವರಿಗೆ ಮರಳುತ್ತಾರೆ. ಏನಾದರೂ ಜೀವನದಲ್ಲಿ ಮಾಡಬೇಕೆಂದು ಮತ್ತೆ ನೌಜಿಶಾ ಕಾಲೇಜುವೊಂದರಲ್ಲಿ ಶಿಕ್ಷಕಿಯಾಗಿ ಸೇರಿಕೊಳ್ಳುತ್ತಾರೆ. ಕಾಲೇಜು ಮುಗಿದ ಬಳಿಕ ಕೇರಳ ಸಾರ್ವಜನಿಕ ಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಕೋಚಿಂಗ್ ತರಗತಿ ಹೋಗುತ್ತಾರೆ. ಕೆಲವು ಸಮಯದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಹೆಚ್ಚಿನ ತಯಾರಿ ನಡೆಸಬೇಕೆನ್ನುವ ಉದ್ದೇಶದೊಂದಿಗೆ ಟೀಚಿಂಗ್ ‌ಕೆಲಸ ಬಿಡುತ್ತಾರೆ. ಇದೇ ವೇಳೆ ವಿಚ್ಛೇದನಕ್ಕೆ ಅರ್ಜಿಯೂ ಸಲ್ಲಿಸುತ್ತಾರೆ.

ಮುಂದಿನ ವರ್ಷ, ನೌಜಿಶಾ ಎರ್ನಾಕುಲಂ ಜಿಲ್ಲೆಯ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಕೆಪಿಎಸ್‌ಸಿ ಪೂರಕ ಪಟ್ಟಿಯಲ್ಲಿ ಸ್ಥಾನ ಪಡೆದರು. ಕಾಸರಗೋಡಿನ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ (ಡಬ್ಲ್ಯುಸಿಪಿಒ) ಹುದ್ದೆಗೆ ದೈಹಿಕ ಪರೀಕ್ಷೆಗೆ ಹೋಗುತ್ತಾರೆ ಆದರೆ ಅಲ್ಲಿ ಅವರು ಫೇಲ್ ಆಗುತ್ತಾರೆ.

ಒಂದು ಬಾರಿ ತೇರ್ಗಡೆ ಆಗದಿದ್ದರೂ, ಮುಂದಿನ ವರ್ಷ ಮತ್ತೆ ಪ್ರಯತ್ನ ಮಾಡಿ ಈ ಬಾರಿ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಹುದ್ದೆಯ ಸಾಲಿನಲ್ಲಿ ರಾಜ್ಯದಲ್ಲೇ 141ನೇ ಶ್ರೇಣಿಯನ್ನು ಪಡೆಯುತ್ತಾರೆ.

ತ್ರಿಶೂರ್‌ನ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿ ಹುದ್ದೆಯ ಅಲ್ಪಸಂಖ್ಯಾತ ಪಟ್ಟಿಯಲ್ಲಿ ಮೊದಲ ರ್ಯಾಂಕ್ ಮತ್ತು ಎರ್ನಾಕುಲಂನಲ್ಲಿ ಎಂಟನೇ ಶ್ರೇಣಿಯನ್ನು ಪಡೆಯುತ್ತಾರೆ.

ಏಪ್ರಿಲ್ 15, 2021 ರಲ್ಲಿ ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿಯಾಗಿ ನೌಜಿಶಾ ಪೊಲೀಸ್ ಇಲಾಖೆಗೆ ನೇಮಕವಾಗುತ್ತಾರೆ. ತನ್ನ ಕುಟುಂಬದ ತನ್ನೊಂದಿಗೆ ಸದಾ ಜೊತೆಯಾಗಿಯೇ ನಿಂತಿತ್ತು. ಯಾವ ಮಹಿಳೆಯೂ ತನ್ನ ಮೇಲಾದ ದೌರ್ಜನ್ಯವನ್ನು ಸಹಿಸಿಕೊಳ್ಳಬಾರದೆನ್ನುತ್ತಾರೆ ನೌಜಿಶಾ.

– ಸುಹಾನ್ ಶೇಕ್

ಟಾಪ್ ನ್ಯೂಸ್

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.