ಕೇರಳ ಚುನಾವಣಾ ಅಖಾಡ: ಈ ಬಾರಿ ಮಂಜೇಶ್ವರ ಯುಡಿಎಫ್ ಕೋಟೆಗೆ ಬಿಜೆಪಿ ಲಗ್ಗೆ ಇಡಲಿದೆಯೇ?
ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ಅವರ ಆತ್ಮವಿಶ್ವಾಸ ವರ್ಧಿಸಿದೆ.
Team Udayavani, Mar 22, 2021, 6:40 PM IST
ಕಾಸರಗೋಡು, ಮಾ.22: ಕುದುರೆ ಏರಿ ಬಂದು ಕೋಟೆಗಳನ್ನು ಕಾಯ್ದ ಜಿಲ್ಲೆ ಕಾಸರಗೋಡು. ಕಾಸರಗೋಡು ಜಿಲ್ಲೆ ಎಲ್‌ಡಿಎಫ್, ಯುಡಿಎಫ್‌ನ ಭದ್ರ ಕೋಟೆಯಾಗಿದೆ. ಕೇರಳದ ಉತ್ತರದಲ್ಲಿರುವ ಮಂಜೇಶ್ವರ, ಜಿಲ್ಲೆಯ ಮಧ್ಯ ಭಾಗದಲ್ಲಿರುವ ಉದುಮ ವಿಧಾನಸಭಾ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ದಿನದಿಂದ ದಿನಕ್ಕೆ ಪ್ರಚಾರದ ಕಾವು ಏರುತ್ತಿದೆ. ಈ ಬಾರಿ ಈ ಕೋಟೆಗೆ ಯಾರು ಲಗ್ಗೆ ಇಡಲಿದ್ದಾರೆ ಎಂಬುದನ್ನು ತಿಳಿಯಲು ಚುನಾವಣೆಯ ಫಲಿತಾಂಶದವರೆಗೆ ಕಾಯಬೇಕು.
ಇದನ್ನೂ ಓದಿ:‘ಮಣಿಕರ್ಣಿಕಾ’ ಚಿತ್ರದ ನಟನೆಗೆ ಕಂಗನಾಗೆ ಒಲಿದ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ
ಕುಂಬಳೆ ಆರಿಕ್ಕಾಡಿ ಕೋಟೆಯಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರವನ್ನು ಕೈವಶಮಾಡಿಕೊಳ್ಳಲು ಎನ್‌ಡಿಎ ಅಭ್ಯರ್ಥಿ ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಚುನಾವಣಾ ಪ್ರಚಾರಕ್ಕೆ ತೆರಳಿದ್ದು ಹೆಲಿಕಾಪ್ಟರ್‌ನಲ್ಲಿ. 2016 ರ ವಿಧಾನಸಭಾ ಚುನಾವಣೆಯಲ್ಲಿ 89 ಮತಗಳ ಅಂತರದಿಂದ ಯುಡಿಎಫ್ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಝಾಕ್ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರನ್ನು ಪರಾಭವಗೊಳಿಸಿದ್ದರು. ಸುರೇಂದ್ರ ಹೆಸರಿನ ಇನ್ನೋರ್ವ ಅಭ್ಯರ್ಥಿ ಪಡೆದ ಮತಗಳು ಕೆ.ಸುರೇಂದ್ರನ್ ಗೆಲುವಿನ ಓಟಕ್ಕೆ ತಡೆಯೊಡ್ಡಿತ್ತು.
ಈ ಬಾರಿ ವಿಜಯ ಖಚಿತ ಎಂಬುದಾಗಿ ಕೆ.ಸುರೇಂದ್ರನ್ ಹೇಳುತ್ತಿದ್ದರೂ, ಪಿ.ಬಿ.ಅಬ್ದುಲ್ ರಝಾಕ್ ನಿಧನದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಎಂ.ಸಿ.ಖಮರುದ್ದೀನ್ 7,923 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್ ಅವರ ಆತ್ಮವಿಶ್ವಾಸ ವರ್ಧಿಸಿದೆ.
1991 ರಿಂದ ನಿರಂತರವಾಗಿ ಎಡರಂಗವನ್ನು ಗೆಲ್ಲಿಸಿರುವ ಬೇಕಲ, ಚಂದ್ರಗಿರಿ ಕೋಟೆಗಳಿರುವ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಐಕ್ಯರಂಗ ಕೆಪಿಸಿಸಿ ಕಾರ್ಯದರ್ಶಿ ಬಾಲಕೃಷ್ಣನ್ ಪೆರಿಯ ಅವರನ್ನು ಕಣಕ್ಕಿಳಿಸಿದೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ನ ಕೆ.ಸುಧಾಕರನ್ ಅವರ ಮುನ್ನಡೆಯನ್ನು ಲೋಕಸಭಾ ಚುನಾವಣೆಯಲ್ಲಿ ಉದುಮ ಕ್ಷೇತ್ರದಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್ ಒಂಬತ್ತು ಸಾವಿರದಷ್ಟು ಮತಗಳನ್ನು ಹೆಚ್ಚು ಪಡದಿದ್ದರು. ಈ ಮತ ಹೆಚ್ಚಳ ಯುಡಿಎಫ್ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಈ ಕ್ಷೇತ್ರದ ಪೆರಿಯ ಕಲೊಟ್‌ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಹತ್ಯೆ ಹಾಗೂ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿರುವುದು ಯುಡಿಎಫ್‌ಗೆ ಅನುಕೂಲಕರವಾಗಿದೆ ಎಂದು ಯುಡಿಎಫ್ ಭರವಸೆ ಹೊಂದಿದೆ. ಆದರೆ 2006 ರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿ ಚೆರ್ಕಳಂ ಅಬ್ದುಲ್ಲ ಅವರನ್ನು ಪರಾಭವಗೊಳಿಸಿದ ನ್ಯಾಯವಾದಿ ಸಿ.ಎಚ್.ಕುಂಞಂಬು ಅವರನ್ನು ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಣಕ್ಕಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉ. ಪ್ರದೇಶದ ಬಾಲಿಯಖೇರಿ ಬ್ಲಾಕ್ ನ ಸ್ವೀಪರ್ ಪತ್ನಿಯೇ ಬ್ಲಾಕ್ ನ ಮುಖ್ಯಸ್ಥೆಯಾಗಿ ಅಧಿಕಾರ
ಮಂಜೇಶ್ವರ ವಿಧಾನಸಭಾ ಕ್ಷೇತ್ರ : ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ
ಕಾಸರಗೋಡು ವಿಧಾನಸಭಾ ಕ್ಷೇತ್ರ ಮುಸ್ಲಿಂಲೀಗ್‌ನ ಭದ್ರಕೋಟೆ: ಈ ಬಾರಿ ತ್ರಿಕೋನ ಸ್ಪರ್ಧೆ
ಕೇರಳ ಅಖಾಡ: ಕೋನ್ನಿ ಕ್ಷೇತ್ರ-ಐಕ್ಯರಂಗ, ಎಡರಂಗ ಕೋಟೆಯೊಳಗೆ ಕಮಲ ಅರಳುತ್ತಾ?
ಕೇರಳ ಅಖಾಡ: ಸೋಲಿಲ್ಲದ ಸರದಾರ…12ನೇ ಬಾರಿಯೂ ಚಾಂಡಿ ದಾಖಲೆಯ ಜಯ ಸಾಧಿಸುತ್ತಾರಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.