Kerala:ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಅರುಣ್ ಕುಮಾರ್ ಆಯ್ಕೆ
ಪಂದಳಂ ಅರಮನೆ ಪ್ರತಿನಿಧಿ ರಿಷಿಕೇಶ್ ವರ್ಮಾ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟಿದ್ದರು.
Team Udayavani, Oct 17, 2024, 4:16 PM IST
ಕೇರಳ(Kerala): ಕೊಲ್ಲಂನ ಶಕ್ತಿಕುಲಂಗರದ ತೊಟ್ಟತ್ತಿಲ್ ಮಠದ ಎಸ್. ಅರುಣ್ ಕುಮಾರ್ (S Arun Kumar Namboothiri) ನಂಬೂದಿರಿ ಅವರನ್ನು ಶಬರಿಮಲೆ ಅಯ್ಯಪ್ಪಸ್ವಾಮಿ (Ayyappa Temple) ದೇವಸ್ಥಾನದ ಮುಖ್ಯ ಅರ್ಚಕರ(ಮೇಲ್ ಶಾಂತಿ)ನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಕೋಝಿಕೋಡ್ ನ ಒಲವನ್ನಾದಲ್ಲಿರುವ ತಿರುಮಂಗಳಾಥು ಇಳಂನ ವಾಸುದೇವನ್ ನಂಬೂದಿರಿ ಅವರನ್ನು ಶಬರಿಮಲೆಯಿಂದ ಕೇವಲ 100 ಮೀಟರ್ ಅಂತರದಲ್ಲಿರುವ ಮಲಿಕಪ್ಪುರಂ ದೇವಿ ದೇವಸ್ಥಾನದ ಮುಖ್ಯ ಅರ್ಚಕರನ್ನಾಗಿ ಆಯ್ಕೆ ಮಾಡಲಾಗಿದೆ.
ಶಬರಿಮಲೆಯ ವಾರ್ಷಿಕ ಮಕರವಿಳುಕ್ಕು ಮತ್ತು ಮಂಡಲ ಪೂಜೆ ಹಿನ್ನೆಲೆಯಲ್ಲಿ ಆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮುಖ್ಯ ಅರ್ಚಕರಾಗಿ ಬುಧವಾರ (ಅ.16) ಅಧಿಕಾರ ಸ್ವೀಕರಿಸಿರುವುದಾಗಿ ವರದಿ ವಿವರಿಸಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಉಷಾ ಪೂಜೆ ನೆರವೇರಿದ ನಂತರ ಸನ್ನಿಧಾನಂನಲ್ಲಿ ಮುಖ್ಯ ಅರ್ಚಕರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಶಬರಿಮಲೆ ಮುಖ್ಯ ಅರ್ಚಕರ ಆಯ್ಕೆ ಪ್ರಕ್ರಿಯೆಯನ್ನು ಪಂದಳಂ ಅರಮನೆ ಪ್ರತಿನಿಧಿ ರಿಷಿಕೇಶ್ ವರ್ಮಾ ನಡೆಸಿಕೊಟ್ಟಿದ್ದರು.
ಮಲಿಕಪ್ಪುರಂನಲ್ಲಿ ಮುಖ್ಯ ಅರ್ಚಕರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪಂದಳಂ ಅರಮನೆಯ ಬಾಲ ಪ್ರತಿನಿಧಿ ವೈಷ್ಣವಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟಿದ್ದರು.
ಮುಖ್ಯ ಅರ್ಚಕರ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್, ಸದಸ್ಯರಾದ ಎ.ಅಜಿಕುಮಾರ್, ಜಿ.ಸುಂದರೇಶನ್, ದೇವಸ್ವಂ ಕಮಿಷನರ್ ಸಿ.ವಿ.ಪ್ರಕಾಶ್, ಸ್ಪೆಷಲ್ ಕಮಿಷನರ್ ಆರ್.ಜಯಕೃಷ್ಣನ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.