ಕೇರಳದಲ್ಲಿ ವೆಡ್ಡಿಂಗ್ ಫೋಟೋ ಶೂಟ್‌ಗಳಿಗೆ ಬಾಡಿಗೆಗೆ ಸಿಗಲಿವೆಯಂತೆ ಕೆಎಸ್‌ಆರ್‌ಟಿಸಿ ಬಸ್
Team Udayavani, Oct 29, 2020, 5:42 PM IST
ತಿರುವನಂತಪುರಂ : ಸದ್ಯ ದೇಶದೆಲ್ಲೆಡೆ ಫೋಟೋ ಶೂಟ್ ಕ್ರೇಜ್ ಹೆಚ್ಚಾಗುತ್ತಿದೆ. ಇದರೊಂದಿಗೆ ಹೇಗೆ ಕ್ರಿಯಾತ್ಮಕ ಹಾಗೂ ಆಕರ್ಷಕವಾಗಿ ಫೋಟೋ ತೆಗೆಯುವ ಫೋಟೋ ಗ್ರಾಫರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಾಯೇ ಅಷ್ಟೇ ಜನಪ್ರಿಯತೆ ಫೋಟೋ ಶೂಟ್ ಮಾಡುವ ಸ್ಥಳಗಳಿಗೆ ದಕ್ಕುತ್ತಿದೆ.
ಈ ಹಿನ್ನಲೆಯಲ್ಲಿಯೇ ಕೇರಳದಲ್ಲಿ ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಬಹಳ ಜನಪ್ರಿಯವಾಗಿದೆ. ಇದನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ. ಡಬಲ್ ಡೆಕ್ಕರ್ ಬಸ್‌ಗಳನ್ನು ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್‌ಗಳಿಗೆ ಬಾಡಿಗೆಗೆ ನೀಡುತ್ತೇವೆ ಎದು ಕೆಎಸ್‌ಆರ್‌ಟಿಸಿ ಘೋಷಿಸಿದೆ.
ಅಕ್ಟೋಬರ್ 21ರಿಂದಲೇ ಇ ಬಾಡಿಗೆ ಸೇವೆ ಆರಂಭ
2021ರ ಜನವರಿ 18ರಂದು ವಿವಾಹವಾಗಲಿರುವ ಗಣೇಶ್ ಮತ್ತು ಲಕ್ಷ್ಮೀ ಡಬಲ್ ಡೆಕ್ಕರ್ ಬಸ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಮೊದಲ ಜೋಡಿಯಾಗಿದ್ದಾರೆ. ಅಲ್ಲದೇ ಅವರ ಈ ಫೋಟೋ ಶೂಟ್‌ಗೆ ಅಗಾಧ ಪ್ರತಿಕ್ರಿಯೆ ಕೇಳಿ ಬಂದಿದ್ದು, ಬಸ್ ಬಾಡಿಗೆಗೆ ನೀಡಲು ಪ್ರೋತ್ಸಾಹ ನೀಡಿದೆ.
ಇದನ್ನೂ ಓದಿ:ಅಡುಗೆ ಮಾತ್ರವಲ್ಲ…ಕಬ್ಬಿಣಾಂಶ ಹೊಂದಿರುವ ಜೀರಿಗೆ ಹಲವು ಔಷಧೀಯ ಗುಣ ಹೊಂದಿದೆ!
ಅಕ್ಟೋಬರ್ 21ರಂದು ಮೊದಲ ಫೋಟೋ ಶೂಟ್ ನಡೆದಿದ್ದು, ಬಳಿಕ ಜನರು ಬಸ್ ಬಾಡಿಗೆ ವಿಚಾರವಾಗಿ ಕರೆ ಮಾಡುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಹೆಚ್ಚುವರಿ ನಿರ್ದೇಶಕ ಜಿ. ಅನಿಲ್ ಕುಮಾರ್ ಹೇಳಿದ್ದಾರೆ.
4 ಸಾವಿರಕ್ಕೆ ಬಾಡಿಗೆ
ಪ್ರಸ್ತುತ ರಾಜ್ಯ ರಾಜಧಾನಿಯಲ್ಲಿ 8 ಗಂಟೆಗಳ ಕಾಲ, 50 ಕಿ. ಮೀ. ಸಂಚಾರ ನಡೆಸಿ ಫೋಟೋ ಶೂಟ್ ನಡೆಸಲು ಬಸ್ ಬಾಡಿಗೆಗೆ ಲಭ್ಯವಿದೆ. ದರ 4 ಸಾವಿರ ರೂ. ಎಂದು ನಿಗದಿ ಮಾಡಲಾಗಿದೆ. ಫೋಟೋ ಶೂಟ್‌ಗಾಗಿ ಬಸ್‌ನಲ್ಲಿ ಕೆಲವು ಬದಲಾವಣೆ ಮಾಡಲು ಒಪ್ಪಿಗೆ ನೀಡಲಾಗಿದೆ. ಡಿಸೆಂಬರ್ನಲ್ಲಿ ಬಸ್ ಬುಕ್ ಮಾಡಿದವರಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಫೋಟೋ ಶೂಟ್ ನಡೆಸಲು ಬಸ್ ಬುಕ್ ಮಾಡಲು ಅಥವಾ ಆರ್ಡರ್ ಸಿಗಲು ಸಹಾಯ ಮಾಡುವ ಏಜೆಂಟರಿಗೆ ಕಮೀಷನ್ ಕೊಡಲಾಗುತ್ತಿದೆ.
ಹುಟ್ಟು ಹಬ್ಬದ ಪಾರ್ಟಿಗಳಿಗೂ ಸಿಗಲಿದೆ ರೆಡ್ ಬಸ್
ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಮಾತ್ರವಲ್ಲ ಹುಟ್ಟು ಹಬ್ಬದ ಪಾರ್ಟಿಗಳಿಗೆ ಬಸ್ ಬಾಡಿಗೆ ನೀಡಲು ಸಹ ತೀರ್ಮಾನಿಸಲಾಗಿದೆ. ಜನರಿಂದ ಬರುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.