ಕೇರಳ ನರಬಲಿ ಪ್ರಕರಣದ ಹಿಂದಿದೆ ಹಲವು ನಿಗೂಢ ಸಂಗತಿ; ಆರೋಪಿ ಶಫಿ ವಿಕೃತಕಾಮಿ, ಅಂಗಾಂಗ ಸೇವನೆ?
ಮೇಲ್ನೋಟಕ್ಕೆ ಇದೊಂದು ನರಭಕ್ಷಕತನದ ಪ್ರಕರಣದಂತೆ ಇದ್ದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
Team Udayavani, Oct 12, 2022, 3:31 PM IST
ಎರ್ನಾಕುಳಂ:ಕೇರಳದ ಪತನಂತಿಟ್ಟ ಜಿಲ್ಲೆಯಲ್ಲಿ ಆರ್ಥಿಕ ಮುಗ್ಗಟ್ಟು ಪರಿಹಾರದ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟ ನಂತರ ಶವದ ಅಂಗಾಂಗಳನ್ನು ತಿಂದಿರುವ ಸಾಧ್ಯತೆ ಇದ್ದಿರುವುದಾಗಿ ಕೊಚ್ಚಿ ಪೊಲೀಸರು ಬುಧವಾರ ಆರೋಪಿಸಿದ್ದಾರೆ.
ಇದನ್ನೂ ಓದಿ:ಇರಾನ್ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಅರೆ ಬೆತ್ತಲಾಗಿ ಪ್ರತಿಭಟಿಸಿದ ನಟಿ
ನರಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆದರೆ ಯಾವುದೂ ಈವರೆಗೂ ಖಚಿತವಾಗಿಲ್ಲ ಎಂದು ಕೊಚ್ಚಿ ಪೊಲೀಸ್ ವರಿಷ್ಠಾಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಪ್ರಮುಖ ಆರೋಪಿ ಶಫಿ ವಿಕೃತಕಾಮಿಯಾಗಿದ್ದ ಎಂದು ವಿವರ ನೀಡಿರುವುದಾಗಿ ವರದಿಯಾಗಿದೆ.
ಕೊಚ್ಚಿಯಲ್ಲಿ ಲಾಟರಿ ಮಾರಿ ಜೀವಿಸುತ್ತಿದ್ದ ರೋಸ್ಲಿನ್(50ವರ್ಷ) ಮತ್ತು ಪದ್ಮಾ (52) ಎಂಬವರು ಕ್ರಮವಾಗಿ ಜೂನ್, ಸೆಪ್ಟೆಂಬರ್ ನಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು.
ಯಾರೀತ ಹಂತಕ, ವಿಕೃತಕಾಮಿ ಮೊಹಮ್ಮದ್ ಶಫಿ?
ಭಗವಂತ್ ಸಿಂಗ್ ಮತ್ತು ಲೈಲಾ ದಂಪತಿಗೆ ಆರ್ಥಿಕ ಮುಗ್ಗಟ್ಟು ಬಾಧಿಸುತ್ತಿತ್ತು. ಹೀಗಾಗಿ ದೇವರ ಸಂಪ್ರೀತಿ ಗಳಿಸುವ ನಿಟ್ಟಿನಲ್ಲಿ ನರಬಲಿ ಕೊಡುವ ನಿರ್ಧಾರಕ್ಕೆ ಬಂದಿದ್ದು, ಇದಕ್ಕೆ ರಶೀದ್ ಅಲಿಯಾಸ್ ಮೊಹಮ್ಮದ್ ಶಫಿ ಈ ದಂಪತಿಗೆ ನೆರವಾಗಿದ್ದ.
ನರಬಲಿ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಶಫಿ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಎರಡು ವರ್ಷಗಳ (2020ರ ಆಗಸ್ಟ್ 5) ಹಿಂದೆ ಪುಥೆನ್ ಕ್ರುಝ್ ಎಂಬಲ್ಲಿ ಹಿರಿಯ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಶಫಿ ಬಂಧನಕ್ಕೊಳಗಾಗಿದ್ದ. ಲಾರಿ ಚಾಲಕನಂತೆ ಪೋಸ್ ಕೊಟ್ಟಿದ್ದ ಶಫಿ ಮಹಿಳೆ ದೇಹದ ಮೇಲೆ ಹಲವು ಗಾಯ ಮಾಡಿದ್ದ. ಈ ಪ್ರಕರಣದಲ್ಲಿ ಶಫಿ, ಮಹಿಳೆ ಸೇರಿದಂತೆ ಮೂವರು ಬಂಧನಕ್ಕೊಳಗಾಗಿದ್ದು, ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವುದಾಗಿ ವರದಿ ವಿವರಿಸಿದೆ.
ಬ್ಲ್ಯಾಕ್ ಮ್ಯಾಜಿಕ್ (ಮಂತ್ರವಾದಿ) ರೀತಿ ಪೋಸ್ ಕೊಟ್ಟು ಹಲವು ಕೊಲೆ ಪ್ರಕರಣಗಳಲ್ಲಿ ಶಫಿ ಶಾಮೀಲಾಗಿದ್ದಾನೆ. ತಿರುವಲ್ಲಾದಲ್ಲಿನ ಪ್ರಕರಣದಲ್ಲಿಯೂ ಶಫಿ ಇಬ್ಬರು ಮಹಿಳೆಯರಿಗೆ ಅಶ್ಲೀಲ ಸಿನಿಮಾಗಳಲ್ಲಿ ನಟಿಸುವ ಆಮಿಷವೊಡ್ಡಿ ಭಗವಂತ್ ಸಿಂಗ್ ಮತ್ತು ಲೈಲಾ ಮನೆಗೆ ಕರೆತಂದಿದ್ದ. ಅಲ್ಲಿ ಅವರನ್ನು ಬಲವಂತವಾಗಿ ಕಟ್ಟಿಹಾಕಿ, ಅವರ ದೇಹದ ಭಾಗಗಳನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹಾಕಲಾಗಿತ್ತು ಎಂದು ಕೊಚ್ಚಿ ಪೊಲೀಸ್ ಆಯುಕ್ತ ನಾಗರಾಜು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದೊಂದು ನರಭಕ್ಷಕತನದ ಪ್ರಕರಣದಂತೆ ಇದ್ದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಶಫಿ ಕೊಚ್ಚಿಯಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ಮುಖಂಡನಾಗಿದ್ದಾನೆ ಎಂದು ವರದಿ ತಿಳಿಸಿದೆ. ಪೆರುಂಬಾವೂರ್ ನಿವಾಸಿಯಾಗಿರುವ ಶಫಿಯನ್ನು ರಶೀದ್ ಎಂದು ಕರೆಯಲಾಗುತ್ತಿದೆ.
ಕಳೆದ ಒಂದು ವರ್ಷದಿಂದ ಶಫಿ ಎರ್ನಾಕುಲಂನಲ್ಲಿನ ಗಾಂಧಿನಗರದಲ್ಲಿ ವಾಸವಾಗಿದ್ದಾನೆ, ಈತನ ಬಳಿ ಬಸ್, ಜೀಪ್ ಸೇರಿದಂತೆ ನಾಲ್ಕು ವಾಹನಗಳಿವೆ. ಈ ಹಿಂದೆ ಕಲಮಶ್ಶೇರಿಯಲ್ಲಿನ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಶಫಿ ಬಂಧನಕ್ಕೊಳಗಾಗಿದ್ದ. ಈತ ಭಾಗಿಯಾಗಿರುವ ಹಲವು ನಿಗೂಢ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.