ಯಕೃತ್ ಕ್ಯಾನ್ಸರ್‌ಗೆ ಗಣಿಕೆ ಸೊಪ್ಪು ರಾಮಬಾಣ!
Team Udayavani, Nov 6, 2021, 4:15 PM IST
ತಿರುವನಂತಪುರ: ಯಕೃತ್ ಕ್ಯಾನ್ಸರ್ ಚಿಕಿತ್ಸೆಗೆ ನಮ್ಮ ನಿಮ್ಮ ಹಿತ್ತಿಲಲ್ಲೇ ಸಿಗುವ “ಕಾಶಿ ಸೊಪ್ಪು'(ಗಣಿಕೆ ಸೊಪ್ಪು) ರಾಮಬಾಣ ಎಂಬ ಮಹತ್ವದ ಸಂಶೋಧನೆಯೊಂ ದನ್ನು ಇಲ್ಲಿನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ(ಆರ್‌ಜಿಸಿಬಿ)ಯ ಇಬ್ಬರು ವಿಜ್ಞಾನಿಗಳು ಮಾಡಿದ್ದಾರೆ.
ಮನಾಥಕ್ಕಾಲಿ ಎಂದೂ ಕರೆಯಲ್ಪಡುವ ಈ ಗಣಿಕೆ ಸೊಪ್ಪಿನ ಎಲೆಗಳಿಂದ ಹೊರತೆಗೆದ ಸಂಯುಕ್ತವು ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ ಎಂಬುದನ್ನು ಕಂಡುಕೊಳ್ಳಲಾಗಿದೆ. ಮಾನವನ ಯಕೃತ್‌ನಲ್ಲಿ ಕ್ಯಾನ್ಸರ್ ಕೋಶಗಳು ಅನಿಯಂತ್ರಿತವಾಗಿ ಬೆಳೆಯುವುದನ್ನು ತಪ್ಪಿಸುವಲ್ಲಿ ಗಣಿಕೆ ಸೊಪ್ಪಿನ ಎಲೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಈ ಎಲೆಗಳಲ್ಲಿನ ಯುಟ್ರೋಸೈಡ್-ಬಿ ಎಂಬ ಕಣವನ್ನು ಪ್ರತ್ಯೇಕಿಸಿ, ಪರೀಕ್ಷಿಸಿದಾಗ ಯಕೃತ್ತಿನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಇದನ್ನು ಬಳಸಬಹುದು ಎಂಬುದನ್ನು ಕಂಡುಕೊಳ್ಳಲಾಯಿತು ಎಂದು ಆರ್‌ಜಿಸಿಬಿ ಹಿರಿಯ ವಿಜ್ಞಾನಿ ರೂಬಿ ಜಾನ್ ಆ್ಯಂಟೋ ಮತ್ತು ಅವರ ವಿದ್ಯಾರ್ಥಿ ಡಾ| ಲಕ್ಷ್ಮೀ ಆರ್.ನಾಥ್ ಹೇಳಿದ್ದಾರೆ.
ಇವರು ಅಭಿವೃದ್ಧಿಪಡಿಸಿರುವ ಸಂಯುಕ್ತಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಮಹಾನಿರ್ದೇಶನಾಲಯವು “ಆರ್ಫನ್ ಡ್ರಗ್'(ವಾಣಿಜ್ಯಿಕವಾಗಿ ಅಭಿವೃದ್ಧಿಪಡಿಸದ ಔಷಧ) ಎಂಬ ಸ್ಥಾನಮಾನ ನೀಡಿದೆ. ಅಲ್ಲದೆ ಯುಎಸ್‌ಎ, ಕೆನಡಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಈ ಔಷಧಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.