ಕೊಡಚಾದ್ರಿ: ಸ್ವಚ್ಛ ಪರಿಸರಕ್ಕೆ ಭದ್ರತೆಯ ಠೇವಣಿ
ಒಯ್ದ ಎಲ್ಲ ವಸ್ತು ಹಿಂದಕ್ಕೆ ತಂದರೆ ಮಾತ್ರ ಹಣ ವಾಪಸ್, ಇಲ್ಲವಾದರೆ ದಂಡ!
Team Udayavani, Jun 5, 2021, 7:25 AM IST
ಕೊಲ್ಲೂರು : ಇಲ್ಲಿ ಚಾರಣ, ವಿಹಾರ, ಪ್ರವಾಸಕ್ಕೆ ಬರುವವರು ತಾವು ಒಯ್ಯುವ ಪ್ಲಾಸ್ಟಿಕ್ ನೀರಿನ ಬಾಟಲಿ, ಖಾದ್ಯ ಪೊಟ್ಟಣ ಇತ್ಯಾದಿ ಪ್ರತೀ ವಸ್ತುವಿಗೂ ಠೇವಣಿ ಪಾವತಿಸಬೇಕು. ಹಿಂದಿರುಗುವಾಗ ಅವನ್ನು ಎಸೆಯದೆ ಹಿಂದೆ ತಂದಿದ್ದರೆ ಮಾತ್ರ ಠೇವಣಿ ವಾಪಸ್. ಅಲ್ಲೇ ಎಸೆದು ಪರಿಸರ ಮಾಲಿನ್ಯ ಉಂಟುಮಾಡಿದರೆ ದಂಡ, ಜತೆಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ…
-ಇದು ಕೊಡಚಾದ್ರಿಯ ಪಾವಿತ್ರ್ಯದ ಜತೆಗೆ ಅಲ್ಲಿ ಪರಿಸರ ನೈರ್ಮಲ್ಯವನ್ನು ಕಾಪಾಡು ವುದ ಕ್ಕಾಗಿ ಕೊಡ ಚಾದ್ರಿ ಪರಿಸರ ಅಭಿವೃದ್ಧಿ ಸಮಿತಿ ಕಟ್ಟಿನಹೊಳೆ ಮತ್ತು ಕೊಲ್ಲೂರು ವನ್ಯಜೀವಿ ವಲಯ, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇವರ ವಿನೂತನ ಜಂಟಿ ಪ್ರಯತ್ನ. ಪರಿಣಾಮವಾಗಿ ಈಗ ಕೊಡಚಾದ್ರಿ ಪ್ಲಾಸ್ಟಿಕ್ ಮುಕ್ತವಾಗುತ್ತಿದೆ.
ಕಂಡುಕೊಂಡರು ಹೊಸ ಮಾರ್ಗ
ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ, ಆಹಾರ ಪೊಟ್ಟಣ ಇತ್ಯಾದಿ ಅಲ್ಲಲ್ಲಿ ಎಸೆಯುತ್ತಿದ್ದರು. ಇದನ್ನು ನಿಯಂತ್ರಿಸಲು ಮೌಖೀಕವಾಗಿ ತಿಳಿಸಿದ್ದರೂ ಫಲ ನೀಡಿರಲಿಲ್ಲ. ಹೀಗಾಗಿ ಕಟ್ಟಿನಹೊಳೆಯ ಕೊಡಚಾದ್ರಿ ಪರಿಸರ ಅಭಿವೃದ್ಧಿ ಸಮಿತಿ ಯವರು ಕೊಲ್ಲೂರು ವನ್ಯಜೀವಿ ವಲಯ, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಅಧಿಕಾರಿಗಳು, ಸಿಬಂದಿ ಸಹಕಾರದಲ್ಲಿ ಹೊಸ ಮಾರ್ಗ ರೂಪಿಸಿದರು.
ತ್ಯಾಜ್ಯ ಮುಕ್ತ ಕೊಡಚಾದ್ರಿಯಾಗಿ ಪರಿವರ್ತಿಸುವುದರೊಡನೆ ಪ್ರವಾಸಿಗರನ್ನು ಆಕರ್ಷಿಸಲು ಹೆಚ್ಚು ಒತ್ತು ಕೊಡಲು ಅನೇಕ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರ ಸಹಕಾರ ಕೂಡ ಅತೀ ಅಗತ್ಯ.
– ರೂಪೇಶ್ ಚವ್ಹಾಣ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಲ್ಲೂರು ವನ್ಯಜೀವಿ ವಿಭಾಗ
- ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.