ಬರಲಿದೆ “ಜ್ವಾಲಾಮುಖೀ ಇಂಧನ’! ಸ್ವೀಡನ್‌ನ ಕೊಯೆನಿಗ್ಸೆಗ್ ಕಂಪನಿಯ ಹೊಸ ಪರಿಕಲ್ಪನೆ
Team Udayavani, Jun 14, 2021, 7:45 PM IST
ನವದೆಹಲಿ: ಪೆಟ್ರೋಲ್, ಡೀಸೆಲ್ ಹೊರತಾದ ಇಂಧನಗಳನ್ನು ವಾಹನಗಳಲ್ಲಿ ಬಳಸುವ ಬಗ್ಗೆ ಕೆಲವು ದಶಕಗಳಿಂದ ಪ್ರಯತ್ನಗಳು ಸಾಗಿವೆ. ಇದೆಲ್ಲದರ ನಡುವೆ, ಸ್ವೀಡನ್‌ನ ಅತ್ಯಾಧುನಿಕ ಕಾರು ತಯಾರಿಕಾ ಕಂಪನಿಯಾದ ಕೊಯೆನಿಗ್ಸೆಗ್, ಜ್ವಾಲಾಮುಖೀ ಇಂಧನದಿಂದ ಚಲಿಸಬಲ್ಲ ಕಾರೊಂದನ್ನು ತಯಾರಿಸುವುದಾಗಿ ಪ್ರಕಟಿಸಿ ಹೊಸ ಕುತೂಹಲ ಹುಟ್ಟುಹಾಕಿದೆ.
ಯಾವುದೀ ಕಂಪನಿ?
1994ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕೊಯೆನಿಗ್ಸೆಗ್ ಕಂಪನಿ, ಮುಖ್ಯವಾಗಿ ನ್ಪೋರ್ಟ್ಸ್ ಕಾರುಗಳನ್ನು ತಯಾರಿಸುತ್ತದೆ. ಅತ್ಯಾಧುನಿಕವಾದ, ಹಗುರವಾಗಿರುವ ಈ ಕಾರುಗಳ ಬೆಲೆ ಅಂದಾಜು 21 ಕೋಟಿ ರೂ.ಗಳಷ್ಟಿರುತ್ತದೆ! ಹಾಗಾಗಿ, ಈ ಕಾರುಗಳು ಅತಿ ಶ್ರೀಮಂತರಿಗಷ್ಟೇ ಸೀಮಿತ ಎನ್ನುವಂತಾಗಿವೆ. ಆದರೆ, ತಮ್ಮ ಕಂಪನಿಯ ಕಾರುಗಳನ್ನು ಎಲ್ಲಾ ವರ್ಗದವರಿಗೂ ಇಷ್ಟವಾಗುವಂತೆ ಮಾಡಲು ನಿರ್ಧರಿಸಿರುವ ಕಂಪನಿಯ ಮಾಲೀಕ ಕ್ರಿಶ್ಚಿಯನ್ ವೊನ್ ಕೊಯೆನಿಗ್ಸೆಗ್, ಜ್ವಾಲಾಮುಖೀ ಇಂಧನದ ಜೊತೆಗೆ ಹೆಜ್ಜೆಯಿಡಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ:ಭಾರಿ ಮಳೆ : ಗೋವಾ ರಾಜ್ಯಾದ್ಯಂತ ರೆಡ್ ಅಲರ್ಟ ಘೋಷಣೆ..!
ಏನಿದು ಜ್ವಾಲಾಮುಖೀ ಇಂಧನ?
ಈ ತಂತ್ರಜ್ಞಾನ ಆವಿಷ್ಕರಿಸಿದ್ದು ಐಸ್‌ಲ್ಯಾಂಡ್‌ನಲ್ಲಿ. ಭಾಗಶಃ ಸಕ್ರಿಯವಾಗಿರುವ ಅಗ್ನಿಪರ್ವತಗಳಿಂದ ನಿರಂತರವಾಗಿ ಇಂಗಾಲದ ಡೈಆಕ್ಸೆ„ಡ್ ಅನಿಲ ಹೊರಬರುತ್ತಿರುತ್ತದೆ. ಆ ಅನಿಲವನ್ನು ಸಂಗ್ರಹಿಸಿ, ವಿವಿಧ ತಂತ್ರಜ್ಞಾನಗಳಿಂದ ಅದನ್ನು ಮಿಥೈಲ್ ಆಲ್ಕೋಹಾಲ್ ಆಗಿ ಪರಿವರ್ತಿಸಲಾಗುತ್ತದೆ. ಆ ಮಿಥೈಲ್ ಆಲ್ಕೋಹಾಲ್ ಅನ್ನೇ ಕಾರುಗಳಿಗೆ ಇಂಧನವಾಗಿ ಬಳಸಲಾಗುತ್ತದೆ. ಈ ರೀತಿ, ಇಂಗಾಲದ ಡೈ ಆಕ್ಸೆ„ಡ್‌ನಿಂದ ಮಿಥೈಲ್ ಆಲ್ಕೋಹಾಲ್‌ಗೆ ಪರಿವರ್ತಿತಗೊಂಡ ಇಂಧನವು ಪರಿಸರ ಸ್ನೇಹಿ ಎಂದು ಪರಿಗಣಿಸಲ್ಪಟ್ಟಿದೆ. ಮಾತ್ರವಲ್ಲ, ಇತರ ಪರಿಸರ ಸ್ನೇಹಿ ಇಂಧನಗಳಿಗೆ ಹೋಲಿಸಿದೆ ಇದರಿಂದ ಹೊರಬರುವ ಇಂಗಾಲ ಸಂಬಂಧಿತ ಕಣಗಳ ಪ್ರಮಾಣ ಶೂನ್ಯ ಎಂದು ಹೇಳಲಾಗಿದೆ. ಹಾಗಾಗಿ, ಇದನ್ನು ಝೀರೋ ಪೊಲ್ಯೂಟೆಂಟ್ ಎಂದೂ ಪರಿಗಣಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕದನ ವಿರಾಮ: 3 ಒತ್ತೆಯಾಳುಗಳ ಬಿಡುಗಡೆ ಬೆನ್ನಲ್ಲೇ 90 ಕೈದಿಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
Israel-Hamas;ಅಂತೂ ಕದನ ವಿರಾಮ ಜಾರಿ: ಮೂವರು ಇಸ್ರೇಲಿಗರ ಬಿಡುಗಡೆ
Davos; ಇಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಆರಂಭ
Donald Trump ಪ್ರಮಾಣವಚನ: ಭೋಜನಕೂಟದಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿ
America: ಟ್ರಂಪ್ ಪ್ರಮಾಣದ ಬೆನ್ನಲ್ಲೇ ಅಕ್ರಮ ವಲಸಿಗರು ಹೊರಕ್ಕೆ?
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.